ಬಳ್ಳಾರಿ ಉತ್ಸವಕ್ಕೆ ವಿಶೇಷ ದೀಪಾಲಂಕಾರ ಮಧುವಣಗಿತ್ತಿಯಂತೆ ಸಿಂಗಾರಗೊಂಡ ಬಳ್ಳಾರಿ

0
86

BP NEWS: ಬಳ್ಳಾರಿ: ಜನೇವರಿ.19: ಚೊಚ್ಚಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಬಾಕಿ ಇದ್ದು, ಉತ್ಸವದ ಪ್ರಯುಕ್ತ ನಗರದ ವಿವಿಧೆಡೆಯ ಮುಖ್ಯ ವೃತ್ತಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ನೋಡಲು ಸಿಂಗಾರಗೊಂಡ ಮಧುವಣಗಿತ್ತಿಯಂತೆ ಕಾಣುತ್ತಿತ್ತು.
ಬಳ್ಳಾರಿ ಉತ್ಸವಕ್ಕೆ ಇನ್ನಷ್ಟು ಮೆರಗನ್ನು ನೀಡಲು ಜಿಲ್ಲಾಡಾಳಿತ ವತಿಯಿಂದ ಆಯೋಜಿಸಿದ್ದ ವಿಶೇಷ ದೀಪಾಲಂಕಾರ ವ್ಯವಸ್ಥೆಗೆ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಗುರುವಾರ ಎಂಎಲ್ಸಿ ವೈ.ಎಂ.ಸತೀಶ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಪಾಲಿಕೆ ಆಯುಕ್ತ ಜಿ.ರುದ್ರೇಶ್, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋ, ರಾಬಕೋವಿ ಜಿಲ್ಲಾ ಹಾಲು ಒಕ್ಕೂಟ ನಿಗಮದ ನಿರ್ದೇಶಕ ವೀರ ಶೇಕರ ರೆಡ್ಡಿ ಸೇರಿದಂತೆ ಇತರರು ಇದ್ದರು.
ನಗರದ ಮುಖ್ಯ ವೃತ್ತಗಳಾದ ಮೋತಿ ಸರ್ಕಲ್, ಎಸ್ ಪಿ ಸರ್ಕಲ್, ದುರುಗಮ್ಮ ಗುಡಿ ಸೇರಿದಂತೆ ಉತ್ಸವದ ವೇದಿಕೆಗೆ ತಲುಪುವ ಮುಖ್ಯ ರಸ್ತೆಗಳಲ್ಲಿ ದೀಪಾಲಂಕಾರ ವ್ಯವಸ್ಥೆಯು ನೋಡುಗರನ್ನು ಆಕರ್ಷಿಸುವ ಜೊತೆಗೆ ಗಮನ ಸೆಳೆಯುವಂತಿತ್ತು.

LEAVE A REPLY

Please enter your comment!
Please enter your name here