BP NEWS: ಬಳ್ಳಾರಿ: ಮಾರ್ಚ್.09: ಇಂದು ನಗರದ ಹಳೆಯ ಬಸ್ ಸ್ಟಾಂಡ್ ನಲ್ಲಿರುವ ಕೆನರಾ ಬ್ಯಾಂಕ್ ಮುಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆದೇಶ ಮತ್ತು ಬಳ್ಳಾರಿಯ ರೀಜನಲ್ ಕೆನರಾ ಬ್ಯಾಂಕ್ ಮಾರ್ಗದರ್ಶನದೊಂದಿಗೆ ನಾಣ್ಯಗಳ ಜಾತ್ರೆ (ಕಾಯಿನ್ಸ್ ಮೇಳಾ) ವನ್ನು ಆಯೋಜಿಸಲಾಗಿದೆ.
ಜನರಿಗೆ 10,20,5,2,1ರೂ ನಾಣ್ಯಗಳನ್ನ ಪ್ರದರ್ಶನಕ್ಕೆ ಇಡಲಾಯಿತು. ಅದಲ್ಲದೆ ಗ್ರಾಹಕರಿಗೆ ನೋಟು ಕೊಟ್ಟು ನಾಣ್ಯ ತೆಗೆದುಕೊಳ್ಳುವವರಿಗೆ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಕರೆನ್ಸಿ ಚೆಸ್ಟ್ ಮ್ಯಾನೇಜರ್ ಶರಣ ಭೂಪಾಲ್ ಅವರು ಮಾತನಾಡಿ ನಾಣ್ಯಗಳು ಬಳಸುವುದರಿಂದ ತುಂಬ ಸುರಕ್ಷಿತ, ಹರೊಯುವುದಿಲ್ಲ, ಕೊಳೆಯಾಗುವುದಿಲ್ಲ, ಬಾಳಿಕೆ ಬರುತ್ತೆ ಆದ್ದರಿಂದ ಎಲ್ಲರು ನಾಣ್ಯಗಳನ್ನಿ ಬಳಸಿ ಎಂದರು.