ಫುಟ್‍ಬಾಲ್ ಸೆಮಿಫೈನಲ್/ಫೈನಲ್ ಪಂದ್ಯಾವಳಿಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ:ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ

0
103

BP NEWS: ಬಳ್ಳಾರಿ: ಅಕ್ಟೋಬರ್.7: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಫುಟ್‍ಬಾಲ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಫುಟ್‍ಬಾಲ್ ಲೀಗ್ ಹೊನಲು ಬೆಳಕಿನ ಪಂದ್ಯಾವಳಿಗಳು ಈಗಾಗಲೇ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್‍ಬಾಲ್ ಮೈದಾನದಲ್ಲಿ ನಡೆಯುತ್ತಿದ್ದು, ಸೆಮಿಫೈನಲ್ ಪಂದ್ಯಾವಳಿಯು ಅ.8ರಂದು ಸಂಜೆ 5ಕ್ಕೆ ಹಾಗೂ ಫೈನಲ್ ಪಂದ್ಯಾವಳಿಯು ಅ.9ರಂದು ಸಂಜೆ 06ಕ್ಕೆ ನಡೆಯಲಿವೆ. ಆದ್ದರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಕುಟುಂಬ ಸಮೇತವಾಗಿ ವೀಕ್ಷಿಸಿ ಕ್ರೀಡೆಯನ್ನು ಪ್ರೋತ್ಸಾಯಿಸಬೇಕು ಹಾಗೂ ಸಾರ್ವಜನಿಕರಿಗೂ ವೀಕ್ಷಿಸಲು ಮುಕ್ತ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಫುಟ್‍ಬಾಲ್ ಐತಿಹಾಸಿಕವಾಗಿ ಆಟಗಾರರ ಭಾಗವಹಿಸುವಿಕೆ ಮತ್ತು ದೂರದರ್ಶನ ವೀಕ್ಷಕರ ವಿಷಯದಲ್ಲಿ ಮೂರನೇ ಅತ್ಯಂತ ಜನಪ್ರೀಯ ಕ್ರೀಡೆಗಳಲ್ಲಿ ಫುಟ್‍ಬಾಲ್ ಕ್ರೀಡೆಯು ಒಂದಾಗಿದೆ. ಜಿಲ್ಲೆಯಲ್ಲಿ ಫುಟ್‍ಬಾಲ್ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಲು ಹಾಗೂ ಆಟಗಾರರನ್ನು ಪ್ರೋತ್ಸಾಹಿಸಲು ಜಿಲ್ಲಾಡಳಿತವು ಪುರುಷರಿಗಾಗಿ ಬಳ್ಳಾರಿ ಫುಟ್‍ಬಾಲ್ ಲೀಗ್ 2022 ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಆಟಗಾರರು ಈ ಲೀಗ್‍ನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.


ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಫುಟ್‍ಬಾಲ್ ಲೀಗ್ ನಡೆದಿರುವುದಿಲ್ಲ. ಈ ಲೀಗ್ ಎಲ್ಲಾ ಫುಟ್‍ಬಾಲ್ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿದೆ ಮತ್ತು ಎಲ್ಲಾ ಪ್ರೇಕ್ಷಕರಿಗೆ ಮನರಂಜನೆಯ ಪ್ರದರ್ಶನವಾಗಿದೆ. ಎಲ್ಲಾ ಕ್ರೀಡೆಗಳಲ್ಲಿ ಪ್ರೇಕ್ಷಕರ ಉಪಸ್ಥಿತಿಯು ಆಟಗಾರರ ಪ್ರದರ್ಶನವನ್ನು ಶೇ.60ರಷ್ಟು ಹೆಚ್ಚಿಸುತ್ತದೆ ಎಂದು ಅನೇಕ ಸಂಶೋಧನೆಗಳಿಂದ ತಿಳಿದು ಬಂದಿರುತ್ತದೆ.
ಜಿಲ್ಲೆಯಲ್ಲಿ ಫುಟ್‍ಬಾಲ್ ಕ್ರೀಡೆಯನ್ನು ಹಾಗೂ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹಾಗೂ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಬಿಡಿಎಎ ಫುಟ್‍ಬಾಲ್ ಮೈದಾನದಲ್ಲಿ ನಡೆಯುವ ಸೆಮಿ-ಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಜಿಲ್ಲೆಯ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕುಟುಂಬದ ಸಮೇತವಾಗಿ ವೀಕ್ಷಿಸಿ ಕ್ರೀಡೆಯನ್ನು ಪ್ರೋತ್ಸಾಯಿಸಬೇಕು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here