ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಪೇದೆ ಅನುಮಾನಸ್ಪದ ಸಾವು
BPNEWS: ಬಳ್ಳಾರಿ: ಮಾ.23-ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಮೃತ ಪೇದೆ ಜಾಫರ್ ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ಇದು ಕೊಲೆ ಎಂದು ಭಾವಿಸಲಾಗಿದೆ. ಕಳೆದ 2008ರಿಂದ ಡಿಎಆರ್ ಪೆÇಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾಫರ್ ಅನುಮಾನಾಸ್ಪದ ಕೊಲೆಗೆ ಪೊಲೀಸರು ಕಾರಣಗಳನ್ನು ಹುಡುಕಲು ತನಿಖಾ ಕಾರ್ಯ ಕೈಗೊಂಡಿದ್ದಾರೆ.
ಪೆÇಲೀಸ್ ವಸತಿ ಗೃಹದಲ್ಲಿ ಬುಧವಾರ ರಾತ್ರಿ ಈ ಸಾವು ಸಂಭವಿಸಿದ್ದು, ಪ್ರಜ್ಞೆ ತಪ್ಪಿಸಿ ರಾಡಿನಿಂದ ಕೊಲೆ ಮಾಡಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಕಿವಿಯಲ್ಲಿ ರಕ್ತಸ್ರಾವದಿಂದ ಗಾಯಗೊಂಡಿದ್ದ ಜಾಫರ್ ಗಂಭೀರವಾಗಿ ಗಾಯಗೊಂಡಿದ್ದರಿಂದ ವಿಮ್ಸ್ ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವ ಪೇದೆ ಜಾಫರ್ ಎರಡನೆ ಮದುವೆಯಾಗಿದ್ದನೆಂದು ತಿಳಿದು ಬಂದಿದೆ. ಜಾಫರ್ ಎರಡನೆ ಹೆಂಡತಿ ನರ್ಸಾಗಿ ಕೆಲಸ ಮಾಡುತ್ತಿದ್ದು, ಮೊದಲ ಹೆಂಡತಿ ಮುಸ್ಲೀಂ, ಎರಡನೆ ಹೆಂಡತಿ ಹಿಂದು ಎಂಬ ಮಾಹಿತಿ ಇದೆ. ಮೊದಲನೆ ಹೆಂಡತಿಯನ್ನು ತವರು ಮನೆಯಲ್ಲಿಯೇ ಬಿಟ್ಟಿರುವ ಜಾಫರ್, ಕಳೆದ ಕೆಲ ದಿನಗಳಿಂದ ಎರಡನೆ ಹೆಂಡತಿ ಜೊತೆಗೆ ಇದ್ದ. ಇತ್ತೀಚೆಗೆ ಇವರ ಮಧ್ಯ ಜಗಳ ನಡೆದಿತ್ತು. ಸ್ಥಳಕ್ಕೆ ಗಾಂಧಿನಗರ ಪೆÇಲೀಸರು ಮತ್ತು ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ದುರ್ಘಟನೆ ನಡೆದು ಹೋಗಿದೆ. ಎರಡನೆ ಹೆಂಡಿತಿಯೊಂದಿಗೆ ಜಾಫರ್ ಇದ್ದರೆಂದು ಗೊತ್ತಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಇನ್ನಷ್ಟು ಮಾಹಿತಿ ಲಭಿಸಲಿದೆ. ನಾನೀಗ ವಿ.ಸಿ.ಯಲ್ಲಿರೋದ್ರಿಂದ ಸಂಜೆಯವರೆಗೂ ಬಿಡುವಿಲ್ಲದ ಚಟುವಟಿಕೆಯಲ್ಲಿ ಭಾಗವಹಿಸಲಿದ್ದೇನೆ.- ರಂಜಿತ್ ಕುಮಾರ್ ಭಂಡಾರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬಳ್ಳಾರಿ
ಮನೆಗಳ್ಳರ ಬಂಧನ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ವಸ್ತುಗಳ ಪತ್ತೆ
BP NEWS: ಬಳ್ಳಾರಿ: ಮಾ.23: ಕಳೆದ ಡಿಸೆಂಬರ್ ನಲ್ಲಿ ಇಲ್ಲಿನ ಸತ್ಯನಾರಾಯಣ ಪೇಟೆಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಪತ್ತೆ ಹಚಿ,್ಚ ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿನ್ನದಾಭರಣಗಳ ಜೊತೆಗೆ ನಗದು ಹಣವನ್ನು ಜಫ್ತು ಮಾಡಿಕೊಂಡಿದ್ದಾರೆ.
ಎಸ್.ಎನ್.ಪೇಟೆಯ 2ನೇ ಕ್ರಾಸಿನಲ್ಲಿರುವ ಬಿಆರ್ ಪವನ್ ತಂದೆ ರಾಮನಾಥ ಅವರ ನಿವಾಸದಲ್ಲಿ ಡಿಸೆಂಬರ್ 28ರಿಂದ ಮನೆಗೆ ಬೀಗ ಹಾಕಲಾಗಿತ್ತು. ಮಾರ್ಚ್ 12 ರಂದು ಬಂದು ನೋಡಿದಾಗ ಯಾರೋ ಮನೆಯ ಬೀಗ ಮುರಿದು 113 ಗ್ರಾಂ ಬಂಗಾರದ ಆಭರಣಗಳು, 2150 ಗ್ರಾಂ ಬೆಳ್ಳಿಯ ಆಭರಣಗಳು, ಒಂದು ಸಿಲಿಂಡರ್, ಒಂದು ಟಿವಿ ಮತ್ತು ಒಂದು ಡ್ರೈಂಡರ್ ಕಳ್ಳತನವಾಗಿದ್ದವು. ಒಟ್ಟು 7,42,600 ರೂಪಾಯಿಗಳ ಮೌಲ್ಯದ ಚಿನ್ನಾಭರಣ ವಸ್ತುಗಳನ್ನು ಕಳ್ಳತನ ಮಾಡಿದ್ದರ ಬಗ್ಗೆ ಮಾರ್ಚ್ 21 ರಂದು ವಾರಸುದಾರರು ದೂರು ನೀಡಿದ್ದರು.
ಸದರಿ ಪ್ರಕರಣ ಪತ್ತೆ ಹಚ್ಚಲು ಪೊಲೀಸ್ ಇನ್ಸ್‍ಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಸಿಬ್ಬಂದಿಯವರಾದ ಜಯರಾಂ, ಶ್ರೀನಿವಾಸುಲು, ಎರಿಸ್ವಾಮಿ, ಎ. ವಿ ಮಾರುತಿ, ಬಿ.ತಿಮ್ಮ¥ಪ್ಪ ಮತ್ತು ತಂಡವು ಕಾರ್ಯೋನ್ಮುಖರಾಗಿದ್ದು, ಆರೋಪಿಗಳನ್ನು ಹೆಡೆಮುರಿಗೆ ಕಟ್ಟುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ನಿನ್ನೆ ಬೆಳಗಿನ ಜಾವ ವಿಶೇಷ ಗಸ್ತಿನಲ್ಲಿದ್ದಾಗ ಪಟೇಲ್ ನಗರದ ಎಸ್.ಬಿ.ಐ ಬ್ಯಾಂಕ್ ಪಾರ್ಕ್ ಹತ್ತಿರ ಸಂಶಾಯಸ್ಪದವಾಗಿ ತಿರುಗಾಡುತ್ತಿದ್ದ ಶ್ರೀರಾಂಪುರಂ ಕಾಲೋನಿಯ ಪ್ರಸಾದ ತಂದೆ ಅಂಜಿನಪ್ಪ, ವಿನೋದ್ ತಂದೆ ಅಂಜಿನಪ್ಪ, ತಾರಾನಾಥ ಆಸ್ಪತ್ರೆಯ ಹಿಂಭಾಗದ ದರ್ಗಾ ಬಳಿಯ ಹುಲಿಗೇಶ ತಂದೆ ಬಜಾರಿ, ರೂಪನಗುಡಿ ರಸ್ತೆಯ ವರಬಸಪ್ಪ ಗುಡಿ ಬಳಿಯ ಹನುಮಂತ ತಂದೆ ಮಲ್ಲೇಶಪ್ಪ ಎನ್ನುವ ನಾಲ್ಕು ಆರೋಪಿಗೋಳನ್ನು ದಸ್ತಗಿರಿ ಮಾಡಿ ವಿಚಾರಿಸಿದಾಗ ಆರೋಪಿಗಳು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಕಳ್ಳತನ ಮಾಡಿದ್ದವರಿಂದ ನಗ, ನಗದು ವಶಪಡಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಕಳ್ಳತನ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಎಲ್ಲ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಟರಾಜ ಇವರು ಅಭಿನಂದಿಸಿದ್ದಾರೆ.
ನಗರ ಉಪ ವಿಭಾಗದ ಡಿಎಸ್‍ಪಿ ಬಸವರಾಜ ಇವರ ನೇತೃತ್ವದಲ್ಲಿ ಸದರಿ ತಂಡವು ಕಳ್ಳತನ ಮಾಡಿದ್ದ 113 ಗ್ರಾಂ ಬಂಗಾರದ ಆಭರಣಗಳು, 2150 ಗ್ರಾಂ ಬೆಳ್ಳಿಯ ಆಭರಣUಳು, ಒಂದು ಸಿಲಿಂಡರ್, ಒಂದು ಟಿವಿ ಮತ್ತು ಒಂದು ಡ್ರೈಂಡರ್ ಸೇರಿ ಒಟ್ಟು 7,42,600 ರೂಪಾಯಿಗಳ ಮೌಲ್ಯದ ಚಿನ್ನಾಭರಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿದೆ.
——
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ದ್ವಂದ್ವ ಹಾಗೂ ಗೊಂದಲಗಳ ಯೋಜನೆ-ಕಾರ್ಯಕ್ರಮ ಹಮ್ಮಿಕೊಂಡ ಕಲಾವಿದರಿಗೆ ಅನ್ಯಾಯ-ಅನ್ಯಾಯಕ್ಕೊಳಗಾದ ಕಲಾವಿದರಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರಿಗೆ ದೂರು-ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಲಾವಿದರಿಗೆ ಹಣ ಪಾವತಿಸಲು ಒತ್ತಾಯ
BP NEWS: ಬಳ್ಳಾರಿ: ಮಾ.23: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸೂಚನೆಯಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಮರ್ಪಕ ಹಣ ಲಭಿಸದೇ ಕೈಸುಟ್ಟುಕೊಂಡಿರುವ ಕಲಾವಿದರಿಗೆ ಅಗತ್ಯ ಧನ ನೀಡಬೇಕೆಂದು ಒತ್ತಾಯಿಸಿ ಇಂದು ಜಿಲ್ಲೆಯ ಕಲಾವಿದರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದ ವಿವಿಧ ಕಲಾವಿದರ ಸಂಘಗಳ ಪದಾಧಿಕಾರಿಗಳು ಅನ್ಯಾಯಕ್ಕೊಳಗಾಗಿರುವ ಜಿಲ್ಲೆಯ ಕಲಾವಿದರಿಗೆ ಬಾಕಿ ಇರುವ ಹಣ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ನಿರ್ದೇಶಕರಿಗೆ ಬರೆದ ಪತ್ರವನ್ನು ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ಸಲ್ಲಿಸಿದ್ದಾರೆ.
ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಲ್ಲಿ ಆಗಿರುವ ಅನ್ಯಾಯ, ಅಕ್ರಮ ಹಾಗೂ ಪಕ್ಷಪಾತ ಧೋರಣೆ ಖಂಡಿಸಿ ಹೋರಾಟ ನಡೆಸಿದ ನೊಂದ ಕಲಾವಿದರ ಪರವಾಗಿ ಕೆ.ಜಗಧೀಶ್ ನೇತೃತ್ವದಲ್ಲಿ ಹಲವಾರು ಕಲಾವಿದರು ತಾರತಮ್ಯ ನೀತಿಯನ್ನು ಸರಿಪಡಿಸಿ, ಆರ್ಥಿಕವಾಗಿ ತೊಂದರೆಗೊಳಗಾಗಿರುವ ಕಲಾವಿದರಿಗೆ ಹಣ ನೀಡುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಮಾತನಾಡಿದ ಅಭಿನಯ ಕಲಾಕೇಂದ್ರದ ಕೆ.ಜಗಧೀಶ್, ಇಲಾಖೆಯ ‘ಸಂಘಸಂಸ್ಥೆಗಳಿಗೆ ಧನಸಹಾಯ ಯೋಜನೆ 2022-23’ ಅಡಿ ಆಯೋಝಿಸಿದ್ದ ಕಾರ್ಯಕ್ರಮಗಳಲ್ಲಿ ಹಲವಾರು ಅನ್ಯಾಯ, ಅಕ್ರಮ ಹಾಗೂ ಪಕ್ಷಪಾತದ ನಿರ್ಧಾರಗಳಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕಲಾವಿದರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಭ್ರಷ್ಟ ಅಧಿಕಾರಿಗಳ ಆಟಾಟೋಪಗಳಿಂದ ಕಲಾವಿದರು ಬೀದಿಗೆ ಬಿದ್ದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ಎಡಬಿಡಂಗಿತನ ನಿಲ್ಲಲಿ:
ಇಲಾಖೆಯ ಅಧಿಕಾರಿಗಳ ಎಡಬಿಡಂಗಿ ಕಾರ್ಯ ವೈಖರಿಯಿಂದ ಸರ್ಕಾರದ ಬಗ್ಗೆ ಕಲಾವಿದರೆಲ್ಲರೂ ಇದೀಗ ಅಸಮಾಧಾನಗೊಂಡಿದ್ದಾರೆ. ಕಲಾವಿದರನ್ನು ಗೋಳಿಗೀಡು ಮಾಡಿ, ತೊಂದರೆಯನ್ನುಂಟು ಮಾಡಿರುವ ಹುನ್ನಾರ ಇಲಾಖೆಯಿಂದಲೇ ನಡೆದಿದೆ. ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದಿನ ಸಹಾಯಕ ನಿರ್ದೇಶಕರ ಲಂಚ ಬೇಡಿಕೆಯ ಧ್ವನಿಮುದ್ರಣ ಜಗಜ್ಜಾಹೀರಾಗಿದ್ದರೂ ಕೇವಲ 42 ದಿನಗಳಲ್ಲಿ ಅವರನ್ನು ಪುನಃ ಹಾವೇರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿರುವ ಕ್ರಮ ಎಷ್ಟು ಸರಿ? ಎಂದಿರುವ ಕೆ.ಜಗಧೀಶ್ ಅವರು, ಇಲಾಖೆಯ ಈ ಕ್ರಮ ಆಡಳಿತಕ್ಕೆ ಗರಿಮೂಡಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.
ಓರ್ವ ವ್ಯಕ್ತಿಗೆ ನಾಲ್ಕು ಕಾರ್ಯಕ್ರಮ..!:
ಹೆಚ್. ಕರಿಬಸಪ್ಪ ಎಂಬ ಒಬ್ಬ ವ್ಯಕ್ತಿಗೆ ಬಳ್ಳಾರಿ ಮತ್ತು ಹಂಪಿ ಉತ್ಸವಗಳಲ್ಲಿ ನಾಲ್ಕು ವಿವಿಧ ಕಾರ್ಯಕ್ರಮ ನೀಡಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಇಲಾಖೆಯ ಮಾನತೆಗೆದ ಆ ಭ್ರಷ್ಟ ಅಧಿಕಾರಿಗೆ ಸರ್ಕಾರ ಮಣಿ ಹಾಕಿರುವುದು ಸರ್ಕಾರಕ್ಕೆ ಇಂಥವರ ಅವಶ್ಯಕತೆಯನ್ನು ಸಾರಿ ಹೇಳುತ್ತಿದೆ. ಯಥಾರೀತಿಯ ನಿರ್ಲಕ್ಷ್ಯ ಮನೋಭಾವ ತ್ಯಜಿಸಿ, ಇನ್ನಾದರೂ ನೊಂದ ಕಲಾವಿದರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೆ.ಜಗಧೀಶ್ ಇಲಾಖೆಯ ನಿರ್ದೇಶಕರಲ್ಲಿ ಒತ್ತಾಯಿಸಿದ್ದಾರೆ.
ಪಾರದರ್ಶಕತೆ ಕುರಿತು ವ್ಯಂಗ್ಯ:
ಧನಸಹಾಯ ಯೋಜನೆಯ ಪ್ರಥಮ ಹಂತವಾದ ಆಯ್ಕೆ ಸಮಿತಿಯ ಸದಸ್ಯರ ನೇಮಕಾತಿಯಲ್ಲಿಯೇ ಇಲಾಖೆ ಎಡವಿದೆ. ಸದರಿ ಯೋಜನೆಯ ಅರ್ಜಿದಾರ ಫಲಾನುಭವಿಯನ್ನೇ ಆಯ್ಕೆ ಸಮಿತಿಯ ಸದಸ್ಯರನ್ನಾಗಿ ನೇಮಿಸುವಾಗ ಪರಿಶೀಲನೆ ನಡೆಸಬೇಕು. ಈ ಬಗ್ಗೆ ಶಿಫಾರಸ್ಸು ಮತ್ತು ಮಂಜೂರಾತಿಯ ಮಾನದಂಡವೇನೆಂಬುದನ್ನು ಬಳ್ಳಾರಿಯ ಕಚೇರಿಯಲ್ಲಿ ಬಾಯಿಬಿಡುತ್ತಿಲ್ಲವೆಂಬುದು ತಮ್ಮ ಇಲಾಖೆಯ ಪಾರರ್ಶಕ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಳ್ಳಾರಿಯ ಈ ಹಿಂದಿನ ಭ್ರಷ್ಟ ಸಹಾಯಕ ನಿರ್ದೇಶಕರಿಗೆ ಬಲಗೈ ಬಂಟನಂತೆ ಕಚೇರಿಯ ವಾಹನದಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬರ ಸಂಸ್ಥೆಗೆ ಗರಿಷ್ಟ ಮೊತ್ತ ಮಂಜೂರಾಗಿರುವುದು ಕಲಾವಿದರಲ್ಲಿ ಚರ್ಚೆಯ ವಿಷಯವಾಗಿದೆ. ಅವರಿಗೆ ನಾಲ್ಕು ಲಕ್ಷ, ನಮಗೆ 50 ಸಾವಿರ, ಒಂದು ಲಕ್ಷ ಮಂಜೂರು ಮಾಡಬೇಕಾದರೆ ಅನುಸರಿಸಿದ ಮಾನದಂಡವೇನೆಂಬುದನ್ನು ತನಿಖೆ ಮಾಡಿ ಬಹಿರಂಗಪಡಿಸಬೇಕು. ಇಲಾಖೆಯ ಅಧಿಕಾರಿಗಳೂ ಇತರ ಕಲಾಸಂಘಗಳಿಗೂ ಮಾರ್ಗದರ್ಶಿಗಳಾಗಿ ನ್ಯಾಯ ಕೊಡಿಸಬೇಕು. ಇಲ್ಲದಿದ್ದಲ್ಲಿ ಇದನ್ನು ಸಹ ಅಕ್ರಮವೆಂದು ಭಾವಿಸಿ ನ್ಯಾಯಯುತ ಹೋರಾಟಕ್ಕಿಳಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಲಾವಿದರ ಜೀವನದೊಂದಿಗೆ ಚೆಲ್ಲಾಟ: 2022ರ ಡಿಸೆಂಬರ್ ಒಳಗಾಗಿ ‘ಕನಿಷ್ಟ ಮೂರು ಕಾರ್ಯಕ್ರಮ ಏರ್ಪಡಿಸಿರಿ’ ಎಂದು ಇಲಾಖೆ ಅಧಿಕಾರಿಗಳು ಫರ್ಮಾನು ಹೊರಡಿಸಿದ್ದರು. ಕÉೀವಲ ಒಂದು ತಿಂಗಳ ಅವಧಿಯಲ್ಲಿ ಅದು ಅಸಾಧ್ಯವೆಂದು ಬೆಂಗಳೂರಿನ ಕಲಾವಿದರು ಪ್ರತಿಭಟಿಸಿದಾಗ, ‘ಒಂದೇ ಕಾರ್ಯಕ್ರಮ ಮಾಡಿದರೂ ಧನಸಹಾಯಕ್ಕೆ ಅರ್ಹರು’ ಎಂದು ತಿದ್ದುಪಡಿ ಮಾಡಿದ್ದೀರಿ. ಆದರೆ ಈ ನಿರ್ಧಾರ ಪ್ರಕಟವಾಗುವುದರೊಳಗೆ ಅನೇಕರು ಮೂರು ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿದ್ದರು. ಮೊದಲು ಗರಿಷ್ಟ 250,000 ರೂ. ಎಂದಿದ್ದೀರಿ. ನಂತರ ಗರಿಷ್ಟ 5 ಲಕ್ಷ ರೂ. ಎಂದು ಬದಲಾಯಿಸಿದಿರಿ. ಕಳೆದ ವರ್ಷದಂತೆ ಮುಂಗಡವಾಗಿ ಮಂಜೂರಾದ ಹಣವನ್ನು ಸಂಸ್ಥೆಗಳ ಖಾತೆಗಳಿಗೆ ಜಮೆ ಮಾಡುವ ವ್ಯವಸ್ಥೆಯನ್ನು ಕೈಬಿಟ್ಟರಿ. ಇನ್ನೂ ವಿಚಿತ್ರವೆಂದರೆ, ಎಷ್ಟು ಮಂಜೂರು ಮಾಡುತ್ತೇವೆಂಬುದನ್ನು ಹೇಳದೇ ಗುಟ್ಟಾಗಿಟ್ಟು, “ಮೊದಲು ಕಾರ್ಯಕ್ರಮ ಮಾಡಿ, ನಂತರ ಹಣ ಕೊಡುತ್ತೇವೆ” ಎಂದು ಅಸಹಾಯಕ ಕಲಾವಿದರ ಜೀವನಗಳ ಜೊತೆ ಚೆಲ್ಲಾಟವಾಡಿದಿರಿ. ಮಂಜೂರಾತಿಯನ್ನು ಗುಟ್ಟಾಗಿಡುವ ಉದ್ದೇಶವೇನಿತ್ತು? ಇದು ಪಾರದರ್ಶಕ ಆಡಳತವೇ? ಗುಟ್ಟಾಗಿಡುವ ಹಾಗಿದ್ದರೆ, ಮಠವೊಂದಕ್ಕೆ ಎರಡು ಕೋಟಿ, ಕನ್ನಡಪರ ಸಂಘಟನೆಗಳಗೆ ಕೋಟಿ ಕೋಟಿ ಹಣ ಮುಂಗಡವಾಗಿ ಮಂಜೂರು ಮಾಡಿ ಬಹಿರಂಗಪಡಿಸಿದಿರೇಕೆ? ಎಂದೂ ಕೆ.ಜಗಧೀಶ್ ಇಲಾಖೆಯ ಅಧಿಕಾರಿಗಳನ್ನು ಮನವಿ ಪತ್ರದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಕಲಾವಿದರು:
ಈ ಎಲ್ಲ ಗೊಂದಲಗಳ ನಡುವೆ, ಸಹಾಯಕ ನಿರ್ದೇಶಕರು ಕಲಾವಿದರ ಸಭೆಯಲ್ಲಿ ಹೇಳಿದ ಮಾತು ನಂಬಿ ಕಲಾಸಂಸ್ಥೆಗಳು ಸಾಲ ಮಾಡಿ, ಬಂಗಾರ ಒತ್ತೆ ಇಟ್ಟು ಮೂರು ಕಾರ್ಯಕ್ರಮ ಮಾಡಿ ನಾಲೈದು ಲಕ್ಷ ರೂ. ವ್ಯಯಿಸಿದ್ದಾರೆ. ಆದರೆ ನಿನ್ನೆ ಮಂಜೂರಾತಿ ಆದೇಶ ನೋಡಿ, ‘ಅಜಗಜಾಂತರ ವ್ಯತ್ಯಾಸ ಕಂಡು ಕಲಾವಿದರು ತೀವ್ರ ಆಘಾತಗೊಂಡಿದ್ದಾರೆ. ಕಲಾಸೇವೆ’ ಮಾಡಲು ಹೋಗಿ ಕೈಸುಟ್ಟುಕೊಂಡವರ ಕಣ್ಣೀರ ಕಥೆ ನಿಮಗೆ ಅರ್ಥವಾಗುತ್ತದೆಯೇ? ನಾಲ್ಕು ಲಕ್ಷ ಖರ್ಚು ಮಾಡಿದವರಿಗೆ 50 ಸಾವಿರ, ಒಂದು ಲಕ್ಷ ಮಂಜೂರು ಮಾಡಿದ್ದೀರಿ, ಉಳಿದ ಮೂರು ಲಕ್ಷ ಸಾಲ ತೀರಿಸುವುದು ಹೇಗೆಂದು ದಾರಿ ಕಾಣದೇ ಸಾಲಗಾರರ ಕಾಟಕ್ಕೆ ಕಲಾವಿದರು. `ಜರ್ಜರಿತರಾಗಿದ್ದಾರೆ. ನೀವು ಮಾಡುವ ದುರಾಡಳಿತಕ್ಕೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನನಾಯಕರೇ ಎಲ್ಲಿದ್ದೀರಿ…?:
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅವಾಂತರದಿಂದ ಕಲಾವಿದರು ಇಷ್ಟೆಲ್ಲ ತೊಂದರೆಗೊಳಗಾಗಿದ್ದರೂ ನಮ್ಮ ಜನನಾಯಕರು ಎಲ್ಲಿದ್ದಾರೆ? ಎಂದು ನೊಂದು ನುಡಿದಿರುವ ಕೆ.ಜಗಧೀಶ್ ಕಲಾವಿದರ ಹಿತಾಸಕ್ತಿ ನಿಮ್ಮ್ಲಲಿದ್ದರೆ ಇನ್ನಾದರೂ ಇತ್ತ ಕಡೆ ಗಮನಹರಿಸಿ. ಈಗ ಮಂಜೂರು ಮಾಡಿರುವ ಮೊತ್ತಗಳಲ್ಲಿನ ಅಗಾಧ ವ್ಯತ್ಯಾಸ ನೋಡಿದರೆ ಭ್ರμÁ್ಟಚಾರದ ವಾಸನೆ ಇಲ್ಲಿ ರಾಚುತ್ತಿದೆ. ಇಲಾಖೆಯ ಅಧಿಕಾರಿಗಳ ದ್ವಂದ್ವತೆಗಳು ಮತ್ತು ಗೊಂದಲಗಳ ನಿರ್ಣಯಗಳಿಂದ ‘ಹುಚ್ಚುಮಲ್ಲಿ ಮದುವೆಯಲ್ಲಿ ಉಂಡವನೇ ಜಾಣ ಎಂಬಂತಿದೆ ವ್ಯವಹಾರ. ಆದ್ದರಿಂದ ಇಲಾಖೆಯ ನಿರ್ದೇಶಕರು ತಕ್ಷಣವೇ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲ ಅರ್ಜಿಗಳು ಹಾಗೂ ಕಾರ್ಯಕ್ರಮಗಳ ದಾಖಲೆಗಳನ್ನು ನಿಖರವಾದ, ಪಾರದರ್ಶಕವಾದ ಹಾಗೂ ನಿಷ್ಪಕ್ಷಪಾತವಾದ ದೃಷ್ಟಿಯಿಂದ ಪುನರ್ ಪರಿಶೀಲಿಸಲೇಬೇಕು. ಸಂಸ್ಕೃತಿ ಮಂಜೂರಾತಿಯ ಮಾನದಂಡಗಳನ್ನು ನಿಗೂಢ ಆಸ್ತಿಯೆಂಬಂತೆ ಕತ್ತಲಲ್ಲಿಟ್ಟು, ಭ್ರಷ್ಟರಿಗೆ ಕುಮ್ಮಕ್ಕು ನೀಡದೇ, ಪಾರದರ್ಶಕವಾಗಿ ಬಹಿರಂಗಪಡಿಸಬೇಕು. ಇಲಾಖೆಯೆಂಬುದು ಕೇವಲ ಭ್ರಷ್ಟರ ಆಸ್ತಿಯಲ್ಲ. ಅದು ಸುಸಂಸ್ಕೃತರ ತಾಣವಾಗಬೇಕು. ಸಂಸ್ಕೃತಿ ಸಚಿವರ ತವರೂರಾದ ಕರಾವಳಿ ಪ್ರದೇಶ ಹಾಗೂ ಬೆಂಗಳೂರು ಭಾಗದ ಕಲಾಸಂಸ್ಥೆಗಳಿಗೆ ನೀಡಿರುವಂತೆ 5 ಲಕ್ಷದವರೆಗೆ ಗರಿಷ್ಟ ಮೊತ್ತವನ್ನು ನಮಗೂ ಮಂಜೂರು ಮಾಡಿ, ಇನ್ನೂ ಹೆಚ್ಚಿನ ಕಾರ್ಯಕ್ರಮ ಏರ್ಪಡಿಸಲು ತಾವು ಸಮಯಾವಕಾಶ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ಅಕ್ರಮ ಬಯಲು ಮಾಡಲು ಕಲಾವಿದರೆಲ್ಲ ಸಜ್ಜು:
ಹಿಂದುಳಿದ ಪ್ರದೇಶವೆಂಬ ಹಣಿಪಟ್ಟ ಹೊತ್ತ “ಕಲ್ಯಾಣ ಕರ್ನಾಟಕ’ ಭ್ರಷ್ಟರ ಕಲ್ಯಾಣಗುಣಗಳಿಂದ ಇನ್ನಷ್ಟು ಹಿಂದುಳಿಯುತ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ನೀಡಿದ 3000 ಕೋಟಿ ರೂ. ಅನುದಾನದ ಸದ್ಧಳಕೆಯಾಗಬೇಕು. ಈ ವಿಷಯದಲ್ಲಿ ಜನಪ್ರತಿನಿಧಿಗಳು ಮತ್ತು ಇಲಾಖೆಯ ನಿರ್ದೇಶಕರು ಎಂದಿನಂತೆ ಕಲಾವಿದರ ಮನವಿಯನ್ನು ಕಡೆಗಣಿಸಿ ತಾತ್ಸಾರ ತೋರಿದಲ್ಲಿ ಭ್ರಷ್ಟ ಆಡಳಿತದ ವಿರುದ್ಧ, ಲಂಚಕೋರ ಅಧಿಕಾರಿಗಳ ವಿರುದ್ಧ ಸೂಕ್ತ ಸಾಕ್ಷಾಧಾರಗಳ ಸಮೇತ ಬೃಹತ್ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದಿರುವ ಕೆ.ಜಗಧೀಶ್ ಗಂಭೀರವಾದ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಇಲಾಖೆಯ ಕರ್ಮಕಾಂಡಗಳನ್ನು ಬಯಲಿಗೆಳೆಯಲು ಎಲ್ಲ ಕಲಾವಿದರು ರಸ್ತೆಗೆ ಇಳೀದು ಹೋರಾಟ ಮಾಡಲು ಅಣಿಯಾಗಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
8ನೇ ತರಗತಿಯಿಂದಲೇ ಕಲಾಗೀಳು ಹಚ್ಚಿಕೊಂಡಿದ್ದ ಜಿಲ್ಲೆಯ ಸುಜಾತಮ್ಮ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದವರು. ಇದುವರೆಗೆ 3 ಸಾವಿರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ತಮಗೆ ಆಗಿರುವ ಅನ್ಯಾಯ ಸರಿಪಡಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಾಲು ಮುಟ್ಟಿ ನಮಸ್ಕರಿಸಿದ್ದು ನೋಡಿದರೆ ಭ್ರಷ್ಟ ಆಡಳಿತ ವ್ಯವಸ್ಥೆ ಎತ್ತ ಸಾಗುತ್ತಿದೆ? ಎಂದು ಬೇಸರವಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದೆ ಅಧಿಕಾರಿಯ ಕಾಲು ಮುಟ್ಟುವುದೆಂದರೆ ಏನರ್ಥ? ಇದನ್ನು ನಾಗರಿಕರು ಅರ್ಥಮಾಡಿಕೊಳ್ಳಬೇಕಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯವೈಖರಿಗೆ ಬೇಸತ್ತ ದೇಶನೂರಿನ ಸ್ವರ ಮಾಧುರಿ ಕಲಾ ಟ್ರಸ್ಟ್ ನ ನಾಗರಾಜ, ಸಿ.ಅಶ್ವಥ್ ಕಲಾಬಳಗದ ಯಲ್ಲನಗೌಡ ಶಂಕರಬಂಡೆ, ಮಾರುತಿ ತೊಗಲು ಗೊಂಬೆ ಟ್ರಸ್ಟ್ ನ ಸುಬ್ಬಣ್ಣ, ಸಂಚಾಲಕ ಟಿ.ರಾಜಾರಾವ್, ಕುರುಗೋಡಿನ ರಂಗ ಬಸವೇಶ್ವರ ಕಲಾ ಟ್ರಸ್ಟ್ ನ ಪದಾಧಿಕಾರಿಗಳು, ಕಲಾವಿದರಾದ ಟಿ.ಹುಲುಗಯ್ಯ ನಾಯಕರ, ಅಮರಾಪುರ ಕುಮಾರಗೌಡ, ಕಲ್ಲುಕಂಬ ಚಿಗುರು ಕಲಾ ತಂಡದ ಬಿ.ಆನಂದ್ ಇನ್ನಿತರರ ನೇತೃತ್ವದಲ್ಲಿ ಅಭಿನಯ ಕಲಾಕೇಂದ್ರದ ಕೆ.ಜಗಧೀಶ್ ಅವರು ಇಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಬಳ್ಳಾರಿಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಸುರೇಶ್ ಬಾಬು ಅವರಿಗೆ ನೀಡಿ ಕ್ರಮಕ್ಕೆ ಆಗ್ರಹಿಸಿದರು.
ಕಲೆಯೇ ನನಗೆ ಆಧಾರ. ಇಳಿ ವಯಸ್ಸಿನಲ್ಲಿಯೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶನದಂತೆ ಬಳ್ಳಾರಿಯ ಹೊಂಗಿರಣ, ಬಯಲು ರಂಗಮಂದಿರ ಮತ್ತು ಕುರುಗೋಡಿನಲ್ಲಿ ಒಟ್ಟು 9 ಕಾರ್ಯಕ್ರಮಗಳನ್ನು ಮಾಡಿರುವೆ. ಇದಕ್ಕಾಗಿ 4 ಲಕ್ಷ ಹಣ ವ್ಯಯಿಸಿದ್ದೇನೆ. ಇದೀಗ ಇಲಾಖೆಯಿಂದ ಕೇವಲ 1 ಲಕ್ಷ ರೂ.ಮಾತ್ರ ನೀಡಿದ್ದಾರೆ. ಉಳಿದ ಹಣ ಹೇಗೆ ಹೊಂದಿಸುವುದು? ಎಂಬ ಚಿಂತೆಯಾಗಿದೆ. ರಾಜ್ಯಪ್ರಶಸ್ತಿ ಪಡೆದ ನನಗೆ ಇದೇನಾ ಮನ್ನಣೆ?
ಸುಜಾತಮ್ಮ,, ಅಧ್ಯಕ್ಷರು
ಸುಜಾತಮ್ಮ ಬಯಲಾಟ ಟ್ರಸ್ಟ್, ಬಳ್ಳಾರಿ.
ಜಿಲ್ಲೆಯ ಕಲಾವಿದರು ಇಂದು ಕಚೇರಿಗೆ ಆಗಮಿಸಿ ತಮ್ಮ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಅನ್ಯಾಯಕ್ಕೊಳಗಾಗಿರುವ ಕಲಾವಿದರ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ತಕ್ಷಣವೇ ಅನ್ಯಾಯ ಸರಿಪಡಿಸಿ ಕಲಾವಿದರಿಗೆ ನ್ಯಾಯ ದೊರಿಕಿಸಿಕೊಡುವ ಎಲ್ಲ ಪ್ರಯತ್ನಗಳನ್ನು ಇಲಾಖೆಯಿಂದಲೇ ಮಾಡುತ್ತೇವೆ.
ಸುರೇಶ್ ಬಾಬು
ಪ್ರಭಾರಿ ಸಹಾಯಕ ನಿರ್ದೇಶಕರು
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಳ್ಳಾರಿ.
——
ಇಂದಿನಿಂದ ಬೇವಿನಹಳ್ಳಿಯ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ
BP NEWS: ಕೊಪ್ಪಳ: ಮಾ.23: ಜಿಲ್ಲೆಯ ಬೇವಿನಹಳ್ಳಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ ಮೂರು ದಿನಗಳ ಕಾಲ ಜರುಗಲಿದೆ.
ಕನಕಗುರು ಪೀಠದ ಕಲಬುರಗಿ ವಿಭಾಗದ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕÉೂಪ್ಪಳ ಗವಿಮಠದ ಶ್ರೀ ಗವಿಶಿದ್ವೇಶ್ವರ ಮಹಾಸ್ವಾಮಿಗಳು, ಮುಂಡರಗಿಯ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ನಗರಗಡ್ಡಿಯ ಶಾಂತವೀರ ಮಹಾಸ್ವಾಮಿಗಳು, ಬಳಗಾನೂರು ಶಾಂತಲಿಂಗೇಶ್ವರ ಮಹಾಸ್ವಾಮಿ, ಶ್ರೀಜಡೇಶ್ವರ ಮಠದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಇನ್ನಿತರ ಹರ ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜgರುಗಲಿವೆ.
ಬೇವಿನಹಳ್ಳಿ ಹಾಗೂ ವಿವಿಧ ಗ್ರಾಮಸ್ಥರಿಂದ ದೀರ್ಘ ದಂಡ ನಮಸ್ಕಾರ, ಭಕ್ತಿಯ ಹರಿಕೆ ಸಲ್ಲಿಸುವ ಕಾರ್ಯಕ್ರಮ ಇರುತ್ತದೆ. ಸಾಯಂಕಾಲ 5:30ಗೆ ಶ್ರೀಮಾರುತೇಶ್ವರ ಉಚ್ಚಾಯ ಉತ್ಸವ ಮತ್ತು ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸರ್ವ ಧರ್ಮದ ಸಾಮೂಹಿಕ ವಿವಾಹ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ, ಸಾಯಂಕಾಲ 5:30ಗೆ ಶ್ರೀ ಮಾರುತೇಶ್ವರ ಮಹಾರಥೋತ್ಸವ, 6:30 ನೀರುಗೊಂಡ ಆಯುವುದು ಮತ್ತು ಗಂಗಾ ಪೂಜೆ, ನಂತರ ಧಾರ್ಮಿಕ ಸಭೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿವೆ.
ನಾಳೆ ಬೆಳಗ್ಗೆ 10 ಗಂಟೆಗೆ ಓಕುಳಿ ಕಾರ್ಯಕ್ರಮ, ಸಾಯಂಕಾಲ 5 ಗಂಟೆಗೆ ಶ್ರೀ ಮಾರುತೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ, ರಾತ್ರಿ 10 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ, ರಾತ್ರಿ 10:30ಕ್ಕೆ ಗಂಟೆಗೆ ಗ್ರಾಮದ ಸ್ಥಳೀಯ ಕಲಾವಿದರಿಂದ ಸಿಂಧೂರ ಲಕ್ಷ್ಮಣ ಎಂಬ ಸಾಮಾಜಿಕ ನಾಟಕ ಜರಗುವುದು.
ಶಾಸಕ ಕೆ ರಾಘವೇಂದ್ರ ಹಿಟ್ನಾಳ್, ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ರಾಜಶೇಖರ್ ಹಿಟ್ನಾಳ್, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್ ವಿ ಗುಮಾಸ್ತೆ, ಪಿ. ನಾರಾಯಣ ಸೇರಿದಂತೆ ಜಿಲ್ಲೆಯ ವಿವಿಧ ಸಮಾಜದ ರಾಜಕೀಯ ಮುಖಂಡರುಗಳು, ವಿವಿಧ ಗ್ರಾಮದ ಎಲ್ಲ ಗಣ್ಯಮಾನ್ಯರು, ವಿವಿಧ ಕ್ಷೇತ್ರದ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಹಾಲುಮತ ಮಹಾಸಭಾ ತಾಲೂಕ ಅಧ್ಯಕ್ಷ ಮುದ್ದಪ್ಪ ಬೇವಿನಹಳ್ಳಿ ತಿಳಿಸಿದ್ದಾರೆ .
—–
ಸಿಎಂ ಗೆ ಅಭಿನಂದಿಸಿದ ಕರ್ನಾಟಕ ಸರ್ಕಾರಿ ನೌಕರರ ಸಂಘ
BP NEWS: ಬಳ್ಳಾರಿ: ಮಾ.23: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಹಾಗೂ ಕೆ.ಜಿ.ಐ.ಡಿ. ಆನ್‍ಲೈನ್ ಸೇವೆಗಳನ್ನು ಮಾರ್ಚ್ 20ರಿಂದ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಅಭಿನಂದನೆ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿರಾವ್, ಜಿಲ್ಲಾ ಕಾರ್ಯದರ್ಶಿ ಜಿ.ಕೆ.ರಾಮಕೃಷ್ಣ ಇವರು, ವಿಧಾನ ಸೌಧದಲ್ಲಿರುವ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಿಎಂ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ್ದು, ಸರ್ಕಾರಿ ನೌಕರರ ಸೇವೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯಾಂಗ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆಯನ್ನು ಮಾಡಿರುವುದು ಸ್ತುತ್ಯ ಎಂದು ಹೇಳಿದ್ದಾರೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಪರಿಣಾಮವಾಗಿ 06 ಲಕ್ಷ ರಾಜ್ಯ ಸರ್ಕಾರಿ ನೌಕರರು ಹಾಗೂ ಸುಮಾರು 25 ಲಕ್ಷ ಅವಲಂಬಿತರು. ಅನುಮೋದಿತವಾದ ಕಾಪೆರ್Çರೇಟ್ ಆಸ್ಪತ್ರೆಗಳಲ್ಲಿ ಯಾವುದೇ ನಗದು ಪಾವತಿಸದೇ ಸಂಪೂರ್ಣ ಉಚಿತವಾಗಿ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ಹಾಗೂ ಔಷದೋಪಚಾರಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕೆ.ಜಿ.ಐ.ಡಿ. ಆನ್‍ಲೈನ್ ಸೇವೆಗಳನ್ನು ಲೋಕಾರ್ಪಣೆ ಮಾಡಿರುವುದರ ಪರಿಣಾಮವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಕೆ.ಜಿ.ಐ.ಡಿ. ಸೇವೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಸಾಲ, ಮೆಚೂರಿಟಿ ಮೊತ್ತ ಇತ್ಯಾದಿಗಳನ್ನು ನೇರವಾಗಿ ಅವರವರ ಬ್ಯಾಂಕ್ ಖಾತೆಗೆ ಪಡೆಯುವ ಸೌಲಭ್ಯ ಪಡೆಯಬಹುದು. ಬ್ಯಾಲೆನ್ಸ್ ಶೀಟ್ ಅನ್ನು ಪ್ರತಿ ತಿಂಗಳು ನೌಕರರ ಮೊಬೈಲ್‍ಗೆ ಕಳುಹಿಸುವುದು, ನೌಕರರ ಬಹುದಿನಗಳ ಬೇಡಿಕೆಗಳನ್ನು, ರಾಜ್ಯ ಸರ್ಕಾರಿ ನೌಕರರ ಬಹು ನಿರೀಕ್ಷಿತ ಸೇವೆಗಳನ್ನು ಪಡೆಯಲು ಶ್ರಮಿಸಿ ಸರ್ಕಾರದ ಆದೇಶಗಳನ್ನು ಮಾಡಿಸಿದ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಹಾಗೂ ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬಳ್ಳಾರಿ ವತಿಯಿಂದ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಅದೇರೀತಿ, 2022-23 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲು ನಾಮ ನಿರ್ದೇಶನಗಳನ್ನು ಕರೆಯಲಾಗಿದ್ದು, ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳಿಗಾಗಿ ಆರ್ಹ ನೌಕರರು/ಅಧಿಕಾರಿಗಳು ಮಾರ್ಚ್ 31 ರೊಳಗಾಗಿ ಆನ್‍ಲೈನ್‍ನಲ್ಲಿ ಸಲ್ಲಿಸಲು ಕೋರಿದ್ದಾರೆ.