ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮ

0
96

BP NEWS: ಬಳ್ಳಾರಿ: ನವೆಂಬರ್.15: ಸಾರ್ವಜನಿಕ ಗ್ರಂಥಾಲಯಗಳ ಇಲಾಖೆ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ, ಕೋಲ್ಕತ್ತಾ ರಾಜಾರಾಮ್ ಮೋಹನ್‍ರಾಯ್ ಗ್ರಂಥಾಲಯ ಇವರ ಸಂಯುಕ್ತಾಶ್ರಯದಲ್ಲಿ ಆಧುನಿಕ ಭಾರತದ ಪಿತಾಮಹ ‘ರಾಜಾರಾಮ್ ಮೋಹನ್‍ರಾಯ್’ ಅವರ 250ನೇ ಜನ್ಮ ವಾರ್ಷಿಕೋತ್ಸವ ನಿಮಿತ್ತ ಶಾಲಾ ವಿದ್ಯಾರ್ಥಿನಿಯರಿಂದ “ಮಹಿಳಾ ಸಬಲೀಕರಣ” ಕುರಿತು ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮ ಮಂಗಳವಾರ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಾಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್‍ಪಿ ಶೇಖರಪ್ಪ, ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ರಂಗಣ್ಣನವರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿಷ್ಠಿ ರುದ್ರಪ್ಪ, ಲೇಖಕಿ ಎ.ಎನ್.ಸಿದ್ದೇಶ್ವರಿ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಡಾ.ಬಿ.ಆರ್.ಗದಗಿನ್, ಕೆ.ಬಿ.ಸಿದ್ದಲಿಂಗಪ್ಪ, ಗಂಗಾಧರ್ ಪತ್ತಾರ್, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಲಕ್ಷ್ಮೀ ಕಿರಣ್, ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ಜಾಗೃತಿ ಜಾಥಾವು ಮುನಿಸಿಪಲ್ ಕಾಲೇಜು ಮೈದಾನದಿಂದ ಆರಂಭವಾಗಿ ರಾಘವೇಂದ್ರ ದೇವಸ್ಥಾನ ಮೂಲಕ ಎಂಜಿ ರಸ್ತೆ ಮಾರ್ಗವಾಗಿ ನಗರ ಕೇಂದ್ರ ಗ್ರಂಥಾಲಯಕ್ಕೆ ತಲುಪಿತು.

LEAVE A REPLY

Please enter your comment!
Please enter your name here