BP NEWS: ಬಳ್ಳಾರಿ: ಫೆಬ್ರವರಿ.22: ಮಹಾನಗರ ಪಾಲಿಕೆ ವತಿಯಿಂದ ಶೇ.5 ರ ಯೋಜನೆಯಡಿ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಮತ್ತು ಪಾಲಿಕೆಯ ಶೇ.24.10 ರ ಯೋಜನೆಯಡಿ ಪ.ಜಾತಿ&ಪ.ಪಂಗಡ ವರ್ಗದ ಜಿ. ಇ/ಎಂ.ಜಿ.ಜಿ.ಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮವನ್ನು ಪಾಲಿಕೆ ಅವರಣನದಲ್ಲಿ ಬುಧವಾರ ಅಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮಹಾಪೌರರಾದ ರಾಜೇಶ್ವರಿ ಸುಬ್ಬರಾಯುಡು ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಹಾನಗರ ಪಾಲಿಕೆ ವತಿಯಿಂದ ನೀಡಿರುವ ಸೌಲಭ್ಯವನ್ನು ವಿಕಲಚೇತನರು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಈ ವೇಳೆ ಮಹಾನಾಗರ ಪಾಲಿಕೆಯ ಉಪ ಮಹಾಪೌರರಾದ ಮಾಲನ್ ಬಿ. ಸದಸ್ಯರಾದ ಮಿಂಚು ಶ್ರೀನಿವಾಸ್. ಗಾದೆಪ್ಪ. ಕುಬೇರ.ಹನುಮಂತಪ್ಪ . ನಂದೀಶ್.ರಾಮಾಂಜನೇಯಲು.ಹೊನ್ನಪ್ಪ.ಪ್ರಬಂಜನ್. ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಇದ್ದರು.
ಮಹಾನಗರ ಪಾಲಿಕೆ ವತಿಯಿಂದ ದೆಹಲಿಯ ಗಣರಾಜ್ಯೋತ್ಸವದಲ್ಲಿ RDC ಭಾಗಿಯಾಗಿದ್ದ ಕು.ಅವನಿ ಗಂಗಾವತಿಯನ್ನು ಬಳ್ಳಾರಿಮಹಾಪೌರರಾದ ರಾಜೇಶ್ವರಿ ಸುಬ್ಬರಾಯಡು ಹಾಗೂ ಉಪ ಮಹಾಪೌರರಾದ ಮಾಲನ್.ಬಿ ಹಾಗೂ ಪಾಲಿಕೆ ಸದಸ್ಯರು ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಮೇಯರ್ ಮಾತನಾಡಿ ‘ ಕು. ಅವನಿ ನಮ್ಮ ಬಳ್ಳಾರಿಯ ಹೆಮ್ಮೆ, ಈ ಚಿಕ್ಕ ವಯಸ್ಸಿನಲ್ಲಿ ಪ್ರತಿಷ್ಠಿತ ದೆಹಲಿಯ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದು ಅವನಿಯ ಪ್ರತಿಭೆಗೆ ಹಿಡಿದ ಕನ್ನಡಿ. ನೀನು ದೇಶಕ್ಕೆ ಆಸ್ತಿಯಾಗು’ ಅಂತ ಶುಭ ಹಾರೈಸಿದರು.