ಬಳ್ಳಾರಿ ಉತ್ಸವ ನಿಮಿತ್ತ ರಂಗೋಲಿ, ಮೆಹಂದಿ, ಅಡುಗೆ ಸ್ಪರ್ಧೆಗಳಿಗೆ ಭಾಗವಹಿಸಲು ಆಹ್ವಾನ

0
90

BP NEWS: ಬಳ್ಳಾರಿ: ಜನೇವರಿ.03: ಬಳ್ಳಾರಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಜ.20 ಮತ್ತು 21 ರಂದು ಮಹಿಳೆಯರಿಗಾಗಿ ರಂಗೋಲಿ, ಮೆಹಂದಿ, ಅಡುಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಆಸಕ್ತ ಮಹಿಳೆಯರು ಭಾಗವಹಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವಿಜಯಕುಮಾರ ಅವರು ತಿಳಿಸಿದ್ದಾರೆ.
ರಂಗೋಲಿ ಸ್ಪರ್ಧೆ; ರಂಗೋಲಿ ಸ್ಪರ್ಧೆಯನ್ನು ನಗರದ ದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಜ.20 ರಂದು ಅರ್ಹತಾ ಸುತ್ತಿನಲ್ಲಿ ಪ್ರಿಸ್ಟೈಲ್ ಮತ್ತು ಆಧುನಿಕ ಕಲೆ ವಿಧಾನದ ರಂಗೋಲಿ ಸ್ಪರ್ಧೆಯಾಗಿದ್ದು ಇದರಲ್ಲಿ 18-25 ವರ್ಷದ ಮಹಿಳೆಯರು ಭಾಗವಹಸಿಬಹುದು. ಜ.21ರಂದು ಸಾಂಪ್ರದಾಯಿಕ ರಂಗೋಲಿ ವಿಧಾನದ ಅಂತಿಮ ಸ್ಪರ್ಧೆ ನಡೆಯಲಿದೆ. ಇದರಲ್ಲಿ 25 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ.
ರಂಗೋಲಿ ಸ್ಪರ್ಧೆಯ ನಿಯಮಗಳು: ಸ್ಪರ್ಧೆಯ ಅವಧಿ 2 ಗಂಟೆಗಳು (ಬೆಳಗ್ಗೆ 9ರಿಂದ 11ರವರೆಗೆ). ಸ್ಪರ್ಧೆಗೆ ಬೇಕಾಗುವ ಸಾಮಾಗ್ರಿಗಳನ್ನು ಭಾಗವಹಿಸುವ ಸ್ಪರ್ಧಾಳುಗಳೇ ತರಬೇಕು. ಸ್ಪರ್ಧೆಯ ಅವಧಿಯಲ್ಲಿ ಬೇರೋಬ್ಬರ ಸಹಾಯವನ್ನು ಪಡೆಯುವಂತಿಲ್ಲ. ಸ್ಪರ್ಧೆಯಲ್ಲಿ ಪ್ರಿಸ್ಟೈಲ್ ಮತ್ತು ಆಧುನಿಕ ಕಲೆ ಹಾಗೂ ಸಾಂಪ್ರದಾಯಿಕ ರಂಗೋಲಿಯನ್ನು ಹಾಕಬೇಕು. ಸ್ಪರ್ಧೆಗೆ ರಂಗೋಲಿ ಪುಡಿ ಹಾಗೂ ಬಣ್ಣಗಳನ್ನು ಮಾತ್ರ ಉಪಯೋಗಿಸಬೇಕು. ಸ್ಪರ್ಧಾಳುಗಳು ತಮಗೆ ನಿಗದಿಪಡಿಸಿದ ಸ್ಥಳದಲ್ಲಿಯೇ ರಂಗೋಲಿಯನ್ನು ಹಾಕಬೇಕು. ಸ್ಪರ್ಧೆ ಪ್ರಾರಂಭವಾಗುವ ಸಮಕ್ಕಿಂತ ಒಂದು ಗಂಟೆ ಮುಂಚಿತವಾಗಿ ನಿಗದಿತ ಸ್ಥಳದಲ್ಲಿ ಹಾಜರಿರಬೇಕು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.
ಮೆಹಂದಿ ಸ್ಪರ್ಧೆ: ಮೆಹಂದಿ ಸ್ಪರ್ಧೆಯನ್ನು ಜ.21ರಂದು ಬೆಳಗ್ಗೆ 10ಕ್ಕೆ ಮುನ್ಸಿಪಲ್ ಗ್ರೌಂಡ್ ಆವರಣದಲ್ಲಿ ಏರ್ಪಡಿಸಿದೆ. ಸ್ಪರ್ಧೆಯಲ್ಲಿ ಎರಡು ಅಂಗೈಗಳಿಗೆ ಮೆಹಂದಿ ಹಾಕಬೇಕು. ಮೆಹೆಂದಿ ಹಾಕಿಸಿಕೊಳ್ಳಲು ಒಬ್ಬ ಮಹಿಳೆಯನ್ನು ಜೊತೆಯಲ್ಲಿ ಕರೆದುಕೊಂಡು ಬರಬೇಕು.
ಅಡುಗೆ ಸ್ಪರ್ಧೆ: ಅಡುಗೆ ಸ್ಪರ್ಧೆಯನ್ನು ಜ.22ರಂದು ನಗರದ ಕಮ್ಮವಾರಿ ಭವನದಲ್ಲಿ ಏರ್ಪಡಿಸಿದ್ದು, 18ರಿಂದ 45 ವರ್ಷದೊಳಗಿನ ಮಹಿಳೆಯರು ಭಾಗವಹಿಸಬಹುದಾಗಿದೆ.
ಸಾಂಪ್ರದಾಯಿಕ ಅಡುಗೆ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ, ಬಳ್ಳಾರಿ ವಿಶೇಷ ಅಡುಗೆ ವಿಭಾಗಗಳಿಂದ ಕೂಡಿರಬೇಕು. ಸಾಂಪ್ರದಾಯಿಕ ಅಡುಗೆ ಸ್ಪರ್ಧೆ ವಿಭಾಗದಲ್ಲಿ ಸಂಕ್ರಾಂತಿ, ಯುಗಾದಿ, ಗೌರಿ ಹಬ್ಬಗಳ ವಿಶೇಷ ಅಡುಗೆಗಳ ತಯಾರಿಗೆ ಪ್ರಾಧಾನ್ಯತೆ ನೀಡಲಾಗಿದೆ. ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಿದ ನಂತರ ಪ್ರದರ್ಶಿಸಲು ಮಣ್ಣಿನಿಂದ ಮಾಡಿದ ಗಡಿಗೆಗಳನ್ನು ಬಳಸುವುದು.(ಸ್ಪರ್ಧಾಳುಗಳು ಸ್ವತಃ ಸಾಮಗ್ರಿಗಳನ್ನು ತೆಗೆದುಕೊಂಡು ಬರುವುದು).
ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ: ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ ವಿಭಾಗದಲ್ಲಿ ದ್ರವ ರೂಪದ ಹೊರತುಪಡಿಸಿ ಯಾವುದೇ ರೀತಿಯ ಅಡುಗೆಗಳನ್ನು ತಯಾರಿಸಬಹುದು.
ಬಳ್ಳಾರಿ ವಿಶೇಷ ಅಡುಗೆ : ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಾದೇಶಿಕವಾಗಿ ತಯಾರಿಸುವಂತಹ ಅಡುಗೆಗಳಿಗೆ ಪ್ರಾಧಾನ್ಯತೆ ನೀಡುವುದು. ಬಳ್ಳಾರಿ ವಿಶೇಷ ಅಡುಗೆ ವಿಭಾಗದಲ್ಲಿ ಮಹಿಳೆಯರು ಇಚ್ಛಿಸಿದಲ್ಲಿ ಮನೆಯಿಂದ ತಯಾರಿಸಿಕೊಂಡು ಬಂದು ಸಹ ಇಲ್ಲಿ ಪ್ರದರ್ಶಿಸಬಹುದಾಗಿದೆ. ಬಳ್ಳಾರಿ ವಿಶೇಷ ಅಡುಗೆಗಳನ್ನು ತಯಾರಿಸಿದ ನಂತರ ಪ್ರದರ್ಶಿಸಲು ಮಣ್ಣಿನಿಂದ ಮಾಡಿದ ಗಡಿಗೆಗಳನ್ನು ಬಳಸುವುದು (ಸ್ಪರ್ಧಾಳುಗಳು ಸ್ವತಃ ಸಾಮಗ್ರಿಗಳನ್ನು ತೆಗೆದುಕೊಂಡು ಬರುವುದು).
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿ ಅಥವಾ ದೂ.08392-294127ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here