ಶ್ರೀರಾಮುಲುಗೆ ಪೆದ್ದ ಎಂದ ಸಿದ್ಧರಾಮಯ್ಯ ಮಾತು ಸಮರ್ಥಿಸಿಕೊಂಡ ಶಾಸಕ ಬಿ.ನಾಗೇಂದ್ರ
BP News ಬಳ್ಳಾರಿ,ಅ.18-ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಪೆದ್ದ ಎಂದು ಸಂಬೋಧಿಸಿದ್ದನ್ನು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಸಮರ್ಥಿಸಿಕೊಂಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಅ.15 ರಂದು ಬಳ್ಳಾರಿಯಲ್ಲಿ ನಡೆದ ರಾಹುಲ್ ಗಾಂಧಿ ಜೋಡೋ ಯಾತ್ರೆಯಲ್ಲಿ ಸಿದ್ಧರಾಮಯ್ಯ ಅವರು ಸಚಿವ ಬಿ.ಶ್ರೀರಾಮುಲು ಬಗ್ಗೆ ಮಾತನಾಡಿರುವುದನ್ನು ಸಮರ್ಥಿಸಿಕೊಂಡಿರುವ ಅವರು, ಬಿ.ಶ್ರೀರಾಮುಲು ಅವರಿಗೆ ಅಧಿಕಾರದ ಮದವೇರಿದೆ. ಸಿದ್ಧರಾಮಯ್ಯ ಅವರನ್ನು ಏಕ ವಚನದಲ್ಲಿ ಸಂಬೋಧಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರು ಸಿದ್ಧರಾಮಯ್ಯ ಅವರನ್ನು ಮನೆಗೆ ಕಳುಹಿಸಲಿದ್ದಾರೆ ಎಂದರು.
——
ಎಫ್‍ಕೆಸಿಸಿಐ ಸರ್ವ ಸದಸ್ಯರ ಸಭೆಗೆ ಯಶವಂತರಾಜ್ ನಾಗಿರೆಡ್ಡಿ
BP Newsಬಳ್ಳಾರಿ,ಅ.18-ಕೈಗಾರಿಕಾ ಮತ್ತು ವಾಣಿಜ್ಯ ಮಹಾ ಸಂಸ್ಥೆಗೆ 2022-2023ನೇ ಸಾಲಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಯಶವಂತರಾಜ್ ನಾಗಿರೆಡ್ಡಿ ಇವರು ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಸಿ.ಶ್ರೀನಿವಾಸರಾವ್ ಇವರು, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಎಲ್ಲರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
——
ನಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಾವು ಮಾತನಾಡಬೇಕು-ವೈ.ದೇವೇಂದ್ರಪ್ಪ
BP News ಬಳ್ಳಾರಿ,ಅ.18-ಯಾರೇ ಆಗಿರಲಿ ನಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಾವು ಮಾತನಾಡಿಕೊಂಡರೆ ಸಮಾಜದಲ್ಲಿ ಗೌರವಗಳು ವೃದ್ಧಿಯಾಗುತ್ತವೆ ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ, ಉಗ್ರಪ್ಪ ಯಾರೇ ಇರಲಿ ಹಿರಿಯರಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ರಾಮುಲು ಅವರು ಹಿಂದುಳಿದ ಜನಾಂಗದ ಒಬ್ಬ ಪ್ರಭಾವಿ ನಾಯಕ. ಹಗೆತನಕ್ಕೆ ಆಸ್ಪದ ನೀಡದೇ, ಪರಸ್ಪರರು ಅಸ್ತ್ರ, ಪ್ರತಿ ಅಸ್ತ್ರಗಳನ್ನು ಪ್ರಯೋಗಿಸದೇ ಜನಪರ ಕೆಲಸ ಮಾಡಬೇಕೆಂದರು.
—–
ಶಹಪುರ ರಾಷ್ಟ್ರೀಯ ಹೆದ್ದಾರಿ ಸರ್ಕಲ್ ನಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ
BP News ಕೊಪ್ಪಳ,ಅ.18-ತಾಲೂಕಿನ ಶಹಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ-50ರ ವೃತ್ತದಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವರು ಹೈಮಾಸ್ಟ್ ದೀಪಗಳನ್ನು ಅಳವಡಿಸಿದ್ದಾರೆ.
ಇತ್ತೀಚೆಗೆ ಗ್ರಾಮದ ಯುವ ಧುರೀಣರಾದ ನಿಂಗಪ್ಪ ನಾಗಲಾಪುರ, ನಾಗರಾಜ ದೊಡ್ಡಮನಿ, ಗಿರೀಶ್ ಹಿರೇಮಠ ಮತ್ತು ವೀರಣ್ಣ ಕೋಮಲಾಪುರ ಇವರ ನೇತೃತ್ವದಲ್ಲಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಶಹಪುರ ಮತ್ತು ಹಿಟ್ನಾಳ ಬಳಿಯ ಟೋಲ್ ನ ಉಭಯ ವ್ಯವಸ್ಥಾಪಕರಾದ ಶುಕ್ಲ ಮತ್ತು ನಾಗಭೂಷಣ್ ಇವರಿಗೆ ಮನವಿ ಸಲ್ಲಿಸಿದ್ದರು.
—–
ಕಸಾಪ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರ ಪ್ರವಾಸ ಕಾರ್ಯಕ್ರಮ
BP News ಬಳ್ಳಾರಿ,ಅ.18-ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಅಕ್ಟೋಬರ್ 19ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.
ಅ.19ರಂದು ಬೆಳಗ್ಗೆ 10.30ಕ್ಕೆ ನಗರದ ಎಸ್‍ಜಿಟಿ ಕಾಲೇಜಿನಲ್ಲಿ 2021-22ನೇ ಸಾಲಿನ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿ ಪುರಸ್ಕøತರಾದ ಮಂಜುನಾಥ ಗೋವಿಂದವಾಡ ಇವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು.
—–
ವಿಶ್ವಕವಿ ಸಮ್ಮೇಳನ 21-23 ರಂದು-ಅರಿವು ಸಂಘಟನೆ ಸಂಸ್ಥೆಯ ಸುದ್ದಿಗೋಷ್ಠಿ
BP News ಬಳ್ಳಾರಿ,ಅ.18-ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಿಐಟಿಯಂ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಪನ್ನರಾಜ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭ ಡಾ.ಚಂದ್ರಶೇಖರ ಕಂಬಾರ ಅದ್ಯಕ್ಷರು ಕೇಂದ್ರ ಸಾಹಿತ್ಯ ಅಕಾಡೆಮಿ ಇವರು ಚಾಲನೆ ನೀಡಲಿದ್ದಾರೆ.
ಅದ್ಯಕ್ಷತೆ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅತಿಥಿ ಬಿ.ಶ್ರೀರಾಮುಲು ವಹಿಸಲಿದ್ದಾರೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿ ಮೂಲಕ ನೆರವೇರಿಸಲಿದ್ದಾರೆ. 21 ಕನ್ನಡದಲ್ಲಿ ಹಾಗೂ ಇಂಗ್ಲೀμï ಭಾμÉಗಳನ್ನು ಭಾμÁಂತರ ಪ್ರಸ್ತುತ ಪಡಿಸಲಿದ್ದಾರೆ ಎಂದರು.
—-