ಬಳ್ಳಾರಿ: ಮಾವ ನಾರಾಯಣ ದಾಸರ ನೆನೆದು ಕಣ್ಣೀರು ಹಾಕಿದ‌ ದಲಿತ‌ ಮುಖಂಡ ಎಲ್.‌ಮಾರೆಣ್ಣ

0
106

BP NEWS: ಬಳ್ಳಾರಿ: ಡಿಸೆಂಬರ್.31: ಬಿಸಿಲೂರ‌ಪೋಸ್ಟ್ ಘಟಕವಾದ ಬಿಪಿ‌ನ್ಯೂಸ್ ನಲ್ಲಿ‌ಎಲ್ಲಾ ಪಕ್ಷ ಎಲ್ಲಾ ಆಕಾಂಕ್ಷಿಗಳೊಂದಿಗೆ‌ ಮುಕ್ತವಾಗಿ‌ಚರ್ಚಿಸುವ‌ ‘ನಿಮ್ಮ ಸೇವಾಕಾಂಕ್ಷಿ’ ಅನ್ನುವ ಕಾರ್ಯಕ್ರಮದಲ್ಲಿ‌ ಹಗರಿ ಬೊಮ್ಮನ ಹಳ್ಳಿಯ ಟಿಕೆಟ್ ಆಕಾಂಕ್ಷಿಯಾದ ದಲಿತ‌ಮುಖಂಡ ಎಲ್.‌ಮಾರೆಣ್ಣ ನವರನ್ನು‌ ಅತಿಥಿಯಾಗಿ ಅಹ್ವಾನಿಸಿತ್ತು.
ಕಾರ್ಯಕ್ರಮ ಪ್ರಾರಂಭದಲ್ಲಿ‌ ಸಂಪಾಕರಾದ ಅರುಣ್ ಭೂಪಾಲ್ ಅವರು‌ ಮಾತನಾಡುವಾಗ ‘ ನೀವಿದ್ದ ಸರ್ಕಾರಿ‌ ನೌಕರಿಯನ್ನು ತ್ಯಜಿಸಿ,‌ ನಿಮ್ಮ ಬದುಕನ್ನು ಸಂಘಟನೆ‌ ಮುಡಿಪಿಟ್ಟಾಗ ನಿಮ್ಮ ಮಾವನವರಾದ ನಾರಾಣದಾಸರ ಪ್ರತಿಕ್ರಿಯೆ ಹೇಗಿತ್ತು?’ ಅಂದಾಗ ತುಂಭಾ ಭಾವುಕರಾಗು ಗಳಗಳನೆ ಅತ್ತುಬಿಟ್ಟರು.
1999 ರಲ್ಲಿ ಬಳ್ಳಾರಿಯ ಒಪಿಡಿಯಲ್ಲಿ ಲ್ಯಾಬ್ ಟಿಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂಧರ್ಭದಲ್ಲಿ ಹೋರಾಟದ ತುಡಿತ ಅದಕ್ಕೆ ರಾಜಿನಾಮೆ‌ಕೊಟ್ಟು ಸಮಾಜದತ್ತ‌ ಮುಖ‌ಮಾಡಿದರು.


ನಂತರ 2001ರಲ್ಲಿ ತಾಲ್ಲೂಕು‌ ಪಂಚಾಯತ್ ಉಪಾಧ್ಯಕ್ಷರಾಗಿ‌ ಅಯ್ಕೆಯಾದರು. 2013 ರಲ್ಲಿ ಮೀಸಲಾತಿ ಕ್ಷೇತ್ರ ಹಗರಿಬೊಮ್ಮನ‌ಹಳ್ಳಿಯಲ್ಲಿ ಕಾಂಗ್ರೆಸ್ ಕಡೆಯಿಂದ ಸ್ಪರ್ಧಿಸಿ 4-5 ಸಾವಿರ ಮತಗಳಿಂದ ಪರಾಭವಗೊಂಡರು.
ಈ ಬಾರಿ‌ ಮತ್ತೆ ಸಾಮಾಜಿಕ‌ ನ್ಯಾಯದ ಅಡಿಯಲ್ಲಿ‌ ಹಗರಿಬೊಮ್ಮನ‌ಹಳ್ಳಿಯಲ್ಲಿ ವಿಧಾನ‌ಸಭಾ ಚುನಾವಣೆ -2023ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಕೊನೆಯುಸಿರು‌ ಇರೋ ವರೆಗೂ ಹಗರಿಬೊಮ್ಮನ ಹಳ್ಳಿ ‌ಕ್ಷೇತ್ರದ ಜನತೆಗೆ ಧವನಿಯಾಗುತ್ತೇನೆ ಅನ್ನುವ‌ ಅವರ ನಿಲುವು ಸ್ವಾಗತಾರ್ಹ.

LEAVE A REPLY

Please enter your comment!
Please enter your name here