BP NEWS: ರಾಯಚೂರು: ಮೇ.27: ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದ ಮಾನಪ್ಪ ಡಿ. ವಜ್ಜಲ್ ಅವರು ತಾಲೂಕು ಪಂಚಾಯಿತಿ ಕೊಠಡಿ ಕಾರ್ಯಾಲಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಗಾಂಧೀಜಿ, ಬಸವಣ್ಣರವರ ಫೋಟೋ ಪೂಜೆ ನೆರವೇರಿಸಿ ತಮ್ಮ ಸ್ಥಾನ ವಹಿಸಿಕೊಂಡು, ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರತಿ ಸಾರ್ವಜನಿಕರ ಕೊಂದು-ಕೊರತೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಜೊತೆಗೆ ಇಲಾಖಾವಾರು ಅಭಿರುದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್, ಮಲ್ಲೇಶ ಸಾಹುಕಾರ, ಗಿರಿಮಲ್ಲನಗೌಡ, ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಹಿತೈಷಿಗಳು,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.