*ಆಷಾಢ ಸಾಂಸ್ಕೃತಿಕ ಸಂಭ್ರಮ -2023*

0
148

BP NEWS: ಬಳ್ಳಾರಿ: ಜುಲೈ.04: ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆ ಈ ಸಂಘದಿಂದ ಆಷಾಢ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ರಂಗನೇಸರ ಸಾಂಸ್ಕೃತಿಕ ಕಲಾ ಸಂಘವು ಎಂ.ಬಸಾಪುರ ಗ್ರಾಮದಲ್ಲಿ ಹಮ್ಮಿಕೊಂಡಿತ್ತು. ಮಕ್ಕಳಿಗೆ ರಂಗತರಬೇತಿ, ಡೊಳ್ಳು ಕುಣಿತ, ನಾಟಕ, ಹಾಡು ಇವೆಲ್ಲವೂ ಗ್ರಾಮೀಣ ಭಾಗದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಉಳಿದಿದೆ. ರಂಗಭೂಮಿ ಕಲೆಗಳನ್ನು ಗ್ರಾಮೀಣ ಭಾಗದಲ್ಲಿ ತೊಡಗಿಸಿಕೊಂಡು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ನಿರಂತರವಾಗಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ ಎಂದು ನಿವೃತ್ತ ಯೋಧ ಶ್ರೀಯುತ ರಾಜಶೇಖರ ತಿಳಿಸಿದ್ದಾರೆ.

ಪ್ರಸ್ತುತ ದಿನಮಾನಗಳಲ್ಲಿ ಜನರು ಶ್ರೀಮಂತಿಕೆ ಆಗುತ್ತಿದ್ದಾರೆ ವಿನಹ ರಂಗಭೂಮಿಯನ್ನ ಶ್ರೀಮಂತ ಗೊಳಿಸುತ್ತಿಲ್ಲ. ಆದರೆ ಕಲೆ ಉಳಿದಿರುವುದು ಕೇವಲ ಹಳ್ಳಿ ಪ್ರದೇಶಗಳಲ್ಲಿ ಮಾತ್ರ. ರಂಗಭೂಮಿಯನ್ನು ಮೌಖಿಕವಾಗಿ ಬೆಳೆದು ಗ್ರಾಮೀಣ ಜನತೆಯ ತಳಹದಿಯಾಗಿ ಮೂಡಿಬರುವುದನ್ನು ಕಾಣುತ್ತೇವೆ.ರಂಗಭೂಮಿಯಲ್ಲಿ ನಿರಂತರವಾಗಿ ಕಲೆಯಿಂದ ಕುಲ ಹುಟ್ಟುಹಾಕಿದರು ಅವರವರ ಕಾಯಕ್ಕೆ ತಕ್ಕಂತೆ ಕುಲಗಳು ಹುಟ್ಟಿಕೊಂಡವು. ಮಕ್ಕಳ ಡೊಳ್ಳು ಕುಣಿತವನ್ನು ಬಳ್ಳಾರಿ ಉತ್ಸವ, ಕಂಪ್ಲಿ ಉತ್ಸವ ಹಾಗೂ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗವಹಿಸಿದ್ದರೆ ಎಂದು ಸಂಡೂರು ತಾಲೂಕು ಕುರುಬ ಸಂಘದ ಅಧ್ಯಕ್ಷ ಶ್ರೀಯುತ ಗುರುಪಾದಪ್ಪ ಹೇಳಿದರು.

ಹಳ್ಳಿಗಳಲ್ಲಿ ಹಿಂದಿನ ಕಾಲದಲ್ಲಿ ಬಯಲಾಟ ಮತ್ತು ಸಾಮಾಜಿಕ ನಾಟಕ ನಡೆಯುತ್ತಿದ್ದವು. ಆದರೆ ಇಂದಿನ ಜನಗಳು ಅದನ್ನೇ ಮರೆತಿದ್ದಾರೆ. ಕಾಲಕಾಲಕ್ಕೆ ಮೊದಲು ಮಳೆ ಬೆಳೆ ಚನಾಗಿತ್ತು. ವರ್ಷಕ್ಕೆ ಒಂದಾದರೂ ಬಯಲಾಟ ನೋಡುತ್ತಿದ್ದೆವು. ಈಗ ಅದು ಕೂಡ ಕಾಣಲಾಗಿದೆ. ಹಳ್ಳಿಗಳ ಜನರ ಮನಸ್ಸು ಮಲ್ಲಿಗೆ ಹೂವಿನ ಸುಗಂಧ ಇದ್ದಾಗ ಎಲ್ಲಾರನ್ನು ಒಂದೇ ಮನೋಭಾವದಿಂದ ಕಾಣುತ್ತಾ, ಪ್ರೀತಿ, ವಿಶ್ವಾಸ,ನಂಬಿಕೆ ಮೇಲೆ ಗ್ರಾಮೀಣ ಜನರು ಒಳಗೊಂಡಿರುತ್ತಾರೆ.ಜನಪದ ಗೀತೆಗಳು, ಕುಣಿತ ಇವೆಲ್ಲವೂ ಗ್ರಾಮೀಣ ಜನತೆಯ ಮನರಂಜನೆಗಳು ತಮ್ಮ ಜೀವನದ ಸುಖಕ್ಕೆ ನೆಮ್ಮದಿಯ ಜೀವನಕ್ಕೆ ಕಲೆಗಳನ್ನು ಪೋಷಿಸಿ ನೆಮ್ಮದಿಯನ್ನು ಕಾಣುತ್ತಿದ್ದರು.ನನಗೆ ಮತ್ತು ಬಸಾಪುರಕ್ಕೆ ಅವಿನಾಭಾವ ಸಂಬಂಧ ಇದೆ ಮುಂದೆ ಕಲೆಗಳನ್ನು ಪೋಷಿಸುವುದಕ್ಕೆ ಸಹಕರಿಸುತ್ತೇನೆ.ಜನಪದ ಸಂಸ್ಕೃತಿಯನ್ನು ಎತ್ತಿ ಹಿಡಿದು ಬೆಳೆಸುವಂತಹ ಡೊಳ್ಳು ಕುಣಿತ ಕಲೆಯನ್ನು ಬಾಲಮಕ್ಕಳಿಗೆ ಕಲಿಸಿ ಪ್ರಯೋಗ ಮಾಡಲು ತಯಾರಿ ಮಾಡಿದಂತಹ ನಿಮ್ಮೂರಿನ ಚಂದ್ರಶೇಖರ ಬಹಳಷ್ಟು ಶ್ರಮವಹಿಸಿದ್ದರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಯುತ
ಲಕ್ಷ್ಮಣ ಹೆಚ್ ಹೇಳಿದರು.

ಕಾರ್ಯಕ್ರಮದಲ್ಲಿ ವಸಿಗೆರಪ್ಪ, ಶೇಖರಪ್ಪ, ರಾಘವೇಂದ್ರ, ಬಿ.ಆರ್.ತಿಪ್ಪೇಸ್ವಾಮಿ, ಸದಾಶಿವ, ಹುಚ್ಚಪ್ಪ, ರಾಮಣ್ಣ, ಕೆಂಚಪ್ಪ, ರುದ್ರಪ್ಪ, ಶೀಲಪ್ಪ, ಬಿ.ಆರ್.ಸಿದ್ದಪ್ಪ, ದೇವರಾಜ್ ಕಲಾವಿದರಾದ ಹುಸೇನಪ್ಪ, ಎರಿಸ್ವಾಮಿ, ಹೇಮಂತರಾಜ್, ಶರಣ ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು
ಪರಮೇಶ್ ಕೆ.ಮತ್ತು ತಂಡದವರು ಡೊಳ್ಳು ಕುಣಿತ, ಜಡೇಶ್ ಎಮ್ಮಿಗನೂರು, ಡಿ.ಜಿ.ತಿರುಮಲ ರಾಜಾಪುರ ಮತ್ತು ದೊಡ್ಡಬಸಪ್ಪ ಸೋಮಾಸಮುದ್ರ ಅವರಿಂದ ಜಾನಪದ ಗೀತೆಗಳನ್ನು ಮತ್ತು ಪೌರಾಣಿಕ ನಾಟಕ ದ್ರೌಪದಿ ವಸ್ತ್ರಾಪಹರಣ ಹೇಮೇಶ್ವರ್ ಕೆ. ಮತ್ತು ತಂಡದವರಿಂದ ಪ್ರದರ್ಶಿಸಲಾಯಿತು.
ನಾಗರಾಜ್ ಕೆ. ಕಾರ್ಯಕ್ರಮದ ನಿರೂಪಣೆಯನ್ನ ಮಾಡಿದರು. ಸಂಘದ ಕಾರ್ಯದರ್ಶಿ ಚಂದ್ರು ಬಸಾಪುರ ವಂದಿಸಿದರು.

LEAVE A REPLY

Please enter your comment!
Please enter your name here