ಸತ್ಯಕ್ಕೆ ಜಯ ಸಿಕ್ಕಿದೆ : ಮುಂಡ್ರಿಗಿ ನಾಗರಾಜ್

0
623

BP NEWS: ಬಳ್ಳಾ‌ರಿ: ಆಗಸ್ಟ್ .04: ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೇಸ್  ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ‌ ಜಿಲ್ಲಾ ಪಂಚಾಯತ್ ಸದಸ್ಯರಾದ ಮುಂಡ್ರಿಗಿ ನಾಗರಾಜ್ ಕಾಂಗ್ರೆಸ್ ಅಧಿನಾಯಕ ರಾಹುಲ್‌ ಗಾಂಧಿಯವರ ಅವರ ಸಂಸತ್ ಸದಸ್ಯತ್ವವನ್ನು ರದ್ದು ಮಾಡಿಸಿದ್ದ ಬಿಜೆಪಿಯ ಹುನ್ನಾರಕ್ಕೆ ಇಂದು ಭಾರೀ ಹಿನ್ನೆಡೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದಾನಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾತ್ರವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷದ ಅಧಿನಾಯಕ ಶ್ರೀ ರಾಹುಲ್ ಗಾಂಧೀಜಿ ಅವರ ಮೇಲೆ ಮಾನನಷ್ಟ ಮೊಕದ್ದಮೆಯ ಆರೋಪದಡಿಯ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ನೀಡಿದ್ದ 2ವರ್ಷಗಳ ಜೈಲು ಶಿಕ್ಷೆ ಮತ್ತು ಸಂಸತ್ ಸದಸ್ಯತ್ವ ರದ್ದತಿಗೆ ಇಂದು ಸುಪ್ರೀಂ ಕೋರ್ಟ್ ತಡೆ ನೀಡಿದ್ದು ಸ್ವಾಗತಾರ್ಹ.


ಈ ತೀರ್ಪಿನಿಂದ ಸತ್ಯಕ್ಕೆ ಜಯ ಸಿಕ್ಕಿದ್ದು ಸಂವಿಧಾನದ ಅಂಗಗಳಾದ ನ್ಯಾಯಾಂಗ,
ಶಾಸಕಾಂಗ ಮತ್ತು ಕಾರ್ಯಾಂಗಗಳ ಮೇಲೆ ಸಂಪೂರ್ಣ ನಂಬಿಕೆ ಮತ್ತು ಭರವಸೆ ಇಟ್ಟಿರುವ ಕಾಂಗ್ರೆಸ್
ಪಕ್ಷಕ್ಕೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ. ಇಂದು ರಾಹುಲ್ ಗಾಂಧೀಜಿ ರವರ ಸಂಸತ್ ಸ್ಥಾನ ಮರಳಿದ್ದು ಇದು ಕೇವಲ ಅವರ ಗೆಲುವು ಮಾತ್ರವಲ್ಲದೆ ಸಂಪೂರ್ಣ ಪ್ರಜಾಪ್ರಭುತ್ವದ ಗೆಲುವಾಗಿದೆ ಎಂದು ಅಭಿಪ್ರಾಯ ಪಟ್ಡಿದ್ದಾರೆ‌.

LEAVE A REPLY

Please enter your comment!
Please enter your name here