ಪ್ರತಿಯೊಬ್ಬರೂ ವಿಮೆ ನೊಂದಣಿ ಮಾಡಿಕೊಳ್ಳಿ: ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ

0
115

BP NEWS: ಬಳ್ಳಾರಿ: ಸೆಪ್ಟೆಂಬರ್.29: ನಾವು ಬಳಸುವ ವಾಹನಗಳ ವಿಮೆಯನ್ನು ಎಲ್ಲಾರೂ ಕಡ್ಡಾಯವಾಗಿ ಮಾಡಿಸಬೇಕು ಮತ್ತು ಪ್ರತಿಯೊಂದು ವಿಮೆ ಕಂಪನಿಯು ವಾಹನ ಚಾಲನಾದಾರರಿಗೆ ಸಿಪಿಎ (Compulsory personal accident) ವಿಮೆಯ ಸೌಲಭ್ಯವನ್ನು ಒದಗಿಸುತ್ತದೆ ಎಂದು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅವರು ತಿಳಿಸಿದರು.
ನಗರದ ನ್ಯೂ ಇಂಡಿಯಾ ಅಸೂರೆನ್ಸ್ ಕಂಪನಿ ಲಿಮಿಟೆಡ್ ಕಚೇರಿಯಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ ವಾಹನ(ಬೈಕ್) ಅಪಘಾತದಲ್ಲಿ ಮರಣ ಹೊಂದಿದ ನಾಮಿನಿ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಶಾಖೆಯ ವಿಭಾಗೀಯ ಮ್ಯಾನೇಜರ್ ಪದ್ಮಜ ಕೆ.ವಿ ಅವರು ಮಾತನಾಡಿ, ಈ ಸೌಲಭ್ಯವನ್ನು ಪಡೆಯಲು ಯಾವುದೇ ಮಧ್ಯವರ್ತಿಯ ಅವಶ್ಯಕತೆ ಇರುವುದಿಲ್ಲ. ಪಾಲಿಸಿದಾರರು ಮರಣ ಹೊಂದಿದ ನಂತರ, ನಾಮಿನಿಗಳು ನೇರವಾಗಿ ಕಚೇರಿಗೆ ಬಂದು ವಿಷಯವನ್ನು ತಿಳಿಸಿದ ತಕ್ಷಣವೇ ವಿಮೆಯ ಕ್ಲೈಮ್ ಅನ್ನು ಆದಷ್ಟು ಬೇಗ ಕಂಪನಿಯು ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪಘಾತದಲ್ಲಿ ಮೃತರಾದ ಭಂಡಯ್ಯ ಸ್ವಾಮಿ ಅವರ ಪತ್ನಿಗೆ ರೂ.15 ಲಕ್ಷ ಮೊತ್ತದ ಚೆಕ್‍ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೊತ್ಕಾರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಇಬ್ರಾಹಿಂ ಬಾಬು, ವೀರಶೇಖರ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಉಮೇಶ್ ಹಾಗೂ ಶಾಖೆಯ ಸಿಬ್ಬಂದಿಗಳಾದ ವೆಂಕಟೇಶ ಬಿ.ವೈ, ಗಿರಿಬಾಬು.ಬಿ, ಮಂಜುಳಾ, ನಾಗರಾಜ, ತಿಪ್ಪೇಸ್ವಾಮಿ, ಕಾರ್ತಿಕ್ ಮತ್ತು ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here