ಹಂಪಿ ಉತ್ಸವದಲ್ಲಿ ವಸ್ತು ಪ್ರದರ್ಶನ ಮಳಿಗೆಗಳನ್ನು ಕಾಯ್ದಿರಿಸಲು ಅರ್ಜಿ ಆಹ್ವಾನ

0
96

BP NEWS: ವಿಜಯನಗರ(ಹೊಸಪೇಟೆ): ಜನೇವರಿ.07: ವಿಜಯನಗರ ಜಿಲ್ಲಾಡಳಿತದಿಂದ ಹಂಪಿ ಉತ್ಸವವನ್ನು ಜನವರಿ 27, 28 ಹಾಗೂ 29 ರಂದು ಅಯೋಜಿಸಲಾಗಿದ್ದು, ಹಂಪಿ ಉತ್ಸವದಲ್ಲಿ ವಸ್ತು ಪ್ರದರ್ಶನಕ್ಕಾಗಿ 10*10 ಅಡಿ ಅಳತೆಯ ಮಳಿಗೆಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮತ್ತು ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷರಾದ ಶರಣಪ್ಪ ಮುದಗಲ್ ಅವರು ತಿಳಿಸಿದ್ದಾರೆ.
ಆಸಕ್ತರು ಮಳಿಗೆಗಳನ್ನು ಕಾಯ್ದಿರಿಸಲು ಅರ್ಜಿಯೊಂದಿಗೆ ಅಧ್ಯಕ್ಷರು ಹಂಪಿ ಉತ್ಸವ ವಿಜಯನಗರ ಇವರ ಹೆಸರಿನಲ್ಲಿ ರೂ.3 ಸಾವಿರ ಮೊತ್ತದ ಡಿ.ಡಿ.ಯನ್ನು ತೆಗೆಸಿ, ಜ.13ರ ಸಂಜೆ 5.30ರೊಳಗಾಗಿ ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಅನಿಲ್‍ಕುಮಾರ್ ಅವರ ಮೊ.9449135765 ಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here