BP NEWS: ಬಳ್ಳಾರಿ: ಜುಲೈ.24: ಕರ್ನಾಟಕ ಪಬ್ಲಿಕ್ ಶಾಲೆ, ಮೋಕಾದ ನೂತನ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಬಿ ನಾಗೇಂದ್ರ.
ಇಂದು ಸಚಿವರಾದ ಬಿ ನಾಗೇಂದ್ರ ಅವರು ತಮ್ಮ ಕ್ಷೇತ್ರವಾದ ಬಳ್ಳಾರಿ ಗ್ರಾಮೀಣ ಭಾಗದ ಮೋಕ ಗ್ರಾಮಕ್ಕೆ ಭೇಟಿ ನೀಡಿ ಮೋಕಾದ ಗ್ರಾಮದೇವರಾದ ಮುದಿ ಮಲ್ಲೇಶ್ವರ ದೇವಸ್ಥಾನ, ಮೋಕ ಮಲ್ಲೇಶ್ವರ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ನಂತರ ಮೋಕಾದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವರಾದ ಬಿ ನಾಗೇಂದ್ರ ಅವರು ಇದೇ ಸಂದರ್ಭದಲ್ಲಿ ನೆರೆದಿದ್ದ ಮೋಕಾದ ಜನರ, ಸುತ್ತಮುತ್ತಲ ಗ್ರಾಮದ ಜನರ ಅಹವಾಲುಗಳನ್ನು ಸ್ವೀಕರಿಸುತ್ತಾ ಬಂದ ಜನರನ್ನು ಸಂತೈಸುವುದರೊಂದಿಗೆ ಅವರಿಗೆ ಭರವಸೆಯನ್ನು ನೀಡಿದರು.
ಸೇರಿದ್ದ ಸಾವಿರಾರು ಜನರೊಂದಿಗೆ ನಗುಮುಖದಿಂದಲೇ ಮಾತನಾಡುತ್ತಾ ಮೋಕ ಶಾಲೆಯ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ ಸಚಿವರು ತಮ್ಮ ಮೊಬೈಲ್ ನಿಂದ ಸ್ವತ: ತಾವೇ ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ್ದು ವಿಶೇಷ.
ನೂತನ ಶಾಲಾ ಕಟ್ಟಡದ ನಾಮಫಲಕ ಅನಾವರಣ, ಶಾಲಾ ಕಟ್ಟಡದ ಉದ್ಘಾಟನೆಯ ಈ ಸುಸಂದರ್ಭದಲ್ಲಿ ಬಳ್ಳಾರಿಗೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಶಾಂತ್ ಕುಮಾರ್ ಮಿಶ್ರಾ, ಪೊಲೀಸ್ ವರಿಷ್ಠ ಅಧಿಕಾರಿಗಳು, ಬಳ್ಳಾರಿಯ ಮೇಯರ್ ಆದ ತ್ರಿವೇಣಿ ಅವರು, ಬಳ್ಳಾರಿ ಮಾಜಿ ಮೇಯರ್ ಆದಂತಹ ರಾಜೇಶ್ವರಿ ಸುಬ್ಬರಾಯಡು ಅವರು, ಬಳ್ಳಾರಿ ಜಿಲ್ಲಾ ಪ್ರಭಾರಿ ಉಪ ನಿರ್ದೇಶಕರಾದ ಹನುಮಕ್ಕ ಅವರು,
ಬಳ್ಳಾರಿ ಪೂರ್ವ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಯಿಮ್ ಉರ್ ರೆಹಮಾನ್ ಅವರು, ಕರ್ನಾಟಕ ಪಬ್ಲಿಕ್ ಶಾಲೆ ಮೋಕಾದ ಪ್ರಾಚಾರ್ಯರು, ಉಪ ಪ್ರಾಚಾರ್ಯರಾದ ಭಾರತಿ J, ಮೋಕಾ ಗ್ರಾಮದ ಗ್ರಾಮ ಪಂಚಾಯತ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಿ ರಾಮಣ್ಣ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕರ್ನಾಟಕ ಪಬ್ಲಿಕ್ ಶಾಲೆ ಮೋಕಾದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹೇಶ್ ಗೌಡ ಅವರು, ಕರ್ನಾಟಕ ಪಬ್ಲಿಕ್ ಶಾಲೆ ಮೋಕಾದ ಸರ್ವ ಸಿಬ್ಬಂದಿ ವರ್ಗದವರು ಮತ್ತು ಊರಿನ ಗುರು ಹಿರಿಯರು ಈ ಸುಸಂದರ್ಭದಲ್ಲಿ ಉಪಸ್ಥಿತರಿದ್ದು ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಸಚಿವರೊಂದಿಗೆ ಸೇರಿ ಯಶಸ್ವಿಗೊಳಿಸಿದರು.