- BP NEWS: ಬಳ್ಳಾರಿ: ಫೆಬ್ರವರಿ.06: ನಗರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ನಸಿರ್‌ಗ್ ಕಾಲೇಜಿನ ಅಗತ್ಯ ಸೌಲಭ್ಯಗಳಿಲ್ಲ ಎಂದು ಆರೋಪಿಸಿ ಶನಿವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು,
ಆಗ ಕಾಲೇಜಿನ ಆಡಳಿತ ಮಂಡಳಿ ಸೋಮುವಾರದೊಳಗೆ ಸಮಸ್ಯೆಗೆ ಪರಿಹಾರ ನೀಡುವುದಾಗಿ ತಿಳಿಸಿದ್ದರು.
ಆದರೆ ಯಾವುದೇ ಬೇಡಿಕೆಗಳನ್ನು ಈಡೇರಿಸದ ಹಿನ್ನಲೆ ಇಂದು ಮತ್ತೆ ಕಾಲೇಜಿನ ಮುಂದೆ ಧರಣಿನ ಕೂತಿದ್ದಾರೆ.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತನಾಡುತ್ತಾ ಕಾಲೇಜಿನಲ್ಲಿ ಎರಡು ವರ್ಷದಿಂದ ಕ್ಲಿನಿಕ್ ಗಳಿಲ್ಲ ಸಿಬ್ಬಂದಿಗಳು ಅಗತ್ಯ ಸೌಲಭ್ಯಗಳಿಲ್ಲ. ನಿಗದಕ್ಕಿಂತ ಹೆಚ್ಚು ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದು ಪಾವತಿ ಮಾಡಿಲದವರಿಗೆ ಕಿರುಕುಳ ನೀಡಲಾಗುತ್ತಿದ್ದಾರೆ ಹಾಲ್ ಟಿಕೆಟ್ ಕೇಳಿದರೆ ಶುಲ್ಕ ಪಾವುಸಿದರೆ ಮಾತ್ರ ಕೊಡುತ್ತೇವೆ ಅನ್ನುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಕಾಲೇಜು ವಿರುದ್ಧ ನೂರಾರು ವಿದ್ಯಾರ್ಥಿಗಳು ತಮ್ಮ ಅಳುಲನ್ನು ತೋಡಿಕೊಂಡರು ಹಾಗೂ ಮಕ್ಕಳಿಗೆ ಕನ್ನಡಪರ ಹೋರಾಟಗಾರರು ಮತ್ತು ಭೀಮ್ ಆರ್ಮಿ ಸಂಘಟನೆ ಅವರು ಬೆಂಬಲ ನೀಡಿದರು.