BP NEWS: ವಿಜಯನಗರ(ಹೊಸಪೇಟೆ): ಜನೇವರಿ.06: ವಿಜಯನಗರ ಜಿಲ್ಲಾಡಳಿತದ ವತಿಯಿಂದ ಹಂಪಿ ಉತ್ಸವ ಕಾರ್ಯಕ್ರಮವನ್ನು ಜನವರಿ 27, 28 ಹಾಗೂ 29 ರಂದು ಅಯೋಜಿಸಲಾಗಿದ್ದು, ಹಂಪಿ ಉತ್ಸವಕ್ಕೆ ಆಗಮಿಸುವ ಕಲಾವಿದರು, ಅತಿಥಿಗಳು, ಅಧಿಕಾರಿ ಸಿಬ್ಬಂದಿಗಳಿಗೆ ಅವಶ್ಯವಿರುವ ಉಪಹಾರ ಹಾಗೂ ಊಟೋಪಚಾರ ಮಾಡಲು ಆಸಕ್ತಿಯುಳ್ಳ ಅರ್ಹ ಹೋಟೆಲ್ ಮಾಲೀಕರು, ಅಡುಗೆ ತಯಾರಕರು, ಮತ್ತು ಪೂರೈಕೆದಾರರನ್ನು ಆನ್‍ಲೈನ್ http://www.eproc.karnataka.gov.in ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ ಅವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಕೊನೆಯ ದಿನ ಜ.13 ಆಗಿದ್ದು, ಹೆಚ್ಚಿನ ವಿವರಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಿ.ವೀರೇಶ ಅವರ ಮೊ.9731867295 ಅಥವಾ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರ ಮೊ.9902753370 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
Home ಮುಖ್ಯಾಂಶಗಳು ಉಪಹಾರ ಮತ್ತು ಊಟೋಪಚಾರ ಸರಬರಾಜು ಮಾಡಲು ಆಸಕ್ತಿಯುಳ್ಳ ಅರ್ಹ ಹೋಟೆಲ್ ಮಾಲೀಕರು, ಅಡುಗೆ ತಯಾರಕರು, ಪೂರೈಕೆದಾರರಿಂದ...