ಬಳ್ಳಾರಿಯಲ್ಲಿ ಸಂಭ್ರಮದ 74ನೇ ಗಣರಾಜ್ಯೋತ್ಸವ, ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಚಿತ್ರಣ ಅನಾವರಣ

0
97

BP NEWS: ಬಳ್ಳಾರಿ: ಜನೇವರಿ.26: ಬಳ್ಳಾರಿಯಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಧ್ವಜಾರೋಹಣ ನೆರವೇರಿಸಿದರು.
74ನೇ ಗಣರಾಜ್ಯೋತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ವಿಮ್ಸ್ ಮೈದಾನದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು.
ಹಲವು ಹೋರಾಟ, ತ್ಯಾಗ, ಬಲಿದಾನಗಳ ಫಲವೇ ಈ ದಿನ ಸ್ಮರಿಸಲಾಗುತ್ತದೆ. ಬಳ್ಳಾರಿ ಜಿಲ್ಲೆಯ ನಮ್ಮವರೇ ಆದ ಸಿದ್ದಮ್ಮ, ಟೇಕೂರು ಸುಬ್ರಹ್ಮಣ್ಯ, ಗೊರ್ಲಿ ಶರಣಪ್ಪ, ರುದ್ರಮ್ಮ, ತಿಮ್ಮಪ್ಪ, ವೆಂಕೋಬರಾವ್ ಸೇರಿದಂತೆ ಪ್ರತಿಯೊಬ್ಬ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.


ಸಂವಿಧಾನದ ಮಹತ್ವ: ಎಷ್ಟೇ ದೊಡ್ಡ ವ್ಯಕ್ತಿ ಇರಲಿ, ಎಷ್ಟೇ ಸಣ್ಣ ವ್ಯಕ್ತಿ ಇರಲಿ ಪ್ರತಿಯೊಬ್ಬರಿಗೂ ಒಂದೇ ಮತದಾನ ಹಕ್ಕು, ಇದೇ ಸಂವಿಧಾನದ ಶಕ್ತಿ. ಆದಿವಾಸಿ ಮಹಿಳಾ ಸಾಧಕರೊಬ್ಬರು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಏರುತ್ತಾರೆ, ಸಾಮಾನ್ಯರಲ್ಲಿ ಸಾಮಾನ್ಯರಾದ ಕಿತ್ತಳೆ ಮಾರುವ ಅಕ್ಷರ ಸಂತ ಹಾಜಬ್ಬನವರು ಪ್ರತಿಷ್ಠಿತ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಪದ್ಮಶ್ರೀ ಮಂಜಮ್ಮ ಜೋಗತಿ, ಸಾಮಾನ್ಯ ಟೀ ಮಾರುವ ಬಾಲಕ ಇವತ್ತು ದೇಶ ಕಂಡ ಶ್ರೇಷ್ಠ ಪ್ರಧಾನಿಯಾಗಿ, ಜಾಗತಿಕ ನಾಯಕರಾಗಿದ್ದಾರೆ. ಇದಕ್ಕೆ ನಮ್ಮ ಸಂವಿಧಾನದಲ್ಲಿನ ಅವಕಾಶ ಎಂದರು.
2006 ರಿಂದ 5 ಬಾರಿ ಶಾಸಕನಾಗಿ, 3 ಬಾರಿ ಸಚಿವನಾಗಿ ಜನ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಸಾಮಾಜಿಕ ನ್ಯಾಯಕ್ಕೆ ಹೊಸ ಆಯಾಮವನ್ನು ಕೊಡುವ ಐತಿಹಾಸಿಕ ನಿರ್ಧಾರದ ಕಾಲದಲ್ಲಿ ನಾನು ಪರಿಶಿಷ್ಟ ವರ್ಗಗಳ ಇಲಾಖೆ ಮಂತ್ರಿಯಾಗಿರುವುದು ನನ್ನ ಭಾಗ್ಯವಾಗಿದೆ ಎಂದು ಹೇಳಿದರು.
ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆ ಸ್ಮರಣೆ: ಬಳ್ಳಾರಿಯ ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯು ಲೈಂಗಿಕ ಕಾರ್ಯಕರ್ತೆಯರಿಗೆ, ಮಂಗಳಮುಖಿಯರಿಗೆ ಮತ್ತು ಸಂಕಷ್ಟದಲ್ಲಿ ಇರುವವರಿಗೆ ಸತತವಾಗಿ 15 ವರ್ಷಗಳಿಂದ ಸಮಾನತೆ ಹಾಗೂ ಸ್ವಾಭಿಮಾನದ ಶಕ್ತಿ ತುಂಬುತ್ತ ಬಂದಿದೆ. ಆರೋಗ್ಯದಿಂದ ಆರ್ಥಿಕತೆ ತನಕ, ಅವರಿಗೆ ಆತ್ಮವಿಶ್ವಾಸ ಇರಬಹುದು, ಅವರಿಗೆ ಸಮಾಜದಲ್ಲಿ ಗೌರವ ಇರಬಹುದು. ಇವಕ್ಕೆಲ್ಲ ಶಕ್ತಿ ತುಂಬಿಸುವ ಕೆಲಸ ಸಂಸ್ಥೆ ಮಾಡುತ್ತಿದೆ ಎಂದು ಸ್ಮರಿಸಿದರು.


ಒಂದೂವರೆ ದಶಕದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಈ ಸಂಸ್ಥೆಯ ಸಹಾಯ ಪಡೆದು, ಸ್ವಂತ ಕಾಲಿನ ಮೇಲೆ ನಿಂತಿದ್ದಾರೆ, ಇಂದು ಉದ್ಯೋಗ ಕಂಡು, ಬದುಕು ಕಟ್ಟಿಕೊಂಡಿದ್ದಾರೆ.
ಲೈಂಗಿಕ ಕಾರ್ಯಕರ್ತೆಯರು, ಮಂಗಳಮುಖಿಯರು ಸಹ ಎಲ್ಲರಂತೆ ಸಮಾನರು ಅನ್ನೋ ಸಂದೇಶ ಕೊಟ್ಟು ಅವರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಈ ಸಂಸ್ಥೆಯು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಮೊದಲ ಮದ್ಯಮುಕ್ತ ಗ್ರಾಮ ಉಪ್ಪಾರಹಳ್ಳಿ; ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ಹಿರಿಯರ ಪರಿಶ್ರಮದಿಂದ ಉಪ್ಪಾರಹಳ್ಳಿ ಗ್ರಾಮವನ್ನು “ಜಿಲ್ಲೆಯ ಮೊದಲ ಮದ್ಯಮುಕ್ತ ಗ್ರಾಮವನ್ನಾಗಿ” ಘೋಷಿಸಲಾಗಿದೆ. ಗ್ರಾಮದಲ್ಲಿ ಮದ್ಯ ಸೇವನೆ ಮತ್ತು ಮಾರಾಟವನ್ನು ಗ್ರಾಮದ ಮುಖಂಡರು ನಿಷೇಧಿಸಿದ್ದಾರೆ. ಜನಸಾಮಾನ್ಯರು ಮನಸ್ಸು ಮಾಡಿದ್ರೆ ಯಾವ ಬದಲಾವಣೆಯನ್ನಾದರೂ ಸಾಧಿಸಿ ತೋರಿಸಬಹುದು. ಇದು ಇಡೀ ಬಳ್ಳಾರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.


“ಅಂಧತ್ವ-ಮುಕ್ತ ಬಳ್ಳಾರಿ” ಅಭಿಯಾನ; ಆರಂಭದಲ್ಲಿ 4 ಕೋಟಿ ವೆಚ್ಚದಲ್ಲಿ ಬಳ್ಳಾರಿಯ 2.5 ಲಕ್ಷಕ್ಕೂ ಹೆಚ್ಚು ಕೊಳಚೆ ನಿವಾಸಿಗಳ ಮೇಲೆ ವಿಶೇಷ ಗಮನ ಇಟ್ಟು ಆರಂಭಸಿಲಾದ ಅಭಿಯಾನ ಇಡೀ ಜಿಲ್ಲೆಯಲ್ಲಿ ಅನುμÁ್ಠನ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 11 ಲಕ್ಷ 77 ಸಾವಿರದ 368 ಜನರ ಪರೀಕ್ಷೆ ಮಾಡಿ, ಸುಮಾರು 30,054 ಜನರಿಗೆ ಕನ್ನಡಕಗಳನ್ನು ನೀಡಲಾಗಿದ್ದು, 5,341 ಜನರಿಗೆ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ವಿಶೇಷ ಅಭಿಯಾನಯಾಗಿ ಸುಮಾರು 1 ಲಕ್ಷ ಶಾಲಾ ಮಕ್ಕಳನ್ನು ಕಣ್ಣು ಪರೀಕ್ಷಿಸಲಾಗಿದೆ. ಇದು ಅಂಧತ್ವ-ಮುಕ್ತ ಬಳ್ಳಾರಿ ಅಭಿಯಾನವು ಮಾದರಿ ಆಗಿದೆ ಎಂದರು.
ಇಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ನಮ್ಮ ರಾಜ್ಯದ ಟ್ಯಾಬ್ಲೋ ಹೇಳುವ “ನಾರಿ ಶಕ್ತಿ” ಕೂಡ ನಮ್ಮ ಸಂವಿಧಾನದ ಆಶೋತ್ತರವಾಗಿದೆ. ಹಾಗೆಯೇ ನಮ್ಮ ಸಂವಿಧಾನ ರಚನೆಯ ಶಕ್ತಿಯಾಗಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ, ಹಾಗೆಯೇ ಸಂವಿಧಾನ ರಚನೆಕಾರರಾದ ಬಾಬು ರಾಜೇಂದ್ರ ಪ್ರಸಾದ್, ಪಂಡಿತ್ ನೆಹರು, ಸರ್ದಾರ್ ವಲ್ಲಭಾಯ್ ಪಟೇಲ್ ಅವರಿಗೂ ತಮ್ಮ ಸಂದೇಶಗಳಲ್ಲಿ ನಮನ ಸಲ್ಲಿಸಿದರು.
ಬಳ್ಳಾರಿ ಜಿಲ್ಲೆ ಅಭಿವೃದ್ಧಿ: ಕೃಷಿ, ಗಣಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ನಮ್ಮ ಜಿಲ್ಲೆಯ ಶಕ್ತಿಯಾಗಿವೆ. ಜಗತ್ತಿನ ಶ್ರೇಷ್ಠ ದರ್ಜೆಯ ಕಬ್ಬಿಣ ಮತ್ತು ಉಕ್ಕಿನ ಕನಿಜ ಬಳ್ಳಾರಿ ಜಿಲ್ಲೆಯಲ್ಲಿ ಇದೆ. ಸ್ಟೀಲ್ ಹಬ್, ಟೂರಿಸಂ ಹಬ್ ಮತ್ತು ಫಿಲ್ಮ್ ಸಿಟಿ ಮೂಲಕ ನಮ್ಮ ಜಿಲ್ಲೆಯನ್ನು ಅಭಿವೃದ್ಧಿ ವಿಷಯದಲ್ಲಿ ಅಂತರಾಷ್ಟ್ರೀಯ ಮನ್ನಣೆಗೆ ಪಾತ್ರವಾಗುವ ಜಿಲ್ಲೆ ಮಾಡಬೇಕು ಅನ್ನೋದು ನನ್ನ ಉದ್ದೇಶ ಆಗಿದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಕರ್ನಾಟಕ ರಾಜ್ಯ ಜವಳಿ ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಪೊಲೀಸ್ ಮಹಾನಿರೀಕ್ಷಕರಾದ ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಎಸ್ಪಿ ರಂಜೀತ್‍ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಎಡಿಸಿ ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್, ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here