BP News Karnataka Super Fast 26-09-2022

0
273

ಪೇ ಸಿಎಂ ಪೋಸ್ಟರ್ ಅಂಟಿಸಿದವರ ವಿರುದ್ಧ ತನಿಖೆ ಆರಂಭ-ಎಸ್.ಪಿ.

BP News ಬಳ್ಳಾರಿ,ಸೆ.26-ರೈಲ್ವೆ ಕಾಂಪೌಂಡ್ ಗೋಡೆಗೆ ಭಿತ್ತಿ ಪತ್ರ ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಬಳ್ಳಾರಿ ರೇಲ್ವೆ ನಿಲ್ದಾಣದ ಸ್ಟೇಷನ್ ಮಾಷ್ಟರ್ ಶೇಷಾದ್ರಿ ಅವರು ಗಾಂಧೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೋತಿ ಸರ್ಕಲ್ ಬಳಿಯ ರೇಲ್ವೆ ಸ್ಟೇಷನ್ ಕಾಂಪೌಂಡ್ ಗೋಡೆಗೆ ಅಪರಿಚಿತರು ಪೇ ಸಿಎಂ ಎಂದು ಭಿತ್ತಿ ಪತ್ರಗಳನ್ನು ಅಂಟಿಸಿದ್ದಾರೆ. ಇದರಿಂದ ಶಾಂತಿ ಭಂಗವಾಗುವ ಸಾಧ್ಯತೆ ಇದೆ. ಅಂಥವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರು ದಾಖಲಿಸಿದ್ದಾರೆ ಎಂದು ಎಸ್‍ಪಿ ತಿಳಿಸಿದ್ದಾರೆ.
—–
ಬಡವರ ಮನೆಗಳ ಮೇಲ್ಛಾವಣಿ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಚಾಲನೆ


BP News ಬಳ್ಳಾರಿ,ಸೆ.26-ಬಡವರಿಗೊಂದು ಕನಸಿನ ಮನೆ ಕಟ್ಟಿ, ಅವರ ಮುಖದಲ್ಲಿ ಮಂದಹಾಸ ಮತ್ತು ಖುಷಿ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಧರಿಸಿದ್ದು ಇಂದು ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸರಕಾರದ ಸ್ಲಂ ಬೋರ್ಡ್ ನಿಂದ ನಿರ್ಮಿಸುತ್ತಿರುವ 1100 ಮನೆಗಳ ಪೈಕಿ ಇಂದು 51 ಮನೆಗಳಿಗೆ ಮೇಲ್ಚಾವಣಿ ಕಾಮಗಾರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬರಾಕೊ ಹಾಲು ಒಕ್ಕೂಟದ ವೀರಶೇಖರ ರೆಡ್ಡಿ, ಮಹಾನಗರ ಪಾಲಿಕೆಯ ಸದಸ್ಯರಾದ ಮೋತ್ಕರ ಶ್ರೀನಿವಾಸ ರೆಡ್ಡಿ ಇದ್ದರು.
——
ಎಐಎಂಎಸ್‍ಎಸ್ ನಿಂದ ಸಾಂಕೇತಿಕ ಪ್ರತಿಭಟನೆ


BP News ಬಳ್ಳಾರಿ,ಸೆ.26-ಸ್ವಾತಂತ್ರ್ಯ ಹಾಗೂ ಆಯ್ಕೆಯ ಹಕ್ಕಿಗಾಗಿ ಹೋರಾಟ ನಿರತರಾಗಿರುವ ಇರಾನಿನ ಜನತೆಯ ಮೇಲಿನ ದಮನವನ್ನು ನಿಲ್ಲಿಸಲು ಇರಾನ್ ಸರ್ಕಾರವನ್ನು ಆಗ್ರಹಿಸಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಛೇರಿ ಎದುರು ಸಾಂಕೇತಿಕ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ
ಎ.ಐ.ಎಂ.ಎಸ್.ಎಸ್‍ನ ಜಿಲ್ಲಾಧ್ಯಕ್ಷರಾದ ಈಶ್ವರಿ ಕೆ.ಎಂ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ರೇಖಾ, ವಿದ್ಯಾವತಿ, ಗಿರಿಜಾ, ಸುಜಾತ ಹಾಗೂ ಸದಸ್ಯರು ಭಾಗವಹಿಸಿದ್ದರು.
—–
ನೂತನ ಬಡಾವಣೆಳ ಅನುಮೋದನೆಗೆ ಅಸ್ತು


BP News ಬಳ್ಳಾರಿ,ಸೆ.26-ಇಂದು ಬೆಳಿಗ್ಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರದ ಹಲವಾರು ಭಾಗಗಳಲ್ಲಿ ನೂತನ ಬಡಾವಣೆಗಳ ಅನುಮೋದನೆಗೆ ತೀರ್ಮಾನಿಸಲಾಗಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾರುತಿ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಯಲ್ಲಿ ನಡೆದ ಸಭೆಯಲ್ಲಿ ನಗರ ಶಾಸಕರಾದ ಜಿ ಸೋಮಶೇಖರ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ. ಎಂ.ಸತೀಶ್, ನಗರಭಿವೃದ್ಧಿ ಪ್ರಧಿಕಾರದ ಸದಸ್ಯರಾದ ಶಂಕ್ರಪ್ಪ, ರಾಮಾಂಜಿ, ನರಸಪ್ಪ, ಜ್ಯೋತಿ ಪ್ರಕಾಶ್, ಆಯುಕ್ತರು ಹಾಗೂ ಇನ್ನಿತರೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.
——
ಶುಲ್ಕ ಪದ್ಧತಿ ಹಿಂಪಡೆಯಲು ಎಐಡಿಎಸ್‍ಓ ಆಗ್ರಹ


BP News ಬಳ್ಳಾರಿ,ಸೆ.26-ಈ ವರ್ಷದಿಂದ ಖಾಸಗಿ ಮ್ಯಾನೇಜ್ಮೆಂಟ್ ಕಾಲೇಜುಗಳ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕ ಶೇ.10 ರಷ್ಟು ಏರಿಸಿದ ರಾಜ್ಯ ಸರ್ಕಾರ ಕೂಡಲೇ ಈ ಪದ್ಧತಿಯನ್ನು ಕೈಬಿಡಬೇಕೆಂದು ಎಐಡಿಎಸ್‍ಓ ಆಗ್ರಹಿಸಿದೆ.
ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯದ ವಿದ್ಯಾರ್ಥಿಗಳ ಪರವಾಗಿ ಅಗ್ರಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
——
ಮನೆ, ಕಚೇರಿ ಮತ್ತು ಮಾಲ್ ಬಳಕೆ ಪ್ರಮಾಣ ವಿಸ್ತರಣೆಗೆ ಆದ್ಯತೆ-ಎಸ್.ಮಾರುತಿ ಪ್ರಸಾದ್


BP News ಬಳ್ಳಾರಿ,ಸೆ.26-ಮನೆ, ಕಚೇರಿ, ಸಿನೇಮಾ ಹಾಲ್ ಮತ್ತು ಮಾಲ್ ನಿವೇಶನ ಬಳಕೆಯ ಪ್ರಮಾಣ ಹೆಚ್ಚಿಸುವ ಸಲುವಾಗಿ ಈಗಾಗಲೇ ರಾಜ್ಯ ಸಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ನನ್ನ ಅವಧಿಯಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್ ಹೇಳಿದ್ದಾರೆ.
ಪ್ರಾಧಿಕಾರದ ಸದಸ್ಯರಾದ ಜ್ಯೋತಿ ಪ್ರಕಾಶ್, ಬರಾಕೊ ಹಾಲು ಒಕ್ಕೂಟದ ನಿರ್ದೇಶಕರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಆದ ವೀರಶೇಖರರೆಡ್ಡಿ ಅವರೊಡಗೂಡಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು
——-
ರಂಗಮಂದಿರ ನೀಡುವಲ್ಲಿ ತಾರತಮ್ಯ-ಜಿಲ್ಲಾಧಿಕಾರಿಗಳಿಗೆ ದೂರು


BP News ಬಳ್ಳಾರಿ,ಸೆ.26-ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಕಾಯ್ದಿರಿಸುವಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ ಎನ್ನುವ ಕುರಿತು ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆಯು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ವೇದಿಕೆಯ ನೇತೃತ್ವ ವಹಿಸಿದ್ದ ಕೆ.ಜಗಧೀಶ್ ಇವರು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ದೂರನ್ನು ಪತ್ರಿಕಾ ಮಾಧ್ಯಮಗಳಿಗೆ ನೀಡಿದ್ದು, ರಂಗತೋರಣ ಸಂಸ್ಥೆಯ ಕಾರ್ಯದರ್ಶಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
——

LEAVE A REPLY

Please enter your comment!
Please enter your name here