BP NEWS: ಬಳ್ಳಾರಿ: ನವೆಂಬರ್.28: ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರುಗಳಿಗೆ ಜಿಲ್ಲಾ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಡಿ.3ರಂದು ಬೆಳಗ್ಗೆ 10.30ಕ್ಕೆ ಕೌಲ್‍ಬಜಾರ್‍ನ ಮೊಹಮ್ಮದೀಯ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಂದಾನಪ್ಪ ಎಂ ವಡಗೇರಿ ಅವರು ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆಯ ವಿಷಯಗಳು(ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ): ಶಿಕ್ಷಣ ಕ್ಷೇತ್ರದ ಮೇಲೆ ಕೋವೀಡ್-19ರ ಪರಿಣಾಮಗಳು, ಕಲಿಕಾ ಚೇತರಿಕೆ ಉಪಕ್ರಮದ ಸಾಧಕ ಬಾಧಕಗಳು, ಪರಿಸರ ಮಾಲಿನ್ಯ ಕುರಿತು.
ಪ್ರಬಂಧ ಸ್ಪರ್ಧೆಯ ವಿಷಯಗಳು (ಪ್ರೌಢಶಾಲಾ ಶಿಕ್ಷಕರಿಗೆ): ನನ್ನ ಅನಿಸಿಕೆಯಲ್ಲಿ ಹವಮಾನ ವೈಪರೀತ್ಯಗಳನ್ನು ತಡೆಯಲು ಅನುಸರಿಸಬಹುದಾದ ನಾವೀನ್ಯತಾ ಚಟುವಟಿಕೆಗಳು, ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ (NEP) ಅನುμÁ್ಠನದಿಂದ ಕಂಡು ಬರುವ ಶೈಕ್ಷಣಿಕ ಬದಲಾವಣೆಗಳು, ನನ್ನ ದೃಷ್ಟಿಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಅನುಸರಿಸಬಹುದಾದ ಉತ್ತಮ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ರಮಗಳು.
ಚಿತ್ರಕಲಾ ಸ್ಪರ್ಧೆಯ ವಿಷಯಗಳು (ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ): ಗ್ರಾಮೀಣ ಉದ್ಯೋಗಗಳು, ಸರ್ಕಾರದ ಪ್ರೋ ತ್ಸಾಹದಾಯಕ ಕಾರ್ಯಕ್ರಮಗಳು, ಸ್ವಚ್ಚ ಭಾರತ.
ಚಿತ್ರಕಲಾ ಸ್ಪರ್ಧೆಯ ವಿಷಯಗಳು (ಪ್ರೌಢಶಾಲಾ ಶಿಕ್ಷಕರಿಗೆ): ಕಲಿಕಾ ಸ್ನೇಹಿ ಪರಿಸರ.
ಯುದ್ಧದಿಂದ ಉಂಟಾಗುವ ದುಷ್ಪರಿಣಾಮಗಳು. ಸ್ವಚ್ಛ ಭಾರತ ಅಭಿಯಾನದಲ್ಲಿ ಶಿಕ್ಷಕರ ಪಾತ್ರ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.