ಮೇರು ಚಿತ್ರಕಲಾವಿದ ಡಾ.ಬಿ.ಕೆ.ಎಸ್.ವರ್ಮಾ ಅಸ್ತಂಗತ;

0
127

BP NEWS: ಬೆಂಗಳೂರು: ಫೆಬ್ರವರಿ.06: ಮೇರು ಚಿತ್ರಕಲಾವಿದ ಡಾ.ಬಿ.ಕೆ.ಎಸ್.ವರ್ಮ ಅವರು ಸೋಮವಾರ ಅಸ್ತಂಗತರಾದರು. ಹೃದಯಾಘಾತಕ್ಕೆ ಒಳಗಾಗಿ ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಖ್ಯಾತ ಕಲಾವಿದ ಬಿ.ಕೆ.ಎಸ್‌. ವರ್ಮ ಹೃದಯಾಘಾತದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಂದು ಅಪರಾಹ್ನ 3ರಿಂದ ಸಂಜೆ 4.30ರ ತನಕ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಕನ್ನಡ ತಾಯಿ ಭುವನೇಶ್ವರಿ, ರಾಘವೇಂದ್ರ ಸ್ವಾಮಿ, ರಾಮ-ಹನುಮರ ಚಿತ್ರಗಳನ್ನು ನೋಡಿದಾಗೆಲ್ಲ ಬಿ.ಕೆ.ಎಸ್.ವರ್ಮರನ್ನು ಬಲ್ಲವರಿಗೆಲ್ಲ ಅವರ ನೆನಪಾಗುವುದು ವಾಡಿಕೆ. ವರ್ಮ ಅವರ ಚಿತ್ರ ನೋಡಿದ ಕೂಡಲೇ ಇದು ವರ್ಮ ಅವರದ್ದೇ ಚಿತ್ರ ಎಂದು ಅನೇಕ ಚಿತ್ರಕಲಾ ಅಭಿಮಾನಿಗಳು ಗುರುತಿಸುವಂತೆ ಇರುತ್ತಿತ್ತು ಅವರ ಚಿತ್ರಗಳು.

ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಬಿ.ಕೆ.ಎಸ್‌. ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕನ್ನಡಾಂಬೆ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ಬಹುತೇಕರ ಮನೆಯಲ್ಲಿ, ದೇವರ ಕೋಣೆಗಳಲ್ಲಿ ರಾರಾಜಿಸುತ್ತಿವೆ.

ಕನ್ನಡಾಂಬೆ ಕಲಾಕೃತಿಗೆ ಮನ್ನಣೆ ಸಿಕ್ಕಿಲ್ಲ ಎಂದು ಬೇಸರ ಪಟ್ಟಿದ್ದರು…

ಜೀವವೇ ಮೈದಳಂತೆ ತೋರುವ ಕನ್ನಡಾಂಬೆಯ ಕಲಾಕೃತಿಗೆ ಮನಸೋಲದವರು ಯಾರೂ ಇರಲಾರರು. ಆದರೆ ಇದಕ್ಕೆ ಮನ್ನಣೆ ಸಿಗದೇ ಇದ್ದಾಗ, ಅವರ ಕೃತಿ ಎಂಬುದನ್ನು ನಮೂದಿಸದೇ ಇದ್ದಾಗ ಬಹಳ ನೊಂದುಕೊಂಡಿದ್ದರು ಬಿ.ಕೆ.ಎಸ್‌ ವರ್ಮ ಅವರು.

LEAVE A REPLY

Please enter your comment!
Please enter your name here