ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

0
197

BP NEWS: Bangalore: ಮೇ.20:  ನಾಡಿನ ಖ್ಯಾತ ನೇತ್ರ ತಜ್ಞರಾಗಿದ್ದ ಡಾ. ಭುಜಂಗ ಶೆಟ್ಟಿ ನಿಧನರಾಗಿದ್ದಾರೆ. ತಮ್ಮ ಚಿಕಿತ್ಸೆ ಮೂಲಕ ಅಸಂಖ್ಯಾತ ಅಂಧರ ಬಾಳಿಗೆ ಬೆಳಕಾಗಿದ್ದ ಭುಜಂಗಶೆಟ್ಟಿ ಇಂದು ಕರ್ತವ್ಯ ಮುಗಿಸಿ, ಮನೆಗೆ ತೆರಳಿದವರೇ ಕೊನೆಯುಸಿರೆಳೆದಿದ್ದಾರೆ.

ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಾ. ಭುಜಂಗ ಶೆಟ್ಟಿ ಅವರಿಗೆ 69 ವರ್ಷ ವಯಸ್ಸಾಗಿತ್ತು.

ಡಾ. ಭುಜಂಗ ಶೆಟ್ಟಿ ಎಂದಿನಂತೆ ಇಂದೂ ಸಹ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಮನೆಗೆ ತೆರಳಿದ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.

ಹೃದಯಾಘಾತವಾಗುತ್ತಿದ್ದಂತೆ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆಗೆ ಕರೆತಂದರೂ ಡಾ. ಭುಜಂಗ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ.

LEAVE A REPLY

Please enter your comment!
Please enter your name here