BP NEWS: ಬಳ್ಳಾರಿ: ನವೆಂಬರ್.16: ಕರ್ನಾಟಕ ರಾಜ್ಯಾದ್ಯಂತ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದ ಮನೆ ಮಾಡಿದ್ದು ಮನೆ ಮನಗಳಲ್ಲಿ ಕನ್ನಡದ ಕಂಠಗಳು ಬೆಳೆಸೋಣ ಅನ್ನುತ್ತಾ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರ ಗ್ರಾಮದಲ್ಲಿ ದಿನಾಂಕ:15/11/2022 ರಂದು 67ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ತಾರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಬೇರೆ ಬೇರೆ ಗ್ರಾಮದಿಂದ ಬಂದಿರುತಕ್ಕಂತಹ ಹಾಸ್ಯ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ಮಧುರ ಮೆಲೋಡಿಸ್ ಆರ್ಕೆಸ್ಟ್ರಾ ಇವರಿಂದ ಸಂಗೀತ ಕಾರ್ಯಕ್ರಮ ಮತ್ತು ಶಾಲಾ ಮಕ್ಕಳಿಗೆ ೫೧ ಶಾಲಾ ಬ್ಯಾಗ್ ನೀಡುವುದರ ಮೂಲಕ ಮತ್ತು ಇದೆ ಸಮಯದಲ್ಲಿ ಕರವೇ ತಾಲೂಕಾಧ್ಯಕ್ಷರಾದ ನರಸಿಂಹಣ್ಣ,ಜಾನ್ ಪಾಲ್, ವಲಿ ಹಜರತ್ ಬಾನು, ಸಂಗಮೇಶ್ವರ ಸ್ವಾಮಿ ,ರಂಗ ತಿಲಕ ಟ್ರಸ್ಟ್ ನ ಅಧ್ಯಕ್ಷರಾದ ಡಿ.ಜಿ.ತಿರುಮಲ ಇವರಿಗೆ ಸನ್ಮಾನ ಮಾಡಲಾಯಿತು.
ಇನ್ನೂ ಹೆಚ್ಚು ಹಲವು ಕಾರ್ಯಕ್ರಮಗಳ ಮೂಲಕ ನಡೆದಿರುವ ಕನ್ನಡ ರಾಜ್ಯೋತ್ಸವದ ಹಬ್ಬದ ಆಚರಣೆಯು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾರಾನಗರ ಗ್ರಾಮ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ
ಕರವೆ ತಾಲ್ಲೂಕು ಅಧ್ಯಕ್ಷರು ನರಸಿಂಹ ಅಣ್ಣ, ಉಪಾಧ್ಯಕ್ಷರು ಶುಭನ್ ಸಾಹೇಬರು, ಗೌರವಾಧ್ಯಕ್ಷರು ಚೆನ್ನಪ್ಪ ಹಾಗೂ ತಾರಾನಗರ ಗ್ರಾಮದ ಕ .ರ.ವೆ . ಅಧ್ಯಕ್ಷ ರವಿಕುಮಾರ್ , ಉಪಾಧ್ಯಕ್ಷ ಕುಮಾರಸ್ವಾಮಿ, ಛತ್ರ ಗುಡಿ ಹನುಮಂತ, ಸಂತೋಷ್, ಪರುಶುರಾಮ ಹಾಗೂ ಎಲ್ಲಾ ಸದಸ್ಯರು ಮತ್ತು
ಉಬ್ಬಲಗಂಡಿ ಕರವೇ ಅಧ್ಯಕ್ಷರು ಬಿ. ಧನಂಜಯ ಉಪಾಧ್ಯಕ್ಷರು ಕೆ.ಕೆ.ವೀರೇಶ ಕಾಂಗ್ರೆಸ್ ಮುಖಂಡರು, ಗಡ್ಡದ ರಮೇಶ್ ,ಬಿಜೆಪಿ ಮುಖಂಡ GT ಪಂಪಾಪತಿ , ಗ್ರಾಮ ಪಂಚಾಯಿತಿ ಅಧ್ಯಕ್ಷ ತಾಯಣ್ಣ , ಮತ್ತುಎಲ್ಲಾ ಸದಸ್ಯರು ಎಲ್ಲಾ ಊರಿನ ಮುಖಂಡರು ಭಾಗವಹಿಸಿದರ ಮೂಲಕ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು.