BP NEWS: ವರದಿ ಗಣೇಶ್ ಮಾಂಡ್ರೆ: ಬೆಂಗಳೂರು: ಆಗಸ್ಟ್.03: ಅದೊಂದು ಬಿಸಿಲಿನಿಂದ ತುಂಬಿದ ಊರು ಸಿಂಧನೂರು. ಪ್ರತಿ ಮನೆ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಅವರಿಗೆ ಸಿಹಿ ಕಹಿ ಸುದ್ದಿ ತಿಳಿಸುವುದೇ ಅವರ ಕಾಯಕ. ಅಂಚೆ ಇಲಾಖೆಯಿಂದ ಬಂದ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವುದೇ ಅವರ ವೃತ್ತಿ. ಸರಕಾರಿ ಪಿಂಚಣಿ ಪಡೆಯುವ ಆ ಊರಿನ ಪ್ರತಿಯೊಬ್ಬರಿಗೂ ವೃದ್ದರಿಗೂ ಇವರದೇ ಆಶಾಭಾವ ವಯಸ್ಸಾದ ವೃದ್ದರಿಗಂತೂ ನನಗೆ ಹಣ ಬಂತಾ. ಸರಕಾರಿ ಹಣ ನನಗೆ ತುಂಬಾ ಅಗತ್ಯವಿತ್ತು. ಎಮ್ ಓ ಹಣ ತಲುಪಿಸಿದ್ದಕ್ಕೆ ನಿಮಗೆ ಪುಣ್ಯ ಬರಲಿ. ನೀವು ಸ್ವಲ್ಪ ಮಜ್ಜಿಗೆ ಕುಡಿಯರಿ ನಿಮ್ಮ ಹೆತ್ತವರ ಹೊಟ್ಟೆ ತಂಪಾಗಿರಲಿ ನಿಮ್ಮ ಮಕ್ಕಳ ಬಾಳು ಚೆಂದ ಇರಲಿ ಎಂದು ಅದೆಷ್ಟೋ ವೃದ್ಧ ಮುದುಕ – ಮುದಕಿಯರ ಆರ್ಶೀವಾದ ಪ್ರೀತಿ ಹಾರೈಕೆಗಳಿದ್ದು ಅವರ ಪುಣ್ಯ.
ಇದೇನು ಅಂಚೆ ಕಛೇರಿ ಪೋಸ್ಟ್ ಮನ್ ಮಾಡುವ ಕೆಲಸ ಇದ್ದಂಗೆ ಇದೆಯಲ್ಲಾ ಅಂದು ಕೊಂಡಿದ್ದಿರಾ, ಹೌದು. ಇದು ಅಂತ ವೃತ್ತಿ ಮಾಡುತ್ತಾ ಉನ್ನತ ವಿದ್ಯಾಭ್ಯಾಸ ಕೊಡಿಸಿ, ತಮ್ಮ ಮಕ್ಕಳು ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಂತೆ ಮಾಡಿದ ದಂಪತಿಗಳ ಸಾಧನೆಯ ಕತೆ ಇದು.
ಅವರದ್ದು ಮಧ್ಯಮ ವರ್ಗದ ಕುಟುಂಬ. ಧಾರಾವಾಡ ಜಿಲ್ಲೆಯ ಗೌಡಗೆರೆಯಲ್ಲಿ ವಾಸವಿದ್ದು, ವೃತ್ತಿ ಅರಸಿ ಬಿಸಿಲು ನಾಡಿನಲ್ಲಿ ಪೋಸ್ಟ್ ಮಾನ್ ವೃತ್ತಿ ಮಾಡಿ ಜೀವನ ಸಾಗಿಸುತ್ತಿರುವ ಅವರ ಮಗ ವಿದೇಶದಲ್ಲಿ ಇಂದು ಉನ್ನತ ಎಂಜಿನಿಯರಿಂಗ್ ಅಧಿಕಾರಿಯಾಗಿದ್ದು ಸಾಸವೇ ಸರಿ..!
ಅವರ ಹೆಸರು ಗಾಯಿತ್ರಿ ಗಂಡ ಪಾಂಡುರಂಗ ಮಗಳು ಚೈತ್ರಾ ಮಗ ವಿನಯ್ . ಚಿಕ್ಕ ಕುಟುಂಬ ವಿನಯನೇ ಈಗ ವಿದೇಶದಲ್ಲಿ ಉನ್ನತ ಹುದ್ದೆ ಪಡೆದು ತಂದೆ- ತಾಯಿಯರ ಕನಸನ್ನು ನನಸು ಮಾಡಿದ್ದಾನೆ.
ವಿನಯ್ ತುಂಬಾ ಮೃದು ಸ್ವಭಾವದ ಚಾಣಾಕ್ಷ ಬುದ್ದಿ ಮತಿ ಹೊಂದಿದ ನವ ಯುವಕ. ಓದಿನಲ್ಲಂತೂ ಮಹಾ ಮೇಧಾವಿ, ಸರಳ, ಸುಂದರ ನಡತೆವುಳ್ಳವನು. ಓದಿ ಮುನ್ನಡೆ ಸಾಧಿಸಬೇಕೆಂಬ ಆಸೆ ಹೊಂದಿದ ವಿದ್ಯಾರ್ಥಿಗಳಿಗೆ ಅವನೊಬ್ಬ ಆದರ್ಶ ವಿದ್ಯಾರ್ಥಿ
ಕೇವಲ 21 ವರ್ಷದಲ್ಲಿ ಪದವಿ ಪೂರ್ಣ ಮಾಡಿ ಪದವಿ ಫಲಿತಾಂಶ ಬಂದ ತಕ್ಷಣವೇ ಜರ್ಮನಿ ದೇಶದ ಪ್ರಸಿದ್ಧ ಸಾಫ್ಟ್ ವೇರ್ ಕಂಪನಿಯಲ್ಲಿ ಸಾಫ್ಟ್ ವೇರ್ ಡೆವಲಪರ್ ಅಧಿಕಾರಿಯಾಗಿದ್ದು ವಿಶೇಷವಾಗಿದೆ. ವೇತನವಂತು ಭಾರತೀಯ ಬೆಲೆಯಲ್ಲಿ ವರ್ಷಕ್ಕೆ 44 ಲಕ್ಷ. ಮಧ್ಯಮ ವರ್ಗದ ಒಬ್ಬ ಹುಡುಗ ವಿದ್ಯಾಭ್ಯಾಸ ಮಾಡಿ ಕೇವಲ 21 ವರ್ಷದಲ್ಲಿಯೇ ನೌಕರಿ ಪಡೆಯುವುದು ಸಾಧ್ಯವೆಂಬುದನ್ನು ಸಾಧಿಸಿದ್ದಾನೆ ವಿನಯ್.
ವಿನಯ್ ತಂದೆ- ತಾಯಿ ಇದಿದ್ದು ಧಾರಾವಾಡ ಜಿಲ್ಲೆಯಾದರೂ ತಾಯಿಯ ವೃತ್ತಿಯಿಂದ ಬಿಸಿಲು ನಾಡಿನಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿದ್ದಾನೆ. ಬಾಲ್ಯದಲ್ಲಿ ತುಂಬಾ ಚುರುಕಾಗಿದ್ದ ವಿನಯ್ ಅಕ್ಕ ಚೈತ್ರಾರೊಂದಿಗೆ ಬೆಳೆದಿದ್ದು ರಾಯಚೂರು ಜಿಲ್ಲೆಯ ಲಿಂಗ ಸೂರಿನಲ್ಲಿ. ಕೇಂಬ್ರಿಡ್ಜ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದನ್ನು ಪ್ರಾರಂಭಿಸಿದ್ದು ವಿಶೇಷವಾಗಿದೆ. ವಿನಯ್ ಒಂದನೆಯ ತರಗತಿಯನ್ನು ತುಂಬಾ ಕಷ್ಟ ಪಟ್ಟು ಓದಿದ್ದಾನೆ ಅಂದರೆ ವಿನಯ್ ಶಾಲೆಯರುವುದು ಲಿಂಗಸೂರು ಪಟ್ಟಣದಲ್ಲಿ ಇವರ ತಾಯಿ ಪೋಸ್ಟ್ ಮಾನ್ ವೃತ್ತಿ ಮಾಡುತ್ತಿರುವುದು ಅಲ್ಲಿಂದ 35 km ದೂರದ ಗೋನಾವಾಟ್ಲ ಎಂಬ ಹಳ್ಳಿಯಲ್ಲಿ. ಹಳ್ಳಿಯಿಂದ ನಿತ್ಯ ಲಿಂಗಸೂರು ಶಾಲೆಗೆ ಬರುವುದು ತುಂಬಾ ಕಷ್ಟ. ವಿನಯ್ ತನ್ನ 6ನೇ ವಯಸ್ಸಿನಲ್ಲಿಯೇ ನಿತ್ಯ ಸರ್ಕಾರಿ ಬಸ್ಸಿನಿಂದ ಬಂದು ಶಾಲೆಯಲ್ಲಿ ವಿದ್ಯಭ್ಯಾಸ ಕಲಿತು ಸಂಜೆ ಮತ್ತೆ ಊರು ಸೇರುವುದು ತುಂಬಾ ಪ್ರಯಾಸದಿಂದ ವಿದ್ಯಾಭ್ಯಾಸವನ್ನು 1 ರಿಂದ 6ನೇ ತರಗತಿವರೆಗೆ ಓದಿದ್ದಾನೆ.
ಅಂತಹ ವಾತಾವರಣದಲ್ಲಿಯೇ ವಿನಯ್ ಬುದ್ದಿ ಚಾತುರ್ಯ ಬೆಳೆದಿದ್ದು ಆಗ ಆ ಶಾಲೆಯ ಮುಖ್ಯೋಪಾಧ್ಯಾಯರೇ ಇವರ ತಂದೆ ಪಾಂಡುರಂಗ ಆ ಶಾಲೆಯ ಅಧ್ಯಕ್ಷರಾದ ಮಾಂತೇಶರವರಿಗಂತೂ ಪ್ರಿಯವಾದ ವಿದ್ಯಾರ್ಥಿಯಾಗಿದ್ದ. ಆಶಾಲೆಯ ಚೇರ್ಮನ್ನರು ತುಂಬಾ ಉನ್ನತವಾದ ವಿದ್ಯಾದಾನ ಮಾಡುವ ವ್ಯವಸ್ಥೆಯನ್ನು ಮಾಡಿದ್ದರು. ಇಂಗ್ಲೀಷ್ ಮೀಡಿಯಂ ಶಾಲೆಯಂದರೆ ಸಂಪೂರ್ಣ ಇಂಗ್ಲೀಷ್ ಭಾಷೆಯಲ್ಲಿಯೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಲಿಯಬೇಕೆಂಬ ಉತ್ಕಟ ಇಚ್ಛೆ ಹೊಂದಿದ್ದರು. ಅದಕ್ಕಾಗಿಯೇ ಇಂಗ್ಲೀಷ್ ಭಾಷೆಯಲ್ಲಿಯೇ ಮಾತನಾಡುವ ಶಿಕ್ಷಕರನ್ನು ನೇಮಿಸಿದ್ದು ವಿಶೇಷಲಾಗಿದೆ. ದೂರದ ನಾಗಲ್ಯಾಂಡ್ ರಾಜ್ಯದ ಇಂಗ್ಲೀಷ್ ಭಾಷೆಯ ನುರಿತ ಶಿಕ್ಷಕರನ್ನು ನೇಮಿಸಿದ್ದರು. ಅಲ್ಲಿಯೇ ವಿನಯನಿಗೆ ಸಂಪೂರ್ಣ ಭಾಷಾಜ್ಞಾನ ಉಂಟಾಗಿದ್ದು ಆಗಾಧವಾದ ಇಂಗ್ಲೀಷ್ ಪದಗಳ ಅರ್ಥ ವಾಕ್ಯಗಳನ್ನು ಅರ್ಥ ಮಾಡಿಕೊಂಡಿದ್ದು. ಆಗಲೇ ಆಶಾಲೆಯ ಚೇರ್ಮನ್ ರು ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಭಾರತ ದೇಶದ ಕೀರ್ತಿಯನ್ನು ಹೆಮ್ಮೆ ಪಡುವಂತೆ ಮಾಡಬೇಕು. ಜೊತೆಗೆ ವಿದೇಶದಲ್ಲಿ ಸಾಧನೆ ಮಾಡಬೇಕು. ಅವರ ಆಶಯದಂತೆ ಇಂದು ವಿದೇಶದಲ್ಲಿ ಉನ್ನತ ಅಧಿಕಾರಿಯಾಗಿದ್ದಾನೆ. 1ನೇ ತರಗತಿಯಲ್ಲಿ ಪ್ರಥಮ Rank ಬಂದಿದ್ದು. 1ನೇ ತರಗತಿಯಲ್ಲಿ ಸೂಟು ಬೂಟು ಹಾಕಿದ್ದ. ಇವರ ತಾತ ರಾಮಚಂದ್ರ ಅಜ್ಜಿ ಶಕುಂತಲ ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಅವರ ಅಜ್ಜ ಮೊಮ್ಮಗನ ವೇಷ ಭೂಷಣ ಕಂಡು ಸಿಹಿ ಹಂಚಿದ್ದು ಈಗ ನೆನಪು ಮಾತ್ರ ಆದರೆ ಅವರ ಸಂತೋಷದ ಕಿರಣ ಇಂದು ಸಾಧನೆಯ ಮೇರು ಪರ್ವತ ವಾಗಿದೆ.
ವಿನಯ್ ತಂದೆ ತಾಯಿಯಂತು ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ವಿನಯ್ ಗೆ ಬೇಕಾದ ಸಾಮಾಜಿಕ ಪ್ರಜ್ಞೆ ಪರಿಸರ ಕಾಳಜಿ ಓದಿನ ಮಹತ್ವ ದೇಶಪ್ರೇಮ ಬಾಲ್ಯದಿಂದಲೇ ತುಂಬಿದ್ದಾರೆ. ಅವರ ವೃತ್ತಿ ಸಣ್ಣದಾದರೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅವರೇ ಮಾರ್ಗದರ್ಶಿಯಾಗಿದ್ದಾರೆ.
ಹೈಸ್ಕೂಲ್ ಶಿಕ್ಷಣ
ವಿನಯ್ ಹೈ ಸ್ಕೂಲ್ ಶಿಕ್ಷಣ ಪಡೆದಿದ್ದು ಬಿಸಿಲು ನಾಡಾದ ಸಿಂದನೂರಿನಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಹೋಲಿ ಪ್ಯಾಮಿಲಿ ಸ್ಕೋಲ್ ನಲ್ಲಿ ಮುಗಿಸಿದ್ದು. ಸಿಂದನೂರಿನಲ್ಲಿ ಸತತ ಓದಿನಿಂದಾಗಿ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ದರ್ಜೆಯಲ್ಲಿ 94% 72 ಶೇಕಡಾ ಫಲಿತಾಂಶ ಪಡೆದಿದ್ದು ವಿಶೇಷ ಸಿಂದನೂರಿನಲ್ಲಿ ಇರುವ ಪರಿಸರ ಕಾಳಜಿ. ಸಂಸ್ಕೃತಿ ಧಾರ್ಮಿಕ ವಿಚಾರಗಳು ಗೆಳೆಯರ ಸ್ನೇಹ ಸ್ಪರ್ಧೆಯಲ್ಲಿ ಭಾಗವಹಿಸುವ ಗುಣ ಬೆಳೆಸಿದ್ದು ಇಲ್ಲಿಯೇ. ಅಲ್ಲಿನ ಗುರುಗಳ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ
ಕಾಲೇಜು ಶಿಕ್ಷಣ
ವಿನಯ್ ಪಿಯಸಿ ಜ್ಞಾನಜ್ಯೋತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಸಿಂದನೂರು. ಉತ್ತರ ಕರ್ನಾಟಕದ ಶಿಕ್ಷಣವನ್ನು ತುಂಬಾ ಸುಂದರವಾಗಿ ಅರ್ಥ ಮಾಡಿಕೊಂಡು ಅಲ್ಲಿಯ ಗುರುಗಳ ಪ್ರೀತಿ ವಿಶ್ವಾಸ ಪಡೆದು ಪಿಯಸಿ ಫಲಿತಾಂಶದಲ್ಲಿ 85% ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ ವಿನಯನಿಗೆ ಸಿಂದನೂರು ಭಾಂದವ್ಯ ಒಂದು ವರವಾಗಿದೆ. ವಿಶೇಷವೇಂದರೇ ವಿನಯ್ ತಂದೆ ತಾಯಿರವರು ಇದ್ದ ಬಾಡಿಗೆ ಮನೆಯಲ್ಲಿಯೇ ವಿಜ್ಞಾನ ಕೌಶಲ್ಯವನ್ನು ಪಡೆದಿದ್ದಾನೆ. ಸಿಂದನೂರಿನಲ್ಲಿ ಶಂಕ್ರಪ್ಪ ಮಾಸಿರವಾರ್ ಅವರ ಮನೆಯಲ್ಲಿ ಬಾಡಿಗೆಗಿದ್ದರು. ಅ ಮೆನೆಯ ಕುಟುಂಬದ ಒಂದುಭಾಗವೇ ಆಗಿ ಹೋಗಿದ್ದ. ಅಲ್ಲಿ ವಿಜ್ಞಾನ ಶಿಕ್ಷಕರಾದ ಹನುಮಂತ ರಾವ್ ಹಾಗೂ ಪತ್ರಿಕೋಧ್ಯಮ, ಚಿತ್ರಕಲೆಯಲ್ಲಿ ಪ್ರಬುದ್ಧರಾದ ಅರುಣ್ ಭೂಪಾಲ್ ಅವರಿಂದ ವೃತ್ತಿ ಕೌಶಲ್ಯದ ಗುಣಗಳನ್ನು ಬೆಳಸಿಕೊಂಡಿದ್ದಾರೆ.ಅದು ಕೂಡಇವರ ಯಶಸ್ಸಿಗೆ ಪೂರಕವಾಗಿದೆ ಅಂತಾನೆ ಯುವಕ ವಿನಯ್ ಮಾಂಡ್ರೆ.
ಪದವಿ ಶಿಕ್ಷಣ :
ವಿನಯ್ ಬಿ.ಇ ಪದವಿ ಪಡೆದಿದ್ದು ಧಾರವಾಡದಲ್ಲಿ. ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ C.S. E ವಿಭಾಗದಲ್ಲಿ ಶಿಕ್ಷಣ ಮುಗಿಸಿದ್ದು ಅಲ್ಲಿಯೇ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ ಹೊಂದಿದ್ದಾನೆ.
ಉದ್ಯೋಗ ದೊರೆತಿದ್ದು :
ಜರ್ಮನ್ ದೇಶದ ಪ್ರಸಿದ್ಧ ಸಾಫ್ಟ್ ವೇರ್ ಕಂಪನಿಯಾದ MUHLBAUER Gmbh & Co. KG ಜರ್ಮನನಲ್ಲಿ ಆಯ್ಕೆ ಹೊಂದಿದ್ದಾನೆ. ಕಾಲೇಜಿನಿಂದ ಒಟ್ಟು 8 ವಿದ್ಯಾರ್ಥಿಗಳು ಆಯ್ಕೆ ಹೊಂದಿದ್ದು. ಕಾಲೇಜಿನ ಕೀರ್ತಿ ಸಾಧನೆಯಾಗಿದೆ. ಈ ಕಾಲೇಜಿನ ಸಾಧನೆ ಕಂಡು ಸಂಸ್ಥಾಪಕ, ಅಧ್ಯಕ್ಷರಾದ ಶ್ರೀ ವಿರೇಂದ್ರ ಹೆಗಡೆಯವರು ಸ್ವತಃ ವಿನಯ್ ನನ್ನು ಅಭಿನಂದಿಸಿದ್ದಾರೆ.
ಸಂಭ್ರಮದ ಸಡಗರ:
ವಿನಯ್ 5 – 8 – 2023 ರಂದು ಭಾರತ ದೇಶದಿಂದ ಜರ್ಮನಿಯ ರೊಡಿಂಗ್ ನಗರಕ್ಕೆ ಹೋಗುತ್ತಿದ್ದಾನೆ. ಈ ಸುದ್ದಿಯನ್ನು ಕೇಳಿ ವಿನಯನ ಬಂದು ಬಳಗದವರು ತುಂಬಾ ಹರ್ಷ ಪಡುತ್ತಿದ್ದಾರೆ.
ಒಬ್ಬ ವಿದ್ಯಾರ್ಥಿ ಶ್ರದ್ಧೆಯಿಂದ ಓದಿದರೆ ಶಿಕ್ಷಣದ ಫಲ ದೊರೆಯುತ್ತದೆ. ಎಂಬುದಕ್ಕೆ ವಿನಯ್ ಸಾಕ್ಷಿಯಾಗಿದ್ದಾನೆ.
ಶುಭ ಕೋರುವವರು:
ಗಣೇಶ ಮಾಂಡ್ರೆ
ಜನಾರ್ಧನ ಮಾಂಡ್ರೆ
ಶ್ರೀಕಾಂತ ಮಾಂಡ್ರೆ
ಗುರುರಾಜ ನವಲೆ
ಶೋಭರಾಂಪುರೆ
ಮಂಜುಳಾ ಮಹೇಂದ್ರಕರ
ಗಾಯಿತ್ರಿ ಮಾಂಡ್ರೆ
ಪಾಂಡುರಂಗ ಮಾಂಡ್ರೆ
ಗೀತಾ ಗಣೇಶ
ಮತ್ತು ಕುಟುಂಬದವರು.