ವಿದ್ಯುತ್ ಅವಘಡದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದ ಸಚಿವ ಬಿ.ನಾಗೇಂದ್ರ

0
68

BP NEWS: ಬಳ್ಳಾರಿ: ಜೂನ್.05:
ನಗರದ ಕೌಲ್ ಬಜಾರ್ ವ್ಯಾಪ್ತಿಯ ಬಂಡಿಹಟ್ಟಿಯಲ್ಲಿ ವಿದ್ಯುತ್ ಅವಘಡದಿಂದ ಮೃತ ಪಟ್ಟಿದ್ದ ಕಲಾವಿದ ಪಂಪಾಪತಿ(7೦) ಹಾಗೂ ದ್ಯಾವಮ್ಮ(6೦) ಅವರ ಕುಟುಂಬಕ್ಕೆ ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರಾದ ಬಿ.ನಾಗೇಂದ್ರ ಅವರು ಸೋಮವಾರ ಭೇಟಿ ನೀಡಿ, ತಲಾ 5 ಲಕ್ಷದಂತೆ ಹತ್ತು ಲಕ್ಷ ಮೊತ್ತದ ಚೆಕ್ ನ್ನು ಕುಟುಂಬಸ್ಥರಿಗೆ ವಿತರಿಸಿ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಅಸೀಫ್, ಮುಖಂಡರಾದ ಮುಂಡ್ರಗಿ ನಾಗರಾಜ್, ಉಮಾಪತಿ ಹಾಗೂ ಇತರರು ಹಾಜರಿದ್ದರು.
——–

LEAVE A REPLY

Please enter your comment!
Please enter your name here