ಬದುಕಿನ ಒತ್ತಡ ನಿವಾರಣೆಗೆ ಸಹಕಾರಿ ಯೋಗ : ಡಾ. ಸ. ಚಿ. ರಮೇಶ
BP News ಬಳ್ಳಾರಿ,ಸೆ.23-ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಯೋಗದ ಪಾತ್ರ ಮಹತ್ವದ್ದು. ಯೋಗದಲ್ಲಿ ಹಲವಾರು ಉದ್ಯೋಗ ಅವಕಾಶಗಳಿವೆ. ನಮಗಾಗಿ ಯಾರು ಅವಕಾಶಗಳನ್ನು ಸೃಷ್ಠಿಸುವುದಿಲ್ಲ ಅದನ್ನು ನಾವಾಗೆ ಸೃಷ್ಟಿ ಮಾಡಿಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿÀ ಡಾ. ಸ. ಚಿ. ರಮೇಶ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗದ ವತಿಯಿಂದ ನುಡಿ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
—-
ದುಶ್ಚಟಗಳಿಂದ ದೂರವಿರುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ:ನ್ಯಾ.ಸತೀಶ್ ಬಾಳೆ
BP News ಬಳ್ಳಾರಿ,ಸೆ.23-ನಿಮ್ಮ ಮನಸ್ಸು ಮತ್ತು ಆರೋಗ್ಯ ಕಾಪಾಡಿಕೊಂಡು ಕುಟುಂಬದ ಸದಸ್ಯರೊಂದಿಗೆ ಆರೋಗ್ಯವಾಗಿದ್ದೇವೆ ಎಂಬ ಭರವಸೆ ಮೂಡಿಸುವುದರ ಮೂಲಕ ದುಶ್ಚಟಗಳಿಂದ ದೂರವಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸತೀಶ್ ಜೆ.ಬಾಳಿ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಂದಿಖಾನೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಕರ್ನಾಟಕಕ್ಕೆ ಅಭಿಯಾನ ವಿಶೇಷ ಆಂದೋಲನದ ಅಡಿಯಲ್ಲಿ ನಗರದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
——
ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಮತ್ತು ಹೊಸ ಬ್ಯಾಚ್ ಕೋರ್ಸುಗಳ ಪ್ರಾರಂಭ
BP News ಬಳ್ಳಾರಿ,ಸೆ.23- ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯರ ಕನಸಿನಂತೆ ನಾವು ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆಂಬ ಉದ್ದೇಶದಿಂದ ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಾರಂಭ ಮಾಡಿ ಬಡ ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಾ ಬಂದಿದೆ ಎಂದು ಗೌರವ ಕಾರ್ಯದರ್ಶಿ ಯಶವಂತ್‍ರಾಜ್ ನಾಗಿರೆಡ್ಡಿ ಕಿವಿಮಾತು ಹೇಳಿದರು.
ಇಲ್ಲಿನ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಬಳ್ಳಾರಿ ಚೇಂಬರ್ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಮತ್ತು ಹೊಸ ಬ್ಯಾಚ್ ಕೋರ್ಸುಗಳ ಪ್ರಾರಂಭ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
——
27 ಶಾಲೆಗಳಲ್ಲಿ ಸೀರೆಗಳನ್ನು ವಿತರಿಸಿದ ಸಚಿವ ಬಿ.ಶ್ರೀರಾಮುಲು ಆಪ್ತರು
BP News ಬಳ್ಳಾರಿ,ಸೆ.223ಶಿಕ್ಷಕರ ದಿನಾಚರಣೆಯಂದು ಗೌರವಯುತವಾಗಿ ಶಿಕ್ಷಕರಿಗೆ ಸೀರೆ ವಿತರಿಸುವ ಕಾರ್ಯಕ್ರಮಕ್ಕೆ ವಾಗ್ದಾನ ನೀಡಿರುವಂತೆ ಸಚಿವ ಬಿ.ಶ್ರೀರಾಮುಲು ಅವರ ಅಪೇಕ್ಷೆಯಂತೆ ಸಚಿವರಾದ ಬಿ.ಶ್ರೀರಾಮುಲು ಅವರ ಆಪ್ತರು ಇಂದು 27 ಗ್ರಾಮಗಳಲ್ಲಿ ಸೀರೆಗಳನ್ನು ವಿತರಿಸಿ ಶಿಕ್ಷಕರಿಗೆ ಶುಭ ಕೋರಿದರು.
ಗ್ರಾಮಗಳಲ್ಲಿನ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ 27 ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ಗೌರವಪೂರ್ವಕವಾಗಿ ನಮಿಸಿ ಸೀರೆಗಳನ್ನು ವಿತರಿಸಿದರು. ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ವಿಕಸನಕ್ಕೆ ಶ್ರಮಿಸುತ್ತಿರುವ ಶಿಕ್ಷಕ ವೃಂದದವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದರೊಂದಿಗೆ ಗೌರವಪೂರ್ವಕವಾಗಿ ಸೀರೆಗಳನ್ನು ವಿತರಿಸುತ್ತಿರುವುದಾಗಿ ಸಚಿವ ಬಿ.ಶ್ರೀರಾಮುಲು ಅವರ ಆಪ್ತರು ಹೇಳಿದರು.
—–
ಮೀಟರ್ ಅಳವಡಿಕೆಗೆ ಹುನ್ನಾರ;ಸೆ.26ರಂದು ಪ್ರತಿಭಟನೆಗೆ ಸಿದ್ಧತೆ -ಕೃಷ್ಣಮೂರ್ತಿ ಸಂಗನಕಲ್ಲು
BP News ಬಳ್ಳಾರಿ,ಸೆ.23-ರಾಜ್ಯದ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲು ಹುನ್ನಾರ ನಡೆಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿರುವ ರೈತರು ಮೀಟರ್ ಅಳವಡಿಸಲು ಬರಲಿ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದು, ಇದೇ ಸೆ.26 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಈ ಕುರಿತು ಉಗ್ರವಾದ ಹೋರಾಟ ಹಮ್ಮಿಕೊಳ್ಳುತ್ತಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಸಿದೆ.
ಪತ್ರಿಕಾ ಭವನದಲ್ಲಿ ಈ ಕುರಿತು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಸಂಗನಕಲ್ಲು ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ದೂರಿದರು.
—–
ಎಐಡಿಎಸ್‍ಓ ನಿಂದ ಸಾರ್ವಜನಿಕ ಶಿಕ್ಷಣ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಅಭಿಯಾನ
BP News ಬಳ್ಳಾರಿ,ಸೆ.23-ಸಾರ್ವಜನಿಕ ಶಿಕ್ಷಣ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಎನ್ನುವ ಆಂದೋಲನ ನಡೆಸಿ ದೇಶಾದ್ಯಂತ ಒಂದು ಕೋಟಿ ಸಹಿ ಸಂಗ್ರಹ ಅಭಿಯಾ£ ಕೈಗೊಂಡಿದ್ದು ಇದರÀ ಸಮಾರೋಪ ಸಮಾರಂಭ ಜರುಗಿದ್ದು, ಬಳಿಕ ಪ್ರಧಾನ ಮಂತ್ರಿಗಳಿಗೆ ಸಿಎಂ ಮೂಲಕ ಸಹಿಗಳನ್ನು ತಲುಪಿಸಲಾಗುವುದು ಎಂದು ಎಐಡಿಎಸ್‍ಓನ ಕಂಬಳಿ ಮಂಜುನಾಥ ಅವರು ಹೇಳಿದ್ದಾರೆ.
ಇದೇ ಸೆ.28ರಂದು ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮ ದಿನದಂದು ರಾಜ್ಯ ಮಟ್ಟದ ವಿದ್ಯಾರ್ಥಿ ಸಮಾವೇಶ ನಡೆಯಲಿದೆ ಎಂದರು.
—–