ಬಳ್ಳಾರಿ: ಕೋಟೆ ಮಲ್ಲೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವ ಕಾರ್ಯಕ್ರಮ

0
104

BP NEWS: ಬಳ್ಳಾರಿ: ಜನೇವರಿ.31: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯಿಂದ ಬಳ್ಳಾರಿ ನಗರದ ಕೋಟೆ ಪ್ರದೇಶದ ಶ್ರೀ ಕೋಟೆ ಮಲ್ಲೇಶ್ವರ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವವು ಜ.30ರಿಂದ ಫೆ.18ರವರೆಗೆ ನಡೆಯಲಿದೆ.
ಫೆ.1ರಂದು ಸಂಜೆ 6ಕ್ಕೆ ಸಿಂಹ ವಾಹನೋತ್ಸವ, ಫೆ.2ಕ್ಕೆ ಸಂಜೆ 6ಕ್ಕೆ ಶೇಷ ವಾಹನೋತ್ಸವ, ಫೆ.3ರಂದು ಸಂಜೆ 6ಕ್ಕೆ ಗೋಧೂಳಿ ಲಗ್ನದಲ್ಲಿ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ಮತ್ತು ಪಾರ್ವತಿ ದೇವಿಯ ಕಲ್ಯಾಣೋತ್ಸವ ಕಾರ್ಯಕ್ರಮ ಮತ್ತು ಗಜ ವಾಹನೋತ್ಸವ, ಫೆ.4ಕ್ಕೆ ಸಂಜೆ 6ಕ್ಕೆ ವೃಷಭ ವಾಹನೋತ್ಸವ ಹಾಗೂ ಮರಿಸ್ವಾಮಿ ಮಠ ಗರಡಿ ಸಂಘದ ಭಕ್ತ ವೃಂದದವರಿಂದ ಲಾಟಿ ಪ್ರದರ್ಶನ, ಫೆ.5ರಂದು ಬೆಳಗ್ಗೆ 9.30ಕ್ಕೆ ಮೀನ ಲಗ್ನದಲ್ಲಿ ಮಡಿತೇರು ಮತ್ತು ಸಂಜೆ 4ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ.
ಫೆ.18ರಂದು ಮಹಾಶಿವರಾತ್ರಿ ಪ್ರಯುಕ್ತ ಅಭಿಷೇಕ ಪೂಜೆ ಹಾಗೂ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರಾದ ಎಂ.ಹೆಚ್.ಪ್ರಕಾಶ್‍ರಾವ್ ಅವರು ತಿಳಿಸಿದ್ದಾರೆ.
ಸೂಚನೆ: ದೇವಸ್ಥಾನಕ್ಕೆ ಸಲ್ಲಿಸುವ ಕಾಣಿಕೆ ಚಿನ್ನ, ಬೆಳ್ಳಿ, ಇತ್ಯಾದಿಗಳನ್ನು ಕಾರ್ಯನಿರ್ವಾಹ ಅಧಿಕಾರಿಗಳ ಕಚೇರಿಯಲ್ಲಿ ನೀಡಿ, ಅಧಿಕೃತ ರಸೀದಿ ಪಡೆಯಬೇಕು. ರಸೀದಿ ಇಲ್ಲದೇ ನೀಡುವ ಕಾಣಿಕೆಯು ದೇವಸ್ಥಾನಕ್ಕೆ ಸೇರುವುದಿಲ್ಲ. ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯ, ರಥೋತ್ಸವ ಕಾರ್ಯಕ್ಕೆ, ಅಭಿವೃದ್ಧಿಗೆ ದೇಣಿಗೆ ಸಂಗ್ರಹ ಮಾಡಲು ಯಾರನ್ನು ನೇಮಿಸಿರುವುದಿಲ್ಲ. ಪ್ರಥಮ ಬಾರಿಗೆ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ಧ್ವಜಾಹರಾಜು ಮಧ್ಯಾಹ್ನ 3.50ಕ್ಕೆ ಇರುತ್ತದೆ. ಆಸಕ್ತ ಭಕ್ತಾಧಿಗಳು ಭಾಗವಹಿಸಬಹುದಾಗಿದೆ.
ಶಾಶ್ವತೆಯ ಠೇವಣಿ ರೂ.15ಸಾವಿರ ಜಮಾ ಮಾಡಿದಲ್ಲಿ ವರ್ಷದಲ್ಲಿ ಒಂದು ದಿನ ತಮ್ಮ ಹೆಸರಿನಲ್ಲಿ ಅಭಿಷೇಕ ಮಾಡಿಸಲಾಗುವುದು. ವಾರ್ಷಿಕ ಪೂಜಾ ಠೇವಣಿ ರೂ.1ಲಕ್ಷ 50ಸಾವಿರ ಜಮಾ ಮಾಡಿದಲ್ಲಿ ಪ್ರತಿನಿತ್ಯ ಪೂಜಾ ಅಭಿಷೇಕ 365 ದಿನಗಳು ತಮ್ಮ ಹೆಸರಿನಲ್ಲಿ ಮಾಡಲಾಗುವುದು. ದೇವಸ್ಥಾನದಲಿ ನಿತ್ಯ ಹೋಮ, ಅಭಿಷೇಕ, ಅರ್ಚನೆ, ವಿವಿಧ ಸೇವೆಗಳು ಮಾಡಲಾಗುವುದು. ಭಕ್ತಾಧಿಗಳು ಅಧಿಕೃತ ಸೇವಾ ರಸೀದಿ ಪಡೆದು ಪೂಜೆಯಲ್ಲಿ ಭಾಗವಹಿಸಬಹುದು. ಡಿಡಿ ಅಥವಾ ಚೆಕ್ ಮುಖಾಂತರ ದೇಣಿಗೆಯನ್ನು ಸಲ್ಲಿಸುವವರು ದೇವಸ್ಥಾನದ ಇಂಡಿಯನ್ ಬ್ಯಾಂಕ್, ಕ್ಯಾತಲಿಕ್ ಸೆಂಟರ್ ಬ್ರಾಂಚ್, ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ಖಾತೆಗೆ ಐಎಫ್‍ಎಸ್‍ಸಿ ಕೋಡ್ ಐಡಿಐಬಿ.000ಸಿ030. ಖಾತೆಯ ಸಂಖ್ಯೆ 929150098 ಗೆ ಸಂದಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here