ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ಓಟ

0
96

BP NEWS: ಬಳ್ಳಾರಿ: ಅಕ್ಟೋಬರ್.31: ಭಾರತ ಸರ್ಕಾರ ಸ್ಥಾಯಿ ಸಂಸ್ಥೆಯಾದ ನೆಹರು ಯುವ ಕೇಂದ್ರ ಬಳ್ಳಾರಿ ಹಾಗೂ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ,.ಇವರ ಸಹಯೊಗದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ಓಟವನ್ನು ಅ.31ರಂದು ಹಮ್ಮಿಕೊಳ್ಳಲಾಗಿತ್ತು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ತಿಳಿಸಿದರು.
ದೇಶದ್ಯಾಂತ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು ಜಿಲ್ಲೆಯಲ್ಲಿ ರಾಷ್ಟ್ರೀಯ ಏಕತಾ ಓಟವನ್ನು ಜಿಲ್ಲಾ ಯುವ ಅಧಿಕಾರಿಗಳಾದ ಮೊಂಟು ಪಾತರ್ ಬೆ. 7 ಗಂಟೆಗೆ ಹಸಿರು ನೀಶಾನೆ ಮೂಲಕ ಚಾಲನೆ ನೀಡಿ ಮಾತನಾಡಿದರು.


ಭಾರತ ಸರ್ಕಾರವು ಪ್ರತಿ ವರ್ಷದಂತೆ ಅ.31 ರಂದು ಸರ್ದಾರ್ ವಲಭಭಾಯ್ ಪಟೇಲ್ ಅವರ ಜನ್ಮದಿನಚಾರಣೆ ಆಚರಿಸುತ್ತಿದ್ದು ವಿಶೇಷವಾಗಿ ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ಓಟದ ಮೂಲಕ ಆಯೋಜಿಸಲು ತಿರ್ಮಾನಿಸಿದ್ದು. ಅದರಂತೆ ಬಳ್ಳಾರಿ ಜಿಲ್ಲೆಯಲ್ಲಿ ಓಟದ ಮೂಲಕ ಆಖಂಡ ಭಾರತ ದೇಶದ ಜನರಲ್ಲಿ ದೇಶಭಕ್ತಿ ಏಕತೆ ಸಮಗ್ರತೆ ಸಹಬಾಳ್ವೆಯ ಸಂದೇಶದ ಮೂಲಕ ನವ ಭಾರತ ನಿರ್ಮಾಣದ ಪರಿಕಲ್ಪನೆಯೊಂದಿಗೆ ದೇಶವನ್ನು ಒಗ್ಗೊಡಿಸಿದ ಮಹಾ ದೇಶಭಕ್ತ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ಪ್ರತಿಜೆÐ ವಿಧಿಯನ್ನು ಭೋದಿಸಲಾಯಿತು.
ವಿಮ್ಸ್ ಕ್ರಿಡಾಂಗಣದಿಂದ ಪ್ರಾರಂಭಗೊಂಡು ಮೋತಿ ಸರ್ಕಾಲ್ ಮೂಲಕ ಮುನ್ಸಿಪಾಲ್ ಅವರಣಕ್ಕೆ ವೇಗ ಓಟದ ಮೂಲಕ ಬಂದ ಪವನ್, ಅಶೋಕ, ಪ್ರಜ್ವಲ್ ರೆಡ್ಡಿ, ಪ್ರವೀಣ, ಉಮ, ಬಹುಮಾನ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಹರಿಸಿಂಗ್ ರಾಥೋಡ್, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾದ ಶಕೀಭ್, ಬಳ್ಳಾರಿ ಲೀಯೊ ಸಂಸ್ಥೆಯ ಅರ್.ಕೆ. ಅಬ್ರಹಂ, ಸಂಸ್ಕಾರ ಆಶ್ರಮದ ಸಂಸ್ಥಾಪಕರು ಡಾ. ವಿರುಪಾಕ್ಷಯ್ಯ, ಜಿಲ್ಲಾ ಉಪಾಧ್ಯಕ್ಷರು, ಕಲ್ಯಾಣ ಕರ್ನಾಟಕ ಅರೆಸೇನೆ ಪಡೆಯ ಈಶ್ವರ ರೆಡ್ಡಿ, ಪದ್ಮವತಿ, ಸ್ವಯಂಸೇವಕರಾದ ವಿರೇಶ ದಳವಾಯಿ, ಕಲಾವಿದರಾದ ಹುಲಗಪ್ಪ, ಮಹೇಶ ಕುಮಾರ, ಹರಿಕೃಷ್ಣ, ಅಮರೇಶ ಇಲಾಖೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here