ಚೇಂಬರ್ ಆಫ್ ಕಾಮರ್ಸ್‍ನಲ್ಲಿ ಸಮನ್ವಯ ಸಮಿತಿ ಸಭೆ
BP News ಬಳ್ಳಾರಿ,ಸೆ.29-ನಗರದ ಹೃದಯ ಭಾಗದಲ್ಲಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದಲ್ಲಿ ಸಮನ್ವಯ ಸಮಿತಿ ಸಭೆ ಜರುಗಿತು.
ಕಾರ್ಯದರ್ಶಿಗಳಾದ ಯಶ್ವಂತ್ ರಾಜ್ ನಾಗಿರೆಡ್ಡಿ ಮತ್ತು ಎಲ್ಲಾ ಪದಾಧಿಕಾರಿಗಳು ಜೊತೆಗೂಡಿ ಸಭೆಗೆ ಆಗಮಿಸಿದ ಎಲ್ಲ ಮುಖ್ಯ ಅತಿಥಿಗಳನ್ನು ಪುಷ್ಪಗುಚ್ಚ ನೀಡಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಮಹಾರುದ್ರಗೌಡ, ಎ.ಮಂಜುನಾಥ್, ಕೆ.ರಮೇಶ್ ಬೊಜ್ಜಿ, ಕೆ.ಸಿ.ಸುರೇಶ ಬಾಬು, ಜಂಟಿಕಾರ್ಯದರ್ಶಿಗಳಾದ ಎಸ್.ದೊಡ್ಡನಗೌಡ, ಗಿರಿಧರ್ ಸಮನ್ವಯ ಸಮಿತಿ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
—–
ಅಕ್ಟೋಬರ್ 1 ರಂದು ಯುವಜನ ಸಮಾವೇಶ-ಪ್ರಭುದೇವ ಕಪ್ಪಗಲ್ಲು
BP News ಬಳ್ಳಾರಿ,ಸೆ.29-ಇಂದಿನ ತರುಣ ತರುಣಿಯರಿಗೆ ಮಾರ್ಗದರ್ಶನದ ಅವಶ್ಯಕತೆ ಇದ್ದು, ನಿರ್ಮಲ ಪರಿಸರ, ದೈಹಿಕ ಆರೋಗ್ಯಕ್ಕೆ ಸಾತ್ವಿಕ-ಪೌಷ್ಠಿಕ ಆಹಾರ, ಸ್ವ-ಉದ್ಯೋಗ, ಆಟೋಟ, ಗ್ರಾಮೀಣ ಹಾಡು ಹಸೆ, ಸಂತೆ ಜಾತ್ರೆ ಮೇಳಗಳ ಪರಿಚಯಿಸಬೇಕಿದೆ, ಅದಕ್ಕಾಗಿ ನಗರದ ಗಾಂಧಿ ಭವನದಲ್ಲಿ ಅಕ್ಟೋಬರ್ 1 ರಂದು ಬೆಳಗ್ಗೆ 11 ಗಂಟೆಯಿಂದ ಯುವಜನರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಭುದೇವ ಕಪ್ಪಗಲ್ಲು ತಿಳಿಸಿದರು.
ರಾಘವ ಕಲಾಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷ ಪೆÇೀಲೀಸ್ ಅಧಿಕಾರಿ ರವಿ ಚನ್ನಣ್ಣನವರ ಅವರು ಮಾರ್ಗದರ್ಶನ ಮಾಡಲಿದ್ದಾರೆ ಎಂದರು.
—–
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಜಿಲ್ಲಾಡಳಿತಕ್ಕೆ ಮನವಿ
BP News ಬಳ್ಳಾರಿ,ಸೆ.29-ಮಹಾನಗರ ಪಾಲಿಕೆಯ 13ನೇ ವಾರ್ಡ್‍ನ ಕುಲುಮೆ ಚೌಕ್, ಮದರಸಾ ಮುಂದುಗಡೆ ಕಸದ ಪ್ರದೇಶವನ್ನು ಸ್ವಚ್ಛಗೊಳಸಿ ಸದರಿ ಪ್ರದೇಶದÀ ಬಡ ಕೂಟ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸುವಂತೆ ಬಳ್ಳಾರಿ ನಗರ ಜನಜಾಗೃತಿ ಸಂಘವು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.
ಮುಖಂಡರಾದ ಪ್ರದೀಪ್, ಮಿಥುನ್, ಸುರೇಶ ತಿಪ್ಪೇಸ್ವಾಮಿ, ಅಪ್ಪ ರವಿ, ಸುದೀರ್, ರಹೀಂ, ವೈಜಾನ್, ವೆಂಕಟೇಶ್ ಬಾಬು, ಗಾದಿಲಿಂಗ, ನಾಗಪ್ಪ, ಹಾಗೂ ಸ್ಥಳೀಯ ಕಾರ್ಮಿಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
——
ಸರ್ಕಾರಿ ನೌಕರರ ಒಕ್ಕೂಟದಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ
BP News ಬಳ್ಳಾರಿ,ಸೆ.28-ಸರ್ಕಾರಿ ಇಲಾಖೆಗಳು, ನಿಗಮ, ಮಂಡಳಿಗಳನ್ನು ವಿಲೀನಾತಿ ಹೆಸರಿನಲ್ಲಿ ಮುಚ್ಚುವುದರಿಂದ ಜನತೆಗೆ ದಕ್ಷತೆಯಿಂದ ಸೇವೆ ಒದಗಿಸುವುದಿರಲಿ ಪ್ರಸ್ತುತ ಸಿಗುತ್ತಿರುವ ಸೇವಾ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎನ್ನುವ ಅಪಾಯದ ಮುನ್ಸೂಚನೆ ಅರಿತಿರುವ ಸರ್ಕಾರಿ ನೌಕರರು ಇಂದು ಧರಣಿ ಸತ್ಯಾಗ್ರಹ ನಡೆಸಿದರು.
ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ನಾಗರಾಜ್ ರ್ಯಾವಣಿಕಿ ಮತ್ತು ಸಮಿತಿಯ ಸದಸ್ಯರಾದ ಹುಸೇನಪ್ಪ, ಹರೀಶ್, ಅಜಯ್, ಪರಮೇಶ್, ಪ್ರಭಾಕರ್, ವೀರೇಶ್, ಕೆ.ಮಂಜುನಾಥ, ಶಶಿಕುಮಾರ್, ಹನುಮಂತಪ್ಪ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಇದ್ದರು.
——-
ಬಡಜನರಿಗೆ ಮಿಡಿಯುತ್ತಿರುವ ಮಿಂಚು ಇವ.ಶ್ರೀನಿವಾಸುಲು
BP News ಬಳ್ಳಾರಿ,ಸೆ.29-ಮಹಾನಗರ ಪಾಲಿಕೆಯ ಸದಸ್ಯ ವಿ.ಶ್ರೀನಿವಾಸುಲು ಮಿಂಚು ಅವರ ಜನ ಸಂಪರ್ಕ ಕಚೇರಿಯಲ್ಲಿ ಬಡವರಿಗೆ ನಾನಾ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರದಿಂದ ಲಭಿಸುವ ನೆರವನ್ನು ಕೈಗೊಂಡಿದ್ದಾರೆ.
ಬಿ.ಪಿ.ಎಲ್. ಮತ್ತು ಎ ಪಿ ಎಲ್ ಕಾರ್ಡ್ ದಾರರ ಕುಟುಂಬ ಸದಸ್ಯರಿಗೆ ಯಾವುದಾದದರು ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬ ಕ್ಕೆ 5ಲಕ್ಷದ ವರೆಗೆ ವಿಮೆ ಹಾಗೂ ಎ ಪಿ ಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 1.5000 ಲಕ್ಷದ ವರೆಗೆ ವಿಮೆಯ ನೊಂದಣಿಯನ್ನು ವಾರ್ಡಿನ ಸದಸ್ಯ ವಿ.ಶ್ರೀನಿವಾಸುಲು ಮಿಂಚು ಮಾಡಿಕೊಡಲಿದ್ದಾರೆ.
——-
ಸೇತುವೆ ಹಾಗೂ ಬಿಟಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ
BP News ಬಳ್ಳಾರಿ,ಸೆ.29-ಮಹಾನಗರ ಪಾಲಿಕೆಯ 34ನೇ ವಾರ್ಡಿನ ವಿದ್ಯಾನಗರ ಭತ್ರಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಬಿಟಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್ ಇ ಯೋಜನೆಯಡಿ ರೂ 1.30 ಕೋಟಿ ಮೊತ್ತದ ಬಿಟಿ ರಸ್ತೆ ಹಾಗೂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಶಾಸಕರಾದ ಜಿ ಸೋಮಶೇಖರ್ ರೆಡ್ಡಿ, ಮಹಾಪೌರಾರಾದ ಎಂ.ರಾಜೇಶ್ವರಿ ಸುಬ್ಬರಾಯುಡು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
—–