BP News Karnataka Super Fast 24-09-2022

0
145

ರೈತ, ಕೂಲಿಕಾರ್ಮಿಕರ ಎಲ್ಲ ರೀತಿಯ ಸಾಲ ಮನ್ನಾ ಮಾಡಲು ಆಗ್ರಹಿಸಿ ಪ್ರತಿಭಟನಾ ಧರಣಿ


BP News  ಬಳ್ಳಾರಿ,ಸೆ.24-ರಾಜ್ಯದಲ್ಲಿರುವ ರೈತರು, ಕೃಷಿ ಕೂಲಿಕಾರ್ಮಿಕರು, ದಲಿತರು, ಮಹಿಳೆಯರು ಮತ್ತು ಕೃಷಿ ಕ್ಷೇತ್ರದಲ್ಲಿ ದುಡಿಯುವ ವರ್ಗದವರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಪಿಐ(ಎಂ)ನ ತಾಲೂಕು ಸಮಿತಿ ಕಾರ್ಯದರ್ಶಿ ಜೆ.ಚಂದ್ರಕುಮಾರಿ ನೇತೃತ್ವದಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷ(ಮಾಕ್ರ್ಸ್‍ವಾದಿ) ತಾಲೂಕು ಸಮಿತಿಯಿಂದ ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
—–
ಚಿನ್ನ ಪ್ರಿಯರಿಗೆ ರಾಜಮಹಲ್ ನಿಂದ ಬಂಪರ್ ಆಫರ್-ರಮೇಶ್


BP News  ಬಳ್ಳಾರಿ,ಸೆ.24-ನಗರದ ರಾಜಮಹಲ್ ಫ್ಯಾನ್ಸಿ ಜ್ಯುವೆಲರ್ಸ್ ಇವರು ಬಂಗಾರದ ಪ್ರಿಯರಿಗೆ ರಾಜಮಹಲ್ ಚಿನ್ನದ ಹಬ್ಬ ಹೆಸರಿನಲ್ಲಿ ಬಂಪರ್ ಆಫರ್ ನೀಡಿದ್ದಾರೆ.
ಈ ಕುರಿತು ಇಂದು ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಮಹಲ್ ಫ್ಯಾನ್ಸಿ ಜ್ಯುವೆಲರ್ಸ್‍ನ ವ್ಯವಸ್ಥಾಪಕ ರಮೇಶ್ ಅವರು, ಸೆ.26ರಿಂದ 2023ರ ಜನೆವರಿ 14ರವರೆಗೆ ರಾಜಮಹಲ್ ಚಿನ್ನದ ಹಬ್ಬದ ನಿಮಿತ್ತ 25 ಸಾವಿರ ಕೂಪನ್‍ಗಳನ್ನು ವಿತರಿಸಲಾಗುತ್ತಿದೆ. ಈ ಕೂಪನ್ ಪಡೆಯಲಿಚ್ಛಿಸುವವರು ತಮ್ಮ ಚಿನ್ನದಾಭರಣ ಅಂಗಡಿಯಲ್ಲಿ ರೂ.20 ಸಾವಿರ ಮೌಲ್ಯದ ಚಿನ್ನ ಖರೀದಿಸಬೇಕು. ಹೀಗೆ ಖರೀದಿಸಿದವರಿಗೆ ಕೂಪನ್‍ಗಳನ್ನು ನೀಡಲಾಗುತ್ತಿದೆ. ಜನೆವರಿ 14ರ ವೇಳೆ ಎಲ್ಲರ ಸಮಕ್ಷಮದಲ್ಲಿ ಚೀಟಿ ಎತ್ತಲಾಗುತ್ತದೆ ಎಂದರು.
—–
ಬಳ್ಳಾರಿಯ ದೇವಿನಗರ ಶ್ರೀ ಎಲ್ಲಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಆಚರಣೆ


BP News  ಬಳ್ಳಾರಿ,ಸೆ.23-ಇಲ್ಲಿನ ದೇವಿನಗರ 5ನೇ ಕ್ರಾಸ್‍ನಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮದೇವಿ ದೇವಸ್ಥಾನದಲ್ಲಿ ಸೆ.26ರಿಂದ ಶ್ರೀ ರೇಣುಕಾ ಎಲ್ಲಮ್ಮದೇವಿ ಶರನ್ನವರಾತ್ರಿ ಉತ್ಸವಗಳು ನಡೆಯಲಿವೆ.
ಪ್ರತಿನಿತ್ಯ ದೇವಿಗೆ ಅಲಂಕಾರ ಸೇವೆಗಳು ನಡೆಯಲಿದ್ದು, ಸೆ.26ರಂದು ಶ್ರೀ ಬಾಲಾ ತ್ರಿಪುರ ಸುಂದರಿ ದೇವಿ ಅಲಂಕಾರ, ಸೆ.27ರಂದು ಅರ್ಧನಾರೀಶ್ವರಿ ದೇವಿ ಅಲಂಕಾರ, ಸೆ.28ರಂದು ಶ್ರೀ ರಾಜರಾಜೇಶ್ವರಿ ದೇವಿ ಅಲಂಕಾರ, ಸೆ.29ರಂದು ಶ್ರೀ ಮಹಾಲಕ್ಷ್ಮೀ ದೇವಿ ಅಲಂಕಾರ, ಸೆ.30ರಂದು ಶ್ರೀ ಶಾಕಾಂಬರಿ ದೇವಿ ಅಲಂಕಾರ, ಅಕ್ಟೋಬರ್ 1 ರಂದು ಶ್ರೀ ರೇಣುಕಾ ಎಲ್ಲಮ್ಮದೇವಿ ಅಲಂಕಾರ, ಅ.2ರಂದು ಶ್ರೀ ಮಹಾಸರಸ್ವತಿ ದೇವಿ ಅಲಂಕಾರ, ಅ.3ರಂದು ಶ್ರೀ ಮಹಾದುರ್ಗಾದೇವಿ ಅಲಂಕಾರ, ಅ.4ರಂದು ಶ್ರೀ ಮಹಿಷಾಸುರ ಮರ್ಧಿನಿ ಅಲಂಕಾರ ಮತ್ತು ಅ.5ರಂದು ಶ್ರೀ ತಾಯಿಯ ನಿಜರೂಪ ದರ್ಶನ ಅಲಂಕಾರ ಇರುತ್ತದೆ.
——
ಸುಲಿಗೆಕೋರರ ಬಾಲ ಕತ್ತರಿಸಿದ ಪೊಲೀಸ್ ಪವರ್


BP News  ಬಳ್ಳಾರಿ,ಸೆ.24-ಜಿಲ್ಲೆಯ ಸಂಡೂರಿನ ಅದಿರು ಕಂಪನಿ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದ್ದ ಸುಲಿಗೆಕೋರರÀ ಬಾಲವನ್ನು ಸಂಡೂರಿನ ಪೊಲೀಸರು ಕತ್ತರಿಸಿದ್ದಾರೆ. ಪೊಲೀಸ್ ಪವರ್ ಗೆ ಸಂಡೂರಿನ ಜನತೆ ಆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಡೂರು ವೃತ್ತ ವಿಭಾಗದಲ್ಲಿ ಇದೇ ಸೆ.17ರಿಂದ 19ರ ಅವಧಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಂಡೂರು ಪೊಲೀಸರು ಸೆ.21 ರಂದು ಪ್ರಕರಣ ದಾಖಲಿಸಿಕೊಂಡು ಸುಲಿಗೆಕೋರರ ಹೆಡೆಮುರಿಗೆ ಕಟ್ಟಿದ್ದಾರೆ.
—–
ಬದುಕಿನ ಒತ್ತಡ ನಿವಾರಣೆಗೆ ಸಹಕಾರಿ ಯೋಗ : ಡಾ. ಸ. ಚಿ. ರಮೇಶ


BP News  ಬಳ್ಳಾರಿ,ಸೆ.24-ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಯೋಗದ ಪಾತ್ರ ಮಹತ್ವದ್ದು. ಯೋಗದಲ್ಲಿ ಹಲವಾರು ಉದ್ಯೋಗ ಅವಕಾಶಗಳಿವೆ. ನಮಗಾಗಿ ಯಾರು ಅವಕಾಶಗಳನ್ನು ಸೃಷ್ಠಿಸುವುದಿಲ್ಲ ಅದನ್ನು ನಾವಾಗೆ ಸೃಷ್ಟಿ ಮಾಡಿಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿÀ ಡಾ. ಸ. ಚಿ. ರಮೇಶ ಅವರು ಹೇಳಿದರು. .
ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗದ ವತಿಯಿಂದ ನುಡಿ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆದಾಯ ಮೂಲಗಳಾಗಿ ಮತಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಚರಿತ್ರೆಯ ಸೃಷ್ಟಿಗೆ ಕಾರಣಿಭೂತವಾಗಲಿವೆ ಎಂದರು.
—–
10 ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ವ್ಯಕ್ತಿಗೆ ಸನ್ಮಾನ


BP News  ಬಳ್ಳಾರಿ,ಸೆ.23-ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರಿಂದ 2022ನೇ ಸಾಲಿನ ಅಕ್ಟೋಬರ್ ಮಾಹೆಯಲ್ಲಿ ಸ್ವಯಂ ಪ್ರೇರಿಕ ರಕ್ತದಾನ ದಿನಾಚಾರಣೆ ಆಚರಿಸಲಾಗುತ್ತಿದ್ದು, ರಕ್ತದಾನಿಗಳು ಅವರ ಜೀವನದಲ್ಲಿ 10 ಕಿಂತ ಹೆಚ್ಚುಬಾರಿ ರಕ್ತದಾನ ಮಾಡಿದ್ದಲ್ಲಿ ಅವರಿಗೆ ಸನ್ಮಾನ ಮಾಡಲಾಗುತ್ತದೆ.
10 ಕಿಂತ ಹೆಚ್ಚಿಬಾರಿ ರಕ್ತದಾನ ಮಾಡಿದ್ದ ವ್ಯಕ್ತಿಗಳು ತಮ್ಮ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆಗೆ ಸೆ.27ರೊಳಗೆ ನೀಡಲು ಕೋರಲಾಗಿದೆ. ಈ ಹಿಂದೆ ಸನ್ಮಾನ ಮಾಡಿರುವ ವ್ಯಕ್ತಿಗಳು ಅರ್ಹರಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
——-
ಕÉೀವಲ 150 ರೂ.ಗೆ ಬಳ್ಳಾರಿಗೂ ಬಂತು ದ್ರಾಕ್ಷಿ ಬುಟ್ಟಿ


BP News ಬಳ್ಳಾರಿ,ಸೆ.24-ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಹೀಗಾಗಿ ಲಕ್ಷಾಂತರ ರೂ.ಖರ್ಚು ಮಾಡಿ ದಲ್ಲಾಲಿಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ. ಈ ಸೂಕ್ಷ್ಮವನ್ನು ಅರಿತು ತಾನು ಬೆವರು ಸುರಿಸಿ ಬೆಳೆದ ಫಲ ತನಗೆ ದಕ್ಕದೇ ಹೋದರೆ ನನ್ನ ಕುಟುಂಬ ಬೀದಿ ಪಾಲು ಆದೀತು ಎನ್ನುವ ಸತ್ಯ ಅರಿತ ರೈತ ಇದೀಗ ತಾನೇ ಸ್ವತಃ ಬೀದಿಗೆ ಇಳಿದು ಮಾರಾಟ ಮಾಡುತ್ತಿದ್ದಾನೆ.
ಮಾನವೀಯತೆಯ ಅಂತಃಕರಣದಿಂದ ರೈತ ಬೆಳೆದ ಹಣ್ಣು, ತರಕಾರಿ ಖರೀದಿಸಿ ಅವನÀನ್ನೂ, ಅವನ ಕುಟುಂಬವನ್ನೂ ಕಾಪಾಡುವ ಹೊಣೆ ಪ್ರಜ್ಞಾವಂತ ನಾಗರಿಕರದ್ದಾಗಿದೆ.
——

 

 

LEAVE A REPLY

Please enter your comment!
Please enter your name here