ಶ್ರೀ ಮಲ್ಲನಗೌಡ ರವರಿಗೆ ಶ್ರೀ ಮಾದರ ಚೆನ್ನಯ್ಯ ಸಂಘದ ವತಿಯಿಂದ ಶೇಕಡ 25%ರಷ್ಟು ಪಠ್ಯಪುಸ್ತಕ ಹಣವನ್ನು ನೀಡು ಬಗ್ಗೆ ಮನವಿ ಪತ್ರ ಸಲ್ಲಿಕೆ.

0
150

BP NEWS: ಬಳ್ಳಾರಿ: ಮೇ.16:  ಕಂಪ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಮಲ್ಲನಗೌಡ ರವರಿಗೆ ಶ್ರೀ ಮಾದರ ಚೆನ್ನಯ್ಯ ಸಂಘದ ವತಿಯಿಂದ ಶೇಕಡ 25%ರಷ್ಟು ಪಠ್ಯಪುಸ್ತಕ ಹಣವನ್ನು ನೀಡು ಬಗ್ಗೆ ಮನವಿ ಪತ್ರ ಸಲ್ಲಿಸಲಾಯಿತು.

ಶ್ರೀ ಮಾದರ ಚೆನ್ನಯ್ಯ ಸಂಘ ಕಂಪ್ಲಿ ಘಟಕ ಇವರ ವತಿಯಿಂದ ಇಂದು ಕಂಪ್ಲಿ ತಾಲೂಕು ಪಂಚಾಯತಿಗೆ ಸಂಬಂಧಪಟ್ಟಂತ ಹೊಸ ನೆಲ್ಲುಡಿ ಗ್ರಾಮ ಪಂಚಾಯತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಬರುವಂತಹ ಶೇಕಡವಾರು 25% ಪಠ್ಯಪುಸ್ತಕದ ಹಣವನ್ನು ನೀಡದಿರುವ ಬಗ್ಗೆ ಗಮನ ಹರಿಸಿ ಸೂಕ್ತ ಕಾನೂನು ಜರಿಗಿಸಬೇಕೆಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಲ್ಲನಗೌಡ ಸರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಾದರ ಚೆನ್ನಯ್ಯ ಸಂಘದ ಕಂಪ್ಲಿ ಘಟಕದ ಅಧ್ಯಕ್ಷರಾದ ಎಚ್ ತಿಪ್ಪೇಸ್ವಾಮಿ ಮಾತನಾಡಿ ನಮ್ಮ ಕಂಪ್ಲಿ ತಾಲೂಕಿಗೆ ಬರುವಂತ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ನಮ್ಮ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿದ್ಯಾರ್ಥಿಗಳಿಗೆ ಬರುವಂತಹ ಶೇಕಡ 25%ರಷ್ಟು ಪಠ್ಯಪುಸ್ತಕದ ಕಡ್ಡಾಯವಾಗಿ ಮಂಜೂರು ಮಾಡಲು ಆದೇಶವನ್ನು ಹೊರಡಿಸಿ ಎಂದು ಮನವಿ ಪತ್ರವನ್ನು ಸಲ್ಲಿಸಿದರು.

ಸರಿ-ಸುಮಾರು ಹೊಸ ನೆಲ್ಲುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಹಳ್ಳಿಗಳಲ್ಲಿ 80 ರಿಂದ 100 ಬಡ ವಿದ್ಯಾರ್ಥಿಗಳಿದ್ದು ಸುಮಾರು 5 ವರ್ಷಗಳಿಂದ ಯಾವುದೇ ಸರಿಯಾಗಿ ಮಾಹಿತಿ ಮಕ್ಕಳಿಗೆ ನೀಡದೆ, ಯಾವುದೇ ಹಣವನ್ನು ಮಂಜೂರು ಮಾಡಿರುವುದಿಲ್ಲ, ಆದ ಕಾರಣ ದಯಮಾಡಿ ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ತಾವುಗಳು ಗಮನಹರಿಸಿ ಕಂಪ್ಲಿ ತಾಲೂಕಿನ ಎಲ್ಲಾ ಪಂಚಾಯಿತಿ ಪಿ.ಡಿ.ಒಗಳಿಗೆ ಈ ತಕ್ಷಣವೇ ಹಣ ಬಿಡುಗಡೆ ಮಾಡಲು ಆದೇಶವನ್ನು ಹೊರಡಿಸಬೇಕಾಗಿ ಹೆಚ್.ತಿಪ್ಪೇಸ್ವಾಮಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಾದರ ಚೆನ್ನಯ್ಯ ಸಂಘದ ಕಂಪ್ಲಿ ಘಟಕದ ಅಧ್ಯಕ್ಷರಾದ ಹೆಚ್. ತಿಪ್ಪೇಸ್ವಾಮಿ, ಗೌರವ ಅಧ್ಯಕ್ಷರಾದ ಎಚ್ ಪಂಪಾಪತಿ, ಉಪಾಧ್ಯಕ್ಷರಾದ ಹೆಚ್ ಮರಿಯಪ್ಪ ಹಾಗೂ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾದ ಗೋಪಿನಾಥ್ ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here