ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಂದ ಎಲ್‍ಎಲ್‍ಸಿ ಕಾಲುವೆ ದುರಸ್ಥಿ ಕಾಮಗಾರಿ ವೀಕ್ಷಣೆ.

0
78

BP NEWS: ಬಳ್ಳಾರಿ: ನವೆಂಬರ್.02: ಎಲ್‍ಎಲ್‍ಸಿ ಕಾಲುವೆಗೆ ಮೂರು ದಿನಗಳೊಳಗೆ ನೀರು ಹರಿಯದಿದ್ದರೆ ಕರ್ನಾಟಕ ಮತ್ತು ಆಂಧ್ರ ವ್ಯಾಪ್ತಿಯ ಸುಮಾರು 3ಲಕ್ಷ ಹೆಕ್ಟೇರ್ ಬೆಳೆಗಳು ಒಣಗಿ ಹೋಗಲಿದ್ದು, ಈ ನಿಟ್ಟಿನಲ್ಲಿ ಬೆಳೆಗಳಿಗೆ ನೀರು ಒದಗಿಸಲು ಇಲ್ಲಿಯೇ ವಾಸ್ತವ್ಯ ಮಾಡಿ ದುರಸ್ಥಿ ಕಾಮಗಾರಿ ವೀಕ್ಷಣೆ ಮಾಡಲಾಯಿತು ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.


ವೇದಾವತಿ ನದಿ(ಹಗರಿ)ಯ ಸೇತುವೆಯ ಬಳಿ ಎಚ್‍ಎಲ್‍ಸಿ ಕಾಲುವೆಯ ದುರಸ್ಥಿ ಕಾಮಗಾರಿಯನ್ನು ವೀಕ್ಷಿಸಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ವೇದಾವತಿ ನದಿಗೆ ಇದೇ ಮೊದಲ ಬಾರಿಗೆ ಭದ್ರಾ ನದಿ ಮತ್ತು ವಾಣಿವಿಲಾಸ ಸಾಗರದಿಂದ ಅಪಾರ ಪ್ರಮಾಣದಿಂದ ನೀರು ಹರಿಸಲಾಗಿದ್ದು, ಕರ್ನಾಟಕ ಮತ್ತು ಆಂಧ್ರ ಗಡಿಭಾಗದ ಸಂಪರ್ಕ ಕಲ್ಪಿಸುವ ವೇದಾವತಿ ನದಿ(ಹಗರಿ)ಯ ಹಳೆಯ ಸೇತುವೆಯಲ್ಲಿ 10ನೇಯ ಪಿಲ್ಲರ್ ದುರಸ್ಥಿ ಗೊಂಡಿದೆ. 15ನೇಯ ಪಿಲ್ಲರ್ ಸಂಪೂರ್ಣವಾಗಿ ಕೊಚ್ಚಿಕೊಂಡ ಹೋದ ಹಿನ್ನೆಲೆಯಲ್ಲಿ ಎಲ್‍ಎಲ್‍ಸಿ ಕಾಲುವೆಗೆ ಕಳೆದ 25ದಿನಗಳಿಂದ ನೀರು ನಿಲ್ಲಿಸಲಾಗಿದೆ. ಆ ಭಾಗದ ರೈತರ ಬೆಳೆಗಳಿಗೆ ನೀರು ಒದಗಿಸಲು ಸ್ಥಳದಲ್ಲಿ ನಾನಿದ್ದರೆ ದುರಸ್ಥಿ ಕಾಮಗಾರಿಯು ಅತ್ಯಂತ ವೇಗವಾಗಿ ಪೂರ್ಣಗೊಳ್ಳುತ್ತದೆ ಎಂದು ಸ್ಥಳದಲ್ಲಿಯೇ ವಾಸ್ತವ್ಯ ಮಾಡಿದ್ದೇನೆ ಎಂದರು.


ಕರ್ನಾಟಕ ಮತ್ತು ಆಂಧ್ರ ಗಡಿಭಾಗದ ಸುಮಾರು 3ಲಕ್ಷ ಹೆಕ್ಟೇರ್ ಎಕರೆ ಜಮೀನುಗಳಿಗೆ ನೀರು ಒದಗಿಸಲು ಎಲ್‍ಎಲ್‍ಸಿ ಕಾಲುವೆ ದುರಸ್ಥಿ ನಡೆಯುತ್ತಿದ್ದು, ನೀರು ಒದಗಿಸಲು ಈಗ ತಾತ್ಕಾಲಿಕ ಪಿಲ್ಲರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಭಾಗದ ರೈತರ ಬೆಳೆಗಳು ಒಣಗುತ್ತಿದ್ದು, ನೀರು ಒದಗಿಸಲು ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ನಾನು ವಾಸ್ತವ್ಯ ಮಾಡಿರುವೆ. ಇದರಲ್ಲಿ ಬೇರೆ ಯಾವುದೇ ರೀತಿಯ ಉದ್ದೇಶವಿಲ್ಲ ಎಂದು ತಿಳಿಸಿದರು.


ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರ ಶೇ.30ರಷ್ಟು ಮತ್ತು ಆಂಧ್ರ ಸರ್ಕಾರ ಶೇ.70ರಷ್ಟು ಅನುದಾನದಲ್ಲಿ ಸುಮಾರು 400 ರಿಂದ 500ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಾಣ ಮಾಡಲು ನಮ್ಮ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಹಾಗೂ ಆಂಧ್ರ ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.
1953ರಲ್ಲಿ ಸ್ಥಾಪನೆಯಾದ ಈ ಸೇತುವೆಯು, ಅತ್ಯಂತ ಹಳೆಯ ಸೇತುವೆಯಾಗಿದೆ ಹಾಗೂ ಹಗರಿ ನದಿಯ ದಡದಲ್ಲಿ ಸಾಕಷ್ಟು ಭೂಮಿ ಒತ್ತುವರಿಯಾಗಿದ್ದು, ಅಪಾರ ಪ್ರಮಾಣ ನೀರು ಹರಿದ ಹಿನ್ನೆಲೆಯಲ್ಲಿ ಸೇತುವೆ ಪಿಲ್ಲರ್‍ಗೆ ಹಾನಿಯಾಗಿದೆ ಎಂದು ತಿಳಿಸಿದರು.


ಸೇತುವೆ ನಿರ್ಮಾಣ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಒದಗಿಸಲು ನೀರಾವರಿ, ನದಿ ಅಭಿವೃದ್ಧಿ ಮತ್ತು ನಿರ್ಮಲ ಗಂಗಾ ಯೋಜನೆಯಡಿ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ರಂಜಿತ್ ಕುಮಾರ್ ಬಂಡಾರು, ಎಡಿಸಿ ಪಿ.ಎಸ್.ಮಂಜುನಾಥ, ತಹಶೀಲ್ದಾರ್ ವಿಶ್ವನಾಥ, ಸೇರಿದಂತೆ ಇನ್ನೀತರರು ಇದ್ದರು.

LEAVE A REPLY

Please enter your comment!
Please enter your name here