ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಅವರಿಂದ ಅದ್ದೂರಿಯಾಗಿ ನಡೆದ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ

0
329

BP NEWS: ಬಳ್ಳಾರಿ: ನವೆಂಬರ್.15:  ದಿನಾಂಕ 14 11 2018 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಅವರು ಶ್ರೀಮೇಧಾ ಪದವಿ ಮಹಾವಿದ್ಯಾಲಯ ಕಾಲೇಜು ಬಳ್ಳಾರಿ, ಅಲ್ಲಿ ನಡೆಸಿಕೊಟ್ಟ “ಯುವ ಸೌರಭ” ಸಂಸ್ಕೃತಿಕ ಕಾರ್ಯಕ್ರಮವನ್ನು ಎಚ್ ಸುಗೇಂದ್ರ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಬಳ್ಳಾರಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೇಧಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಕೆ ರಾಮಕಿರಣ್ ಅವರು ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ಡಾಕ್ಟರ್ ನಿಶ್ಟೀ ರುದ್ರಪ್ಪ, ಸುನೀತಾ ಕೆ, ಡಾಕ್ಟರ್ ಸುಮಾ ವೈ ಅವರು ವಹಿಸಿಕೊಂಡಿದ್ದರು.

ಯುವ ಸೌರಭ ಕಾರ್ಯಕ್ರಮದಲ್ಲಿ ಸಂಡೂರು ತಾಲೂಕಿನ ಯು ರಾಜಾಪುರ ಗ್ರಾಮದ ಡಿ ಜಿ ತಿರುಮಲ ಮತ್ತು ತಂಡದ ಗಾಯಕರಾದ ಶ್ರೀಧರ್ ರಾಥೋಡ್, ಶೇಖರ್, ಗಾದಿಲಿಂಗಪ್ಪ, ಚಂದ್ರು ಬಸಾಪುರ ಅವರಿಂದ ಜಾನಪದ ಗೀತೆಗಳು ಪ್ರಸ್ತುತಗೊಂಡವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ಕೆ ರಂಗಣ್ಣವರ್ ಅವರ ಸಾರಥ್ಯದಲ್ಲಿ “ಯುವ ಸೌರಭ” ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿತು.

 

ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಲು ಅವಕಾಶ ಮಾಡಿಕೊಟ್ಟ ಇಲಾಖೆಯ ನಿರ್ದೇಶಕರಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಡಿ ಜಿ ತಿರುಮಲ ಮತ್ತು ತಂಡದವರು ಬಿಪಿ ನ್ಯೂಸ್ ಮೂಲಕ ಅಭಿನಂದನೆಯನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here