BP News Karnataka Super Fast 27-09-2022

0
255

ಭಾರತ್ ಜೋಡೋ ಯಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಡಿಕೆ ಶಿವಕುಮಾರ್ ಸಲಹೆ


BP News  ಬಳ್ಳಾರಿ,ಸೆ.28-ಭಾರತ್ ಜೋಡೋ ಯಾತ್ರೆ ಬಳ್ಳಾರಿಗೆ ಬರಲಿದ್ದು ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ, ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲಹೆಗಳನ್ನು ನೀಡಿದರು. .
ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ಇಂದು ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನ ವೀಕ್ಷಣೆ ಮಾಡಿದ ಬಳಿಕ ಗುರು ಫಂಕ್ಷನ್ ಹಾಲ್ ನಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರು, ಸಂಸದರು ಮತ್ತು ಮುಖಂಡರಿಗೆ ಮಾರ್ಗದರ್ಶನ ಮಾಡಿದರು.
——
ಬಳ್ಳಾರಿ ಜಿಲ್ಲೆಯ ಪ್ರವಾಸಿ ತಾಣಗಳ ಅರಿವು ಅಗತ್ಯ-ಪಿ.ಎಸ್.ಮಂಜುನಾಥ


BP News  ಬಳ್ಳಾರಿ ಸೆ.27, ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರವಾಸೋದ್ಯಮ ತಾಣಗಳಿದ್ದು ಅವುಗಳನ್ನು ಜನರ ಗಮನಕ್ಕೆ ತಂದು ಜಿಲ್ಲೆಯ ಜನತೆಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಬಳ್ಳಾರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಪಿ.ಎಸ್.ಮಂಜುನಾಥ ಅವರು ತಿಳಿಸಿದರು.
ಅವರು ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಏರ್ಪಡಿಸಿದ್ದ “ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022ರ ಮತ್ತು ರಾಷ್ಟ್ರೀಯ ವಿಚಾರಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
——
ಪ್ರವಾಸೋದ್ಯಮದಲ್ಲಿ ಸುಸ್ಥಿರತೆ ಮತ್ತು ಸಂರಕ್ಷಣೆ ಮುಖ್ಯ : ಅನಿರುದ್ಧ ಶ್ರವಣ್


BP News  ಬಳ್ಳಾರಿ,ಸೆ.27-ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಹೊಂದಲು ಸುಸ್ಥಿರತೆ ತುಂಬಾ ಮುಖ್ಯ. ಮುಂದಿನ ಪೀಳಿಗೆಗಳಿಗೆ ಪ್ರೇಕ್ಷಣೀಯ ಸ್ಥಳಗಳ ಮಹತ್ವ ತಿಳಿಯಬೇಕೆಂದರೆ ಅವುಗಳನ್ನು ಸಂರಕ್ಷಿಸಿಕೊಂಡು ಹೋಗವುದು ನಮ್ಮ ಕರ್ತವ್ಯ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನಡೆದ ಪ್ರಾಚೀನ ಪುರಾತತ್ವ ಅಧ್ಯಯನ ವಿಭಾಗ ಮತ್ತು ಪ್ರವಾಸೋದ್ಯಮ ಇಲಾಖೆ ವಿಜಯನಗರ ಇವರ ಆಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಪ್ರವಾಸೋದ್ಯಮದ ಪುನರಾವಲೋಕನ `ರಾಷ್ಟ್ರೀಯ ವಿಚಾರ ಸಂಕಿರಣ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
—–
ಪುರುಷ ಮತ್ತು ಮಹಿಳೆಯರ ಸಬಲೀಕರಣ ಅಗತ್ಯ-ಟಿಜಿ ವಿಠಲ್


BP News  ಬಳ್ಳಾರಿ,ಸೆ.27-ಸಂತಾನೋತ್ಪತಿ ಆರೋಗ್ಯ ಮತ್ತು ಹಕ್ಕುಗಳ ಗುರುತಿಸಿ ಸ್ವಯಂಪೇರಿತ ಕುಟುಂಬ ಯೋಜನೆ ಸೇರಿದಂತೆ ಅಭಿವೃದ್ದಿಗೆ ಅಡಿಪಾಯ ಮತ್ತು ಸಮಾಜಗಳನ್ನು ಮುನ್ನಡೆಸಲು ಪುರುಷ ಮತ್ತು ಮಹಿಳೆÀಯರ ಸಬಲೀಕರಣ ಆದಲ್ಲಿ ದೇಶದ ಪ್ರಗತಿಸಾಧ್ಯವೆಂದು ಭಾರತೀಯ ಕೌಟುಂಬಿಕ ಯೋಜನೆಯ ಅಧ್ಯಕ್ಷ ಟಿಜಿ ವಿಠಲ್ ತಿಳಿಸಿದರು.
ಬಳ್ಳಾರಿ ಗೃಹ ರಕ್ಷಕದಳ ಬಳ್ಳಾರಿ ನಗರ ಹಾಗೂ ಪ್ಯಾಮಿಲಿ ಪ್ಲಾನಿಂಗ್ ಆಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಗರ್ಭ ನಿರೋಧಕ ದಿನಾಚರಣೆ – 2022ಅಂಗವಾಗಿ ಗರ್ಭ ನಿರೋಧಕಗಳ ಬಳಕೆಯ ಜಾಗೃತಿ ಕುರಿತು ಅವರು ಮಾತನಾಡಿದರು.
——
ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ


BP News ಬಳ್ಳಾರಿ,ಸೆ.27-ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂದು ಭಾರತೀಯ ಜನತಾ ಪಾರ್ಟಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾರುತಿ ಪ್ರಸಾದ್ ಎಸ್., ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಸವಲಿಂಗಪ್ಪ, ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರಲಿಂಗನಗೌಡ, ಜಿಲ್ಲಾಧ್ಯಕ್ಷ ಮುರಾರಿಗೌಡ, ಜಿಲ್ಲಾ ಉಪಾಧ್ಯಕ್ಷ ವೀರಶೇಖರರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಕೆ.ಹನುಮಂತಪ್ಪ, ಮುಖಂಡರಾದ ಓಬಳೇಶ್ ಇನ್ನಿತರರು ಇದ್ದರು.
—–
ಕಾಂಗ್ರೆಸ್ ಭ್ರಷ್ಟಾಚಾರ ಕರಪತ್ರಗಳನ್ನು ಗೋಡೆಗೆ ಅಂಟಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು


BP News ಬಳ್ಳಾರಿ,ಸೆ.27-ಕಾಂಗ್ರೆಸ್ ಪಕ್ಷದಲ್ಲಿ ನಡೆದಿದ್ದ ಹಲವು ರೀತಿಯ ಭ್ರಷ್ಟಾಚಾರಗಳನ್ನು ಜನರಿಗೆ ತಿಳಿಸಲು ಇಂದು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಜಿಲ್ಲಾ ಘಟಕದಿಂದ ಗೋಡೆಗಳಿಗೆ ಕಾಂಗ್ರೆಸ್ ಭ್ರಷ್ಟಾಚಾರ ಭಿತ್ತಿ ಪತ್ರಗಳನ್ನು ಅಂಟಿಸಲಾಯಿತು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಗೌಡ ನೇತೃತ್ವದಲ್ಲಿ ಪದಾಧಿಕಾರಿಗಳಾದ ಗಿರೀಶ್ ಪಾಟೀಲ್, ಅಕ್ಷಯ್ ಕುಮಾರ್, ಸುದರ್ಶನ್ ರೆಡ್ಡಿ, ರಾಘವೇಂದ್ರ, ಸುನೀಲ್ ರೆಡ್ಡಿ ಇನ್ನಿತರರು ರಾಯಲ್ ವೃತ್ತದ ಖಾಸಗಿ ಗೋಡೆಗಳಿಗೆ ಕಾಂಗ್ರಸ್ ಭ್ರಷ್ಟಾಚಾರದ ಕುರಿತ ಭಿತ್ತಿ ಪತ್ರಗಳನ್ನು ಅಂಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
——-
ದೇವಿಗೆ ಮೊದಲ ದಿನ ಅರಿಷಿಣ ಕುಂಕುಮ ಅಲಂಕಾರ


BP News ಬಳ್ಳಾರಿ,ಸೆ.27-ಇಲ್ಲಿನ ಬೆಂಕಿ ಮಾರೆಮ್ಮ ದೇವಿಗೆ ನವರಾತ್ರಿ ಪ್ರಯುಕ್ತ ಅರಿಷಿಣ ಕುಂಕುಮ ಅಲಂಕಾರ ಮಾಡಲಾಗಿತ್ತು.
ಬೆಂಗಳೂರು ರಸ್ತೆಯ ಬೆಂಕಿ ಮಾರೆಮ್ಮ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿ ಉತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಭಕ್ತರು ಪ್ರತಿನಿತ್ಯ ಬೆಳಿಗ್ಗೆ 4 ಗಂಟೆಯಿಂದಲೇ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ನಗರದಲ್ಲಿ ಬೆಂಕಿ ಮಾರೆಮ್ಮ ದೇವಿಗೆ ತನ್ನದೇ ಆದ ಐತಿಹ್ಯ ಇದ್ದು ಬೆಂಕಿ ಮಾರೆಮ್ಮನಿಗೆ ನವರಾತ್ರಿಯುದ್ದಕ್ಕೂ ವಿಶೇಷ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ.
—–

 

LEAVE A REPLY

Please enter your comment!
Please enter your name here