ಯಶಸ್ವಿಯಾಗಿ ನೆರವೇರಿದ ಜಿಲ್ಲಾ ಮಟ್ಟದ ಶೈಕ್ಷಣಿಕ ಹಾಗೂ ವೃತ್ತಿ ಶಿಕ್ಷಣ ಕಲೋತ್ಸವ ಕಾರ್ಯಕ್ರಮ 2022-23

0
132

BP NEWS: ಬಳ್ಳಾರಿ: ನವೆಂಬರ್.30:  29/11/2022ರಂದು ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ಕಾರ್ಯಕ್ರಮ ಸೆಂಟ್ ಜಾನ್ ಅನುದಾನಿತ ಪ್ರೌಢಶಾಲೆ ಕೋಟೆ, ಬಳ್ಳಾರಿಯಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬಳ್ಳಾರಿ ಜಿಲ್ಲಾ ಉಪ ನಿರ್ದೇಶಕರಾದ ಅಂಧಾನಪ್ಪ ಎಮ್ ವಡಗೇರಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯಿಂದ ವೃತ್ತಿ ಶಿಕ್ಷಣ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವಿಜೇತರಾದ ಮಕ್ಕಳ ಪಟ್ಟಿ ಕೆಳಗಿನಂತಿದೆ. ಹೊಲಿಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೀ ಉಜ್ಜಿನಿ ಜಗದ್ಗುರುಗಳ ಅನುದಾನಿತ ಪ್ರೌಢಶಾಲೆ, ಬಳ್ಳಾರಿಯ ಮಕ್ಕಳು ಈ ಬಹುಮಾನವನ್ನು ಪಡೆದರು.
ದ್ವಿತೀಯ ಸ್ಥಾನವನ್ನು ಉರ್ದು ಮಹಿಳೆಯರ ಅನುದಾನಿತ ಬಾಲಕಿಯರ ಪ್ರೌಢಶಾಲೆ ಕಮೇಲ ರಸ್ತೆ ಬಳ್ಳಾರಿಯ ಮಕ್ಕಳು ಬಹುಮಾನವನ್ನು ಗಳಿಸಿದ್ದು, ತೃತೀಯ ಸ್ಥಾನವನ್ನು ಎಸ್ ಇ ಎಸ್ ಅನುದಾನಿತ ಪ್ರೌಢಶಾಲೆ ಸಿರುಗುಪ್ಪ ಶಾಲೆಯ ಮಕ್ಕಳು  ಬಹುಮಾನವನ್ನು ಪಡೆದಿದ್ದಾರೆ.

ಎಸ್ ಯು ಪಿ ಡಬ್ಲ್ಯೂ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೆ ಪಿ ಎಸ್ ಮೋಕಾ ಬಳ್ಳಾರಿ ಪೂರ್ವ ವಲಯದ ಮಕ್ಕಳು ಪಡೆದರು. ದ್ವಿತೀಯ ಸ್ಥಾನವನ್ನು ಶ್ರೀ ಕಂಪಿಲರಾಯ ಅನುದಾನಿತ ಪ್ರೌಢಶಾಲೆ ಅಲ್ಲಿಪುರ ಕುರುಗೋಡು ವಲಯದ ಮಕ್ಕಳು ಪಡೆದಿದ್ದು, ತೃತೀಯ ಸ್ಥಾನವನ್ನು ಬಸಮ್ಮ ಅನುದಾನಿತ ಪ್ರೌಢಶಾಲೆ ಕುರುಗೋಡು ವಲಯ ಶಾಲೆಯ ಮಕ್ಕಳು  ಪಡೆದರು.

ತೋಟಗಾರಿಕೆ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೀ ಕುಮಾರಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಗೊಲ್ಲಲಿಂಗಮ್ಮನಹಳ್ಳಿಯ ಸಂಡೂರು ತಾಲೂಕಿನ ಮಕ್ಕಳು  ಪಡೆದರು.  ದ್ವಿತೀಯ ಸ್ಥಾನವನ್ನು ಸರ್ಕಾರಿ ಪ್ರೌಢಶಾಲೆ ರಾಮಸಾಗರ ಕಂಪ್ಲಿ ತಾಲೂಕಿನ ಮಕ್ಕಳು ಪಡೆದಿದ್ದು,  ತೃತೀಯ ಸ್ಥಾನವನ್ನು ಶ್ರೀ ಕಾರ್ತಿಕೇಶ್ವರ ಅನುದಾನಿತ ಪ್ರೌಢಶಾಲೆ ತಾರಾನಗರ ಸಂಡೂರು ತಾಲೂಕಿನ ಮಕ್ಕಳು ಪಡೆದರು.

ಭಾಗವಹಿಸಿದ ಎಲ್ಲಾ ಶಾಲೆಯ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಶಿಕ್ಷಕರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಪ್ರಥಮ ಸ್ಥಾನ ಗಳಿಸಿದ ಶಿಕ್ಷಕರು ಇನ್ನು ಹೆಚ್ಚಿನ ಮಟ್ಟದಲ್ಲಿ ಮಕ್ಕಳಿಗೆ ಕಲಿಸುತ್ತಾ ರಾಜ್ಯಮಟ್ಟಕ್ಕೆ ಭಾಗವಹಿಸಿ ನಮ್ಮ ಜಿಲ್ಲೆಗೆ ಕೀರ್ತಿ ತರಲು ಎಂದು ಕೆ ಎಂ ವೇದಾವತಿ ವೃತ್ತಿ ವಿಷಯ ಪರೀವೀಕ್ಷಕರು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಬಳ್ಳಾರಿ ಅವರು ಬಿ ಪಿ ನ್ಯೂಸ್ ಮೂಲಕ ಹಾರೈಸಿದರು.

 

LEAVE A REPLY

Please enter your comment!
Please enter your name here