BP NEWS: ಬಳ್ಳಾರಿ: ಅಕ್ಟೋಬರ್.13: ಭಾರತ ಸರ್ಕಾರದ ನಾಗರೀಕ ವಿಮಾನಯಾನ ಸಚಿವಾಲಯದ ಅಧಿಸೂಚನೆಯಂತೆ ಹೊರಡಿಸಲಾಗಿರುವ ಡ್ರೋನ್ ನಿಯಮಗಳ ಪ್ರಕಾರ ತಿಳಿಸಿರುವಂತೆ ಅ.14ರಿಂದ ಅ.16ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಭಾರತ್ ಜೋಡೋ ಪಾದಯಾತ್ರೆ, ವಾಸ್ತವ್ಯ, ಬಹಿರಂಗ ಸಭೆ ನಡೆಯುವ ಸ್ಥಳಗಳನ್ನು ಕೆಂಪು ವಲಯ(ರೆಡ್ ಜೋನ್)ಗಳೆಂದು ಘೋಷಿಸಿ ಮಾನವ ರಹಿತ ವಿಮಾನಯಾನ (ಡ್ರೋನ್) ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು ಅವರು ಆದೇಶ ಹೊರಡಿಸಿದ್ದಾರೆ.
ಕೆಂಪು ವಲಯಗಳು(ರೆಡ್ ಜೋನ್): ಹಲಕುಂದಿ ಗ್ರಾಮದ ಬಳಿ ಗಣ್ಯರು ವಾಸ್ತವ್ಯ ಮಾಡುವ ಸ್ಥಳ ಹಾಗೂ ಅದರ ಸುತ್ತಮುತ್ತ ಪ್ರದೇಶ. ಹಲಕುಂದಿ ವಾಸ್ತವ್ಯ ಸ್ಥಳದಿಂದ ಬಳ್ಳಾರಿ-ಬೆಂಗಳೂರು ರಸ್ತೆಯ ಮುಖಾಂತರ ಹಲಕುಂದಿ ಎಪಿಎಂಸಿ ಸರ್ಕಲ್, ಬೆಂಕಿ ಮಾರೆಮ್ಮ ಗುಡಿ, ಬಂಡಿಮೋಟ್, ಬ್ರೂಸ್‍ಪೇಟೆ ಸರ್ಕಲ್, ರಾಯಲ್ ಸರ್ಕಲ್, ಕಮ್ಮಭವನದವರೆಗೆ. ಕಮ್ಮ ಭವನದಿಂದ, ಯುಬಿ ಸರ್ಕಲ್, ರಾಯಲ್ ಸರ್ಕಲ್, ರಾಜ್‍ಕುಮಾರ್ ರಸ್ತೆ, ಬಳ್ಳಾರಿ ಮುನಿಸಿಪಲ್ ಹೈಸ್ಕೂಲ್ ಮೈದಾನ ಬಹಿರಂಗ ಸಭೆ ನಡೆಯುವ ಸ್ಥಳ ಹಾಗೂ ಅದರ ಸುತ್ತಮುತ್ತ ಪ್ರದೇಶ. ಬಹಿರಂಗ ಸ್ಥಳದಿಂದ ಇಂದಿರಾ ಸರ್ಕಲ್-ಮೋಕಾ ರಸ್ತೆ-ಕೆಇಬಿ ಸರ್ಕಲ್-ಸಂಗನಕಲ್ ರಸ್ತೆ, ಸಂಗನಕಲ್ ಗ್ರಾಮ, ಮೋಕಾ ರಸ್ತೆ, ಮೋಕಾ ಗ್ರಾಮದಿಂದ ಛತ್ರಗುಡಿ ವರೆಗೆ ಕೆಂಪು ವಲಯ ಎಂದು ಘೋಷಿಸಿರುತ್ತಾರೆ.
ಈ ಅದೇಶವನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.