ಬಳ್ಳಾರಿ ಉತ್ಸವ ಉಪ ಸಮಿತಿಗಳ ಸಭೆ

0
112

BP NEWS: ಬಳ್ಳಾರಿ: ಡಿಸೆಂಬರ್.30: ಚೊಚ್ಚಲ ಬಳ್ಳಾರಿ ಉತ್ಸವದಲ್ಲಿ ಸಾಂಪ್ರದಾಯಿಕ ಹಾಗೂ ಜಿಲ್ಲೆಯ ಸಾಂಸ್ಕøತಿಕ ಇತಿಹಾಸವನ್ನು ಬಿಂಬಿಸುವ ಕಾರ್ಯಕ್ರಮದ ಜೊತೆಗೆ ಜಿಲ್ಲೆಯ ಇತಿಹಾಸಕಾರರು, ಕಲಾವಿದರು, ಜಿಲ್ಲೆಯ ರೂವಾರಿಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಸೇರಿದಂತೆ ಪ್ರಮುಖ ಕ್ರೀಡೆ, ಸಾಂಪ್ರದಾಯಿಕವಾದ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲುವ ಉತ್ಸವ ಮಾಡುವ ನಿಟ್ಟಿನಲ್ಲಿ ಎಲ್ಲಾ ಉಪ ಸಮಿತಿಯ ಅಧ್ಯಕ್ಷರು ಯೋಜನೆ ರೂಪಿಸಲು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿಯವರು ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಉತ್ಸವದ ಉಪಸಮಿತಿಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜ.4 ರಂದು ಉತ್ಸವದ ಲಾಂಛನ ಬಿಡುಗಡೆ, ಜ.5 ಕ್ಕೆ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆಯಾಗಲಿದ್ದು ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಉತ್ಸವಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕಲಾವಿದರಿಗೆ ವಸತಿ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ತಾಲೂಕು ಮತ್ತು ಹಳ್ಳಿಗಳಿಂದ ಉತ್ಸವಕ್ಕೆ ಬರುವ ಜನರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಅಧಿಕಾರಿಗಳು ನೋಡಿಕೊಳ್ಳಬೇಕು. ಉತ್ಸವದ ಎರಡು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾರ್ವಜನಿಕರಿಗೆ ಅಗತ್ಯ ಶೌಚಾಲಯಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಅನಂತಪುರ ರಸ್ತೆ ಕಡೆಯಿಂದ ಬರುವವರಿಗೆ ನೂತನ ಜಿಲ್ಲಾಡಳಿತ ಭವನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕೌಲ್ ಬಜಾರ್ ನಿಂದ ಬರುವವರಿಗೆ ಹಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಮತ್ತು ಉತ್ಸವದ ವೇಳೆ ಅಗತ್ಯ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾ ಪೊಲೀಸ್ ಅಧಿಕ್ಷಕರಿಗೆ ತಿಳಿಸಿದರು.


ಆಕರ್ಷಕ ವಸ್ತುಪ್ರದರ್ಶನ; ಉತ್ಸವದಲ್ಲಿ 100 ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಾಣ ಮಾಡಲಿದ್ದು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ವಸ್ತುಪ್ರದರ್ಶನದ ಜೊತೆಗೆ ಖಾಸಗಿಯವರು ಉತ್ಪಾದಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ನೀಡಲಾಗುತ್ತದೆ. ಮತ್ತು ಫುಡ್ ಸ್ಟಾಲ್‍ಗಳಿಗೂ ಅವಕಾಶ ಕಲ್ಪಿಸಲಾಗುತ್ತಿದ್ದು ಮುನ್ಸಿಪಲ್ ಮೈದಾನದಲ್ಲಿ ಸುತ್ತಲಿನ ಕಾಂಪೌಂಡ್ ಹತ್ತಿರ ವಸ್ತುಪ್ರದರ್ಶನದ ಮಳಿಗೆಗಳನ್ನು ನಿರ್ಮಾಣ ಮಾಡಲು ತಿಳಿಸಿದರು.
ಫಲಪುಷ್ಪ ಪ್ರದರ್ಶನ; ತೋಟಗಾರಿಕೆ ಇಲಾಖೆ ವತಿಯಿಂದ ಡಾ.ಪುನೀತ್ ರಾಜ್‍ಕುಮಾರ್ ಅವರ ಮೂರ್ತಿಯ ಫಲಪುಷ್ಪ ವಿನ್ಯಾಸ, ಕನಕದುರ್ಗಮ್ಮ ಮತ್ತು ಸಿಂಹಲಾಂಛನ ಮತ್ತು ಶ್ರಮಿಸಿದ ಮಹನೀಯರ ಮೂರ್ತಿಗಳನ್ನು ಪುಷ್ಪಗಳಿಂದ ಅಲಂಕರಿಸಬೇಕು. ವೇದಿಕೆ ಕಾರ್ಯಕ್ರಮಗಳ ಹತ್ತಿರ ಹೆಲ್ಪ್‍ಲೈನ್ ಕಂಟ್ರೋಲ್ ರೂಂ ಹಾಗೂ ಅಂಬುಲೈನ್ಸ್ ವ್ಯವಸ್ಥೆಯನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಚಿತ್ರಕಲಾ ಶಿಬಿರ, ಸಂಗನಕಲ್ಲು ಗ್ರಾಮದಿಂದ ಮೋಕಾವರೆಗೂ ಮ್ಯಾರಾಥನ್ ಓಟ, ಗಾಳಿಪಟ ಸ್ಪರ್ಧೆ, 200 ಕ್ಕೂ ಹೆಚ್ಚು ಅಲಂಕೃತ ಎತ್ತಿನಗಾಡಿ ಮೆರವಣಿಗೆ. ಪ್ರಮುಖ ರಸ್ತೆಗಳ ಹಾಗೂ ವೃತ್ತಗಳಲ್ಲಿ ವೈವಿಧ್ಯಮ ದೀಪಾಪಲಂಕಾರ, ಅಡುಗೆ ಸ್ಪರ್ಧೆ, ರಂಗೋಲಿ, ಮೆಹಂದಿ ಸ್ಪರ್ಧೆ ಹಾಗೂ ಪ್ರದರ್ಶನ. ಸಾಹಸ ಕ್ರೀಡೆಗಳ ಬೈಕ್ ಸ್ಟಂಟ್, ಹಾರ್ಸ್ ಜಂಪಿಂಗ್, ಜಿಪ್‍ಲೈನ್, ರಾಕ್ ಕ್ಲೈಬಿಂಗ್ ಮತ್ತು ಹಾಟ್ ಏರ್ ಬಲೂನ್. ಮುನ್ಸಿಪಲ್ ಮೈದಾನ ಹಾಗೂ ಜಿಲ್ಲಾಡಳಿತ ಭವನದ ಅವರಣದಲ್ಲಿ ಮರಳು ಶಿಲ್ಪ ಕಲೆ, ಮತ್ಸಮೇಳ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕಬ್ಬಡಿ, ಕುಸ್ತಿ, ಮಲ್ಲಕಂಬ ಮತ್ತು ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಶ್ವಾನ ಪ್ರದರ್ಶನ ನಡೆಯಲಿದ್ದು, ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.
ಮುನ್ಸಿಪಲ್ ಮೈದಾನದಲ್ಲಿ ಸಂಜೆ ಸ್ಥಳಿಯ ಕಲಾವಿದರಿಂದ ಜಾನಪದ ಗೀತೆ, ಶಾಸ್ತ್ರಿಯ ನೃತ್ಯ, ಸುಗಮ ಸಂಗೀತ, ಜಾನಪದ ನೃತ್ಯ, ನೃತ್ಯ ವೈವಿದ್ಯಾ, ಶಾಸ್ತ್ರಿಯ ಗಾಯನ, ನೃತ್ಯ ರೂಪಕ, ಶಹನಾಯಿ ವಾದನ, ಜಗೋತಿ ನೃತ್ಯ, ಸಮೂಹ ಗಾಯನ, ಖ್ಯಾತ ಸಂಗೀತ ಗಾಯಕರಾದ ಮಂಗ್ಲಿ, ಅರ್ಜುನ ಜನ್ಯಾ ತಂಡದಿಂದ ರಸಮಂಜರಿ, ಎಂ.ಡಿ.ಪಲ್ಲವಿ ರವರಿಂದ ಗೀತಗಾಯನ ಕಾರ್ಯಕ್ರಮ ನಡೆಯಲಿವೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಎಡಿಸಿ ಪಿ.ಎಸ್.ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.

LEAVE A REPLY

Please enter your comment!
Please enter your name here