BP NEWS: ಬಳ್ಳಾರಿ: ನವೆಂಬರ್.20: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಕನ್ನಡ ನಾಡು ನುಡಿಯ ಅಭಿಮಾನವನ್ನು ಹೆಚ್ಚಿಸುವ ಗುರಿಯನ್ನಿಟ್ಟುಕೊಂಡು ಕನ್ನಡ ಜಾತ್ರೆ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೇಗಳನ್ನು ಹಾಗು ಸಂಜೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ ಎಂ ರವಿಶಂಕರ್ ಅಧ್ಯಕ್ಷರು ಹಳೇ ವಿದ್ಯಾರ್ಥಿಗಳ ಸಂಘ ಸ.ಕಿ.ತಾ.ಶಾಲೆ ಮುಖೇಶ್ ಕುಡಪಲಿ ವೈದ್ಯರು, ಎಂ ಶಿವಾಜಿರಾವ್ ಜಿಲ್ಲಾಧ್ಯಕ್ಷರು ಕ.ರಾ.ಸ.ನೌ.ಸಂಘ ಬಳ್ಳಾರಿ ನಿಷ್ಠಿ ರುದ್ರಪ್ಪ ಜಿಲ್ಲಾಧ್ಯಕ್ಷರು ಕ.ಸಾ.ಪ.ಬಳ್ಳಾರಿ ಶ್ರೀಮತಿ ಶೋಭರಾಣಿ ಸಹಾಯಕ ಪ್ರಾಧ್ಯಪಕರು ಸ.ಸ.ಅ.ಪ್ರ.ದ ಕಾಲೇಜು ಬಳ್ಳಾರಿ ಬಿ ವಿ ಪ್ರಕಾಶ್ ಪ್ರಾಂಶುಪಾಲರು ಸ.ಕಿ.ತಾ ಶಾಲೆ ಬಳ್ಳಾರಿ ಕೆ ಜಿ ನಾಗರಾಜ್ ಪ್ರಾಧ್ಯಪಕರು ಸ.ಕಿ.ತಾ ಶಾಲೆ ಬಳ್ಳಾರಿ ರವರು ಉಪಸ್ಥಿತರಿದ್ದರು.
2022 ನೇ ಸಾಲಿನ ಸಂಸ್ಥೆಯ ಕನ್ನಡ ಕಣ್ಮಣಿ , ನಮ್ಮ ಹೆಮ್ಮೆಯ ಪ್ರತಿಭೆ , ಹೆಮ್ಮೆಯ ಕನ್ನಡಿಗ ಪ್ರಶಸ್ತಿಗಳನ್ನು ಕ್ರಮವಾಗಿ ಹೆಚ್ ಪಾಂಡುರಂಗಪ್ಪ ರಾಜ್ಯೋತ್ಸವ ಪುರಸ್ಕೃತರು ಬಳ್ಳಾರಿ , ವೀರೇಶ್ ಪಿ ಎಂ ನಿರ್ದೇಶಕರು ಕನ್ನಡ ಚಿತ್ರರಂಗ , ಎಂ ತಿಪ್ಪೇಸ್ವಾಮಿ ಅಂತಾರಾಷ್ಡ್ರೀಯ ಗಾಲಿ ಕುರ್ಚಿ ಕ್ರೀಕೆಟ್ ಕ್ರೀಡಾಪಟು ಬಳ್ಳಾರಿ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕನ್ನಡದ ಸ್ಪರ್ಧೇಗಳಲ್ಲಿ 550 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಭಾಗವಹಿಸಿದ್ದರು ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಸುದರ್ಶನ್ ರವರು ಕನ್ನಡದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ನಮಗೆಲ್ಲರಿಗೂ ಖುಷಿ ಹಾಗು ಎಲ್ಲಡೇ ಕನ್ನಡ ಕಾಣುವಂತಾಗಬೇಕು ಕನ್ನಡ ಕೇಳುವಂತಾಗಬೇಕು ಎಂದು ತಿಳಿಸಿದರು.
ಬಹುಮಾನ ವಿತರಿಸಿ ಮಾತಾಡಿದ ಅಧ್ಯಕ್ಷರಾದ ವಿನಯ್ ರವರು ಕನ್ನಡದ ಕೆಲಸಗಳಿಗೆ ಸಂಸ್ಥೆಯು ಬದ್ದವಾಗಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕು.ಮೀನಾಕ್ಷಿ ಹೆಚ್ ಕು.ಸಂಧ್ಯಾ ಎಂ ಕು.ಸುರೇಶ್ ರವರು ಮಾಡಿದರು. ಸಂಸ್ಥೆಯ ಕಾರ್ಯನಿರ್ವಾಹಕರಾದ ಹರ್ಷಿತ, ಅಶ್ವಿನಿ ಮಂಜುಳ,ಮಾರುತಿ,ಕೆಂಚಪ್ಪ,಼ಭಾಷ,ಆನಂದ್ ಯೋಗಿ, ಮಂಜುನಾಥ್ ಇಮ್ರಾನ್ ವೀರೇಶ್, ಕೆಂಚಪ್ಪ, ಹರೀಶ್, ಅಜಿತ್, ಸಿದ್ದೇಶ್, ಪಂಪಾಪತಿ,ರವಿ ವರ್ಮ,ವೆಂಕಟೇಶ್, ದಕ್ಷಿಣ ಮೂರ್ತಿ,ಬಾಲು ಹಾಗು ಇನ್ನಿತರರಿದ್ದರು.