BP NEWS: Ballary: ಜೂನ್.05: ಪರಿಸರ ದಿನಾಚರಣೆ ಸಂದರ್ಭದಲ್ಲಿ ಇಂಟೂರಿನಗರ್ ದತ್ತಾತ್ರೆಯ ದೇವಸ್ಥಾನ ಆವರಣದಲ್ಲಿ ಹಾಗೂ ಸರ್ಕಾರ ಶಾಲೆ ಎಂಜಿ ಪಟೇಲ್ ನಗರ್ ಆವರಣದಲ್ಲಿ ಹೂವು ಮತ್ತು ಹಣ್ಣಿನ ಗಿಡಗಳನ್ನು ನೀಡಲಾಯಿತು,
ಈ ಕಾರ್ಯಕ್ರಮಕ್ಕೆ ಶ್ರೀಮತೃ ಮಹಿಳಾ ಮಂಡಳಿ ಅಧ್ಯಕ್ಷರು ಕೆ.ಪುಷ್ಪ ಚಂದ್ರಶೇಖರ್, ಮಂಡಳಿಯ ಸದಸ್ಯರು ಜ್ಯೋತಿ,ಮಮತಾ, ಚಂದ್ರಿಕಾ, ನಿವೇದಿತ,ಅನಿತಾ ಮತ್ತು ರಮ, ಮಾಜಿ ಸೈನಿಕರ ಪ್ರಹ್ಲಾದ್ ರೆಡ್ಡಿ, ರಾಜು, ವೀರೇಶ್,ಹಾಗೂ ಶಾಲೆಯ ಮುಖ್ಯ ಉಪಾಧ್ಯಾಯರು ವಿಜಯಲಕ್ಷ್ಮಿ ಮೇಡಂ, ಮತ್ತು ಎಲ್ಲಾ ಉಪಾಧ್ಯಾಯರು ಭಾಗವಹಿಸಿದ್ದರು, ಪರಿಸರ ದಿನಾಚರಣೆ ಬಗ್ಗೆ ಪುಷ್ಪ ಅವರು ಮಾತನಾಡುತ್ತಾ ಪ್ರತಿಯೊಬ್ಬರು ಒಂದು ಗಿಡವನ್ನು ನಡೆಯಬೇಕಾಗಿ ಹೇಳುತ್ತಾ
ಇಂದಿನ ಕಾಲದಲ್ಲಿ ಪರಿಸರ ಸಂರಕ್ಷಣೆ ಬಹಳ ಮುಖ್ಯವಾಗಿದೆ ಆದಕಾರಣ ನಮ್ಮೆಲ್ಲರ ಒಳೆತು ಪರಿಸರ ರಕ್ಷಣಾದಲ್ಲಿ ಇದೆ, ಪ್ರಹ್ಲಾದ್ ರೆಡ್ಡಿ ಅವರು ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಮಕ್ಕಳು ನೀವೆಲ್ಲರೂ ದೇಶಕ್ಕಾಗಿ ಸೇವೆ ಸಲ್ಲಿಸಬೇಕಾಗಿ ಹೇಳಿದರು , ಚಂದ್ರಿಕಾ ಅವರು ಪರಿಸರದ ಸಂರಕ್ಷಣೆ ಜೊತೆಗೆ ಮೊಬೈಲ್ ಬಿಡಿ ಪುಸ್ತಕ ಇಡಿ ಎಂಬ ಘೋಷಣೆಯೊಂದಿಗೆ ಮುಕ್ತಾಯಗೊಳಿಸಿದರು,