BP NEWS: ಕೊಪ್ಪಳ: ಸಪ್ಟೆಂಬರ್.30: ಇಂದು 30.09.2022 ರಂದು ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಾ.ಪಂ ಕೊಪ್ಪಳ ಹಾಗೂ ಗ್ರಾ.ಪಂ ಅಳವಂಡಿ ಸಹಯೋಗದಲ್ಲಿ ಇಂದು “ಸ್ವಚ್ಛಾತಾ ಹೀ ಸೇವಾ ಆಂದೋಲನಾ” ಅಂಗವಾಗಿ
“ಸ್ವಚ್ಛತಾ ಉದಯ” ಮಾನವ ಸರಪಳಿ ನಿರ್ಮಿಸುವ ಮೂಲಕ ವಿಭಿನ್ನವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಜಿ.ಪಂ ಸಿಇಓ ಮೇಡಂ ಜಿ.ಪಂ ಕೊಪ್ಪಳ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮ ನೈರ್ಮಲ್ಯ, ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ, ತಂಬಾಕು ಬಳಕೆ ನಿಷೇಧ ಕುರಿತು ಮಕ್ಕಳಿಗೆ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು.
ನಂತರ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಪ್ರಜ್ಞೆಯನ್ನು ಮಕ್ಕಳಲ್ಲಿ ಮೂಡಿಸಿ, ಮನೆ ಹಂತದಲ್ಲಿ ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮಾಡಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಕ್ಕಳಿಂದ ಸ್ವಚ್ಛತೆಯ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.
ಈ ವೇಳೆ ಕೊಪ್ಪಳ ತಾ.ಪಂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಶಾಲಾ ಶಿಕ್ಷಕರು, ಗ್ರಾ.ಪಂ ಪಿಡಿಓ ರವರು, ಅಧ್ಯಕ್ಷರು, ಸದಸ್ಯರು, ಎಸ್.ಬಿಎಂ ಸಮಾಲೋಚಕರು, ಜಿಲ್ಲಾ ಹಾಗೂ ತಾಲೂಕ ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಇದ್ದರು.