ರಾಯಚೂರು: ರಾಷ್ಟೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾದ ಪ್ರಕರಣಗಳು

0
116

BP NEWS: ರಾಯಚೂರು: ನವೆಂಬರ್.15:  ರಾಷ್ಟೀಯ ಕಾನೂನು ಸೇವೆಗಳ ಪ್ರಾಧಿಕಾರ ದೆಹಲಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನ.12ರ (ಶನಿವಾರ)ದಂದು ರಾಷ್ಟಿçÃಯ ಲೋಕ ಅದಾಲತ್ ಏರ್ಪಡಿಸಲಾಯಿತು.

ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 30961 ಬಾಕಿ ಇರುವ ಪ್ರಕರಣಗಳಲ್ಲಿ 6214 ಪ್ರಕರಣಗಳನ್ನು ರಾಜಿ ಸಂದಾನಕ್ಕಾಗಿ ಗುರುತಿಸಲಾಗಿತ್ತು. ಅವುಗಳಲ್ಲಿ 5238 ಪ್ರಕರಣಗಳು ರಾಜಿಯಾದವು. 71639 ದಾವೆ ಪೂರ್ವ ಪ್ರಕರಣಗಳನ್ನು ರಾಷ್ಟಿçÃಯ ಲೋಕ್ ಅದಾಲತ್‌ನಲ್ಲಿ ರಾಜಿ ಸಂದಾನಕ್ಕಾಗಿ ಗುರುತಿಸಲಾಗಿತ್ತು, ಇವುಗಳಲ್ಲಿ 70896 ಪ್ರಕರಣಗಳು ರಾಜಿಯಾಗಿವೆ.

ಒಟ್ಟು 76134 ಪ್ರಕರಣಗಳು ನ.12ರ(ಶನಿವಾರ) ನಡೆದ ರಾಷ್ಟೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿವೆ. ಅವುಗಳಲ್ಲಿ 337 ಸಿವಿಲ್ ಪ್ರಕರಣಗಳು, 106 ಎನ್‌ಐ ಆ್ಯಕ್ಟ್ ಪ್ರಕರಣಗಳು, 73 ಕೌಟುಂಬಿಕ ಪ್ರಕರಣಗಳು, 67 ರಸ್ತೆ ಅಪಘಾತದ ಪರಿಹಾರ ಪ್ರಕರಣಗಳು, 16 ಕಾರ್ಮಿಕ ನಷ್ಟ ಪರಿಹಾರದ ಪ್ರಕರಣಗಳು, 239 ವಿದ್ಯುತ್ ಶಕ್ತಿ ಪ್ರಕರಣಗಳು ಮತ್ತು 105 ರಾಜಿ ಮಾಡಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಹಾಗೂ 638 ಜನನ ಪ್ರಮಾಣ ಪತ್ರ ಕೋರಿ ಸಲ್ಲಿಸಿದ ಅರ್ಜಿಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾಗಿವೆ.

ಮೋಟಾರ್ ವಾಹನ ಅಪಘಾತ ಎಮ್.ವಿ.ಸಿ ಪ್ರಕರಣ ಸಂಖ್ಯೆ 541/2019 ಈ ಪ್ರಕರಣವು ಪ್ರಸ್ತುತ ಲೋಕ್ ಅದಾಲತ್‌ನಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರಾಯಲ್ ಸುಂದರA ವಿಮಾ ಕಂಪನಿಯವರು ಹಾಗೂ ಅರ್ಜಿದಾರರು ರೂ.50 ಲಕ್ಷಕ್ಕೆ ರಾಜಿ ಮಾಡಿಕೊಂಡಿರುತ್ತಾರೆ. ಇದರಿಂದ ಅರ್ಜಿದಾರರಿಗೆ ತುರ್ತಾಗಿ ಪರಿಹಾರ ಸಿಕ್ಕಿರುತ್ತದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಯಾನಂದ ಎಂ.ಬೇಲೂರೆ ಅವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ

BP NEWS: ರಾಯಚೂರು: ನವೆಂಬರ್.15: ಪ್ರದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮವನ್ನು ನ.10ರ(ಗುರುವಾರ) ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.

ಇದೇ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ವಿನಯಾ ಅವರು ಮಾತನಾಡಿ, ಕಲಬೆರಿಕೆ ಇಂಧನ, ಇಂಜಿನ್ ಅಯಿಲ್ ಬಳಕೆಯಿಂದ ಹಾಗೂ ವಾಹನಗಳ ಸೈಲೆನ್ಸರ್ ಗಳನ್ನು ಮಾರ್ಪಾಡು ಮಾಡುವುದರಿಂದ ವಾಯು ಮಾಲಿನ್ಯ ಉಂಟಾಗುವ ಸಾಧ್ಯತೆಗಳಿರುತ್ತವೆ. ಪ್ರತಿ ಆರು ತಿಂಗಳುಗಳಿಗೊಮ್ಮೆ ವಾಹನಗಳ ವಾಯು ಮಾಲಿನ್ಯ ತಪಾಸಣೆ ಮಾಡಿಸುವುದು ಅಗತ್ಯವೆಂದರು.

ವಾಯು ಮಾಲಿನ್ಯದಿಂದ ಕಣ್ಣಿನ ದೃಷ್ಠಿ ಮಂದವಾಗುವುದು, ಮೆದುಳಿನ ಕಾರ್ಯ ಕುಂಟಿತವಾಗುವುದು, ಮಕ್ಕಳಲ್ಲಿ ಮಾನಸಿಕ ದುರ್ಬಲತೆ, ಶ್ವಾಸಕೋಶದ ತೊಂದರೆಗಳು ಸೇರಿದಂತೆ ದೇಹದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ ಆದ್ದರಿಂದ ವಾಯು ಮಾಲಿನ್ಯವಾಗದಂತೆ ಎಲ್ಲರೂ ಜಾಗೃತರಾಗಬೇಕೆಂದು ತಿಳಿಸಿದರು.

ವಾಯು ಮಾಲಿನ್ಯ ತಡೆಗಟ್ಟಲು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಡಮರಗಳನ್ನು ಬೆಳಸುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಇದೇ ವೇಳೆ ಹಿರಿಯ ಮೋಟಾರು ನಿರೀಕ್ಷಕ ಬುಗ್ಗಾರೆಡ್ಡಿ ಮಾತನಾಡಿ, ವಾಹನಗಳ ದಟ್ಟನೆಯಿಂದ ಆಗುತ್ತಿರುವುದರಿಂದ ವಾಯುಮಾಲಿನ್ಯವೂ ಹೆಚ್ಚಾಗುತ್ತಿದ್ದು, ವಾಯು ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾರು ಜಾಗೃತರಾಗಬೇಕು ಎಂದು ತಿಳಿಸಿದರು.

ಇದಕ್ಕೂ ಮೊದಲು ಸಸಿ ನೆಟ್ಟು, ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಜಾಥಾಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕಾಟೋಕರ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಾರಿಗೆ ಅಧೀಕ್ಷಕರಾದ ಯಮರಾಜ.ಎನ್.ಪವಾರ್, ಜೀನತ್ ಸಾಜೀದಾ ಸೇರಿದಂತೆ ಇಲಾಖೆಯ ಅಧಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here