67ನೇ ಕರ್ನಾಟಕ ರಾಜೋತ್ಸವ ಸಂಭ್ರಮ ಎಂದೂ ಮರೆಯದ ವಿಜಯನಗರ ಸಾಮ್ರಾಜ್ಯ, ನೂತನ ಜಿಲ್ಲೆಯು ವಿಜಯನಗರ; ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ

0
133

BP NEWS: ಹೊಸಪೇಟೆ(ವಿಜಯನಗರ): ನವೆಂಬರ್.1: ಭಾರತದ ಇತಿಹಾಸದಲ್ಲಿಯೇ ಸುವರ್ಣಯುಗ ಸೃಷ್ಟಿ ಮಾಡಿ, ಈ ನಾಡಿನ ಕಲೆ, ಭಾಷೆ ಹಾಗೂ ಸಂಸ್ಕೃತಿAಯನ್ನು ಶ್ರೀಮಂತಗೊಳಿಸಿದ ವಿಜಯನಗರ ಸಾಮ್ಯಾಜ್ಯ ವಿಜಯನಗರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವುದು ನಾಡಿನ ಹೆಮ್ಮೆಯ ವಿಷಯವಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಅವರು ತಿಳಿಸಿದರು.


ಅವರು ಮಂಗಳವಾರ ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತದಿಂದ ಏರ್ಪಡಿಸಲಾದ 67 ನೇ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟçಧ್ವಜಾರೋಹಣ ನೆರವೇರಿಸಿ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ ಈ ಪ್ರದೇಶದ ಸಂಸ್ಕೃತಿ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾಗಿದೆ ಎಂದರು.
ಕರ್ನಾಟಕವೆಂಬುದು ಕೇವಲ ಒಂದು ಭೂಪ್ರದೇಶಕಷ್ಟೆ ಸೀಮಿತವಾಗಿಲ್ಲ, ಕರ್ನಾಟಕವೆಂದರೆ “ಒಂದು ಸಂಸ್ಕೃತಿ”, “ಒಂದು ಜನಸಮುದಾಯ”, ಇದೊಂದು ಭವ್ಯ ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಸುಧೀರ್ಘ ಇತಿಹಾಸವಾಗಿದೆ.

ಕನ್ನಡನಾಡು ವಿವಿಧ ಮತ, ಪಂಥ, ಧರ್ಮಗಳ ಸಂಗಮವಾಗಿದೆ. ಭವ್ಯ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಸಾಮರಸ್ಯವೇ ನಾಡಿನ ಜೀವಾಳವಾಗಿರುವ ಪುರಾವೆಗಳು ಈ ನಾಡಿನ ಇತಿಹಾಸದೂದಕ್ಕೂ ಸಾಕಷ್ಟು ಸಿಗುತ್ತವೆ. ಸರ್ವಧರ್ಮ ಸಹಿಷ್ಣುತೆ, ಸತ್ಯಾರಾಧನೆ, ಧರ್ಮನೀತಿ, ಸಹಭಾಳ್ಯ, ಸೌರ್ಹಾಧತೆ ಹಾಗೂ ಭಾವೈಕ್ಯತೆಯ ದಿವ್ಯ ಸ್ವರ್ಗ ಈ ನಾಡು. ಈ ನಾಡಿನಲ್ಲಿ ಸಾಹಿತಿಗಳು, ಕವಿಗಳು, ಶಿಲ್ಪಿಗಳು, ಕಲಾವಿದರು, ಸಂಶೋಧಕರು ಹಾಗೂ ಇತಿಹಾಸಕಾರರು ತಮ್ಮದೇ ಶೈಲಿಯಲ್ಲಿ ಸಾಧನೆ ಮಾಡಿ ಕರ್ನಾಟಕ ಮಾತೆ ಭುವನೇಶ್ವರಿಯ ಕೀರ್ತಿ ಕಳಸಕ್ಕೆ ಗರಿಗಳಾಗಿದ್ದಾರೆ. ಇದಕ್ಕೆ ಮುಕುಟ ಪ್ರಾಯವೆಂಬುವAತೆ 8 ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ.


ಅನೇಕ ಮಹನೀಯರ ಹೋರಾಟದ ಫಲದಿಂದ ಭಾರತ ಸ್ವತಂತ್ರಗೊAಡಿತು. ಆದರೆ ಕನ್ನಡ ಭಾಷೆಯನ್ನಾಡುವ ಈ ಪ್ರದೇಶ ಬೇರೆ ಬೇರೆ ಆಡಳಿತ ವಿಭಾಗಗಳಲ್ಲಿ ಕನ್ನಡ ಭಾಷೆಯನ್ನಾಡುವ ಜನರು ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿತ್ತು. ನಾಡಿನ ಜನರನ್ನು ಒಂದುಗೂಡಿಸುವುದಕ್ಕೆ ಕರ್ನಾಟಕದ ಏಕೀಕರಣ ಚಳುವಳಿಯಾಗಿದ್ದು ಇತಿಹಾಸ. ಪೊಟ್ಟಿ ಶ್ರೀರಾಮುಲು ಅವರನ್ನು ಒಳಗೊಂಡAತೆ ನಡೆದ ಹೋರಾಟದ ಫಲವಾಗಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಚಾಲನೆ ದೊರೆಯಿತು. ಆಲೂರು ವೆಂಕಟರಾಯರು, ಡೆಪ್ಯೂಟಿ ಚನ್ನಬಸಪ್ಪನವರು, ಕರ್ನಾಟಕ ವಿದ್ಯಾವರ್ಧಕ ಸೇರಿದಂತೆ ಹಲವರ ಹೋರಾಟದ ಫಲವಾಗಿ ಫಜಲ್ ಅಲಿ ಸಮಿತಿ ಸಲ್ಲಿಸಿದ ವರದಿ ಬಳಿಕ 1956ರ ನ.1 ರಂದು ವಿವಿಧ ಪುದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆಯನ್ನಾಡುವ ಜನರ ರಾಜ್ಯ ಉದಯವಾಯಿತು.


ಏಕೀಕೃತ ರಾಜ್ಯ ಉದಯಗೊಳ್ಳಲು ಹೋರಾಡಿದ ಆಚಾರ್ಯ ಬಿ.ಎಂ.ಶ್ರೀಕAಠಯ್ಯ, ಕುವೆಂಪು, ಅ.ನ.ಕೃಷ್ಣರಾಯರು, ಆಲೂರು ವೆಂಕಟರಾಯರು, ಗಂಗಾಧರ ದೇಶಪಾಂಡೆ, ಡೆಪ್ಯೂಟಿ ಚನ್ನಬಸಪ್ಪ, ಮಂಗಳವಡಿ ಶ್ರೀನಿವಾಸರಾಯರು, ಎಸ್.ನಿಜಲಿಂಗಪ್ಪ, ಹುಲ್ಲೂರು ಶ್ರೀನಿವಾಸ ಜೋಯಿಸ್, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗರ್, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳು ಮಂಜಪ್ಪ, ಪಾಟೀಲ್ ಪುಟ್ಟಪ್ಪ, ಮುಂತಾದ ಅನೇಕ ಸಾಹಿತಿಗಳು, ಹೋರಾಟಗಾರರನ್ನು ಹಾಗೂ ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬರ ಹುತಾತ್ಮ ಕಥೆಯನ್ನು ಈ ದಿನ ಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪ್ರತಿಯೊಬ್ಬರು ನಾಡಿನ ಭಾಷೆ, ನೆಲ, ಜಲ, ಸಂಸ್ಕೃತಿ, ಸಾಹಿತ್ಯ ಹಾಗೂ ಕಲೆಗಳನ್ನು ಬೆಳಸಿ ಉಳಿಸುವಲ್ಲಿ ಆಸಕ್ತಿ ವಹಿಸುವುದು ತುಂಬಾ ಅವಶ್ಯವಾಗಿದೆ. ಅತ್ಯಂತ ಶಕ್ತಿಶಾಲಿಯಾದ ಹಾಗೂ ಅಗಾದ ಜ್ಞಾನ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ “ಕನ್ನಡ ಭಾಷೆಯನ್ನು ಬಳಸಿ ಉಳಿಸೋಣ” ಅತ್ಯಂತ ಪುಮುಖ ಪರೀಕ್ಷೆಗಳಲ್ಲಿ ಒಂದಾದ ಅಖಿಲ ಭಾರತ ಸೇವೆಯ ಹುದ್ದೆಗಳ ಪರೀಕ್ಷೆಗಳನ್ನು ಈಗ ಕನ್ನಡ ಮಾಧ್ಯಮದಲ್ಲಿ ಬರೆಯುವುದಕ್ಕೆ ಅವಕಾಶ ಇದೆ ಎಂದರು.


ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಂಗಭೂಮಿ; ಕಟಗಿ ಪ್ರಕಾಶಬಾಬು, ಉಮಾಮಹೇಶ್ವರ, ಸಾಹಿತ್ಯ; ನಾಗರಾಜ ಬಡಿಗೇರ, ಶೋಭಾ ಶಂಕರಾನAದ, ಡಾ.ನಂದೀಶ್ವರ ದಂಡೆ, ಸೋದಾ ವಿರುಪಾಕ್ಷಗೌಡ, ಚಿತ್ರ ಕಲಾವಿದ; ಉದಯಕುಮಾರ, ಕಲೆ; ಈಡಿಗರ ವೆಂಕಟೇಶ, ಕೋಲಾಟ; ಹುಲುಗಪ್ಪ, ಜನಪದ ಹಾಡುಗಾರ; ಶ್ರೀವಾಲ್ಯ ನಾಯ್ಕ್, ಜಾನಪದ ಕಲಾವಿದ; ಎಂ.ಜೆ.ಶಿವನಾಗಪ್ಪ, ಶಿಕ್ಷಣ; ಡಾ.ಸಂಗಮೇಶ ಗಣಿ, ನ್ಯಾಯಾಂಗ; ಕೆ.ಪ್ರಭಾಕರ ರಾವ್, ನಾಟಿ ವೈದ್ಯ; ಟಿಪ್ಪುಸಾಬ್, ಕನ್ನಡ ಸಂಘಟನೆ; ತಿರುಮಲ, ಸಮಾಜಸೇವೆ ; ಎಂ.ವಿರೂಪಾಕ್ಷಯ್ಯ ಸ್ವಾಮಿ, ಪತ್ರಿಕಾ ರಂಗ ಸಾಹಿತ್ಯ; ರಾಂಪ್ರಸಾದ್ ಗಾಂಧಿ, ಹೋಟೆಲ್ ಶುಚಿತ್ವದಲ್ಲಿ ಸುನಿತಾ ವಿಜಯಕುಮಾರ್, ಆರ್.ಎಲ್.ಶರ್ಮ, ಪುಷ್ಪಾರೆಡ್ಡಿ ಇವರುಗಳಿಗೆ ಸನ್ಮಾನ ಮಾಡಲಾಯಿತು.
67ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಜೇತರಾದ ಹೊಸಪೇಟೆ ಸರ್ಕಾರಿ ಆದರ್ಶ ವಿದ್ಯಾಲಯದ ರಚನಾ ಎಚ್‌ಟಿ ಇವರು ಪ್ರಥಮ ಸ್ಥಾನ ಹೊಸಪೇಟೆಯ ಸರಕಾರಿ ಬಾಲಕಿಯರ ಪ್ರೌಢಶಾಲೆಯ ವಿಶಲಾಕ್ಷಿ ದ್ವಿತೀಯ ಸ್ಥಾನ ಪಡೆದಿದ್ದು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆನಂತಶಾಯನಗುಡಿ ಶಾಲಾ ಮಕ್ಕಳಿಂದ, ಕಾಲಘಟ್ಟ ಹಾಗೂ ತಿಮ್ಮಲಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ನಗರಸಭೆ ಉಪಾಧ್ಯಕ್ಷ ಕೆ.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಭುನಾಥ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಆರುಣ್ ಕೆ, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ತಹಸೀಲ್ದಾರ್ ವಿಶ್ವಜಿತ್ ಮೆಹತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮಕ್ಕಳು, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಇದ್ದರು.

LEAVE A REPLY

Please enter your comment!
Please enter your name here