BP NEWS: ಬಳ್ಳಾರಿ: ಸೆಪ್ಟೆಂಬರ್.23: ಬಳ್ಳಾರಿ ಜಿಲ್ಲೆಯಲ್ಲಿ 07 ವಸತಿಯುತ ಶಿಕ್ಷಣ ಒದಗಿಸುವ ಸಂಸ್ಥೆಗಳಲ್ಲಿ ಪಾಲನೆ ಮತ್ತು ರಕ್ಷಣೆಗೆ ಒಳಪಡುವ ಮಕ್ಕಳು ಇಲ್ಲದಿರುವುದರಿಂದ ಅಂತಹ ಸಂಸ್ಥೆಗಳನ್ನು ಜೆ.ಜೆ.ಆಕ್ಟ್ ಕಾಯ್ದೆಯಿಂದ ಕೈ ಬಿಡುವಂತೆ ಆದೇಶಿಸಿ, ಸಂಸ್ಥೆಗಳನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ರದ್ದುಗೊಳಿಸಲಾದ ಸಂಸ್ಥೆಗಳು: ಓಪಿಡಿ ರಸ್ತೆಯ ಮಾತಾ ಮೇರಿ ಮಹಿಳಾ ಪ್ರಗತಿ ಧಾಮ, ಬಂಡಿಹಟ್ಟಿ ರಸ್ತೆಯ ಎಕ್ಸ್ ಸರ್ವಿಸ್ ಮ್ಯಾನ್ ಕಾಲೋನಿಯ ಬೆಳಗಲ್ಲು ಕ್ರಾಸ್‍ನ ನೋಬಲ್ ರೆಸಿಡೆನ್ಸಿಯಲ್ ಹಾಸ್ಟೆಲ್ ಫಾರ್ ಬಾಯ್ಸ್, ಸೋಮಶೇಖರ್ ನಗರದ ಲಕ್ಷ್ಮಿನಗರ ಕ್ಯಾಂಪ್‍ನ ಹೋಲಿ ಕ್ರಾಸ್ ಹಾಸ್ಟೆಲ್, ಸೆಂಟ್ ಮೇರ್ಸಿ ಆರ್‍ಫಾನೇಜ್ ಫಾರ್ ಗಲ್ರ್ಸ್ ಗೂಡ್ ಶೆಫಾರ್ಡ್ ಕಾನ್ವೆಂಟ್, ಕೌಲ್ ಬಜಾರ್‍ನ ಸೆಂಟ್ ಜೋಸೆಫ್ ಪ್ರೇಮಾಶ್ರಾಮ, ಕೌಲ್ ಬಜಾರ್‍ನ ಸೆಂಟ್ ಮಾರ್‍ಟಿನ್ಸ್ ಮತ್ತು ಕಾನ್ವೆಂಟ್‍ನ ನಿರ್ಮಲಾ ಶಿಶುಭವನದ ಮದೆರ್ ಥೆರಾಸಾ ಹೋಂ ಈ ಮಕ್ಕಳ ಪಾಲನಾ ಸಂಸ್ಥೆಗಳನ್ನು ರದ್ದುಪಡಿಸಲಾಗಿದೆ.
ಸಂಸ್ಥೆಗಳಲ್ಲಿ ಕೇವಲ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಮಾತ್ರ ದಾಖಲಾಗಿದ್ದು, ಸಂಸ್ಥೆಯಲ್ಲಿ ಪಾಲನೆ ಮತ್ತು ರಕ್ಷಣೆಗೆ ಒಳಪಡುವ ಮಕ್ಕಳ ಇಲ್ಲದಿರುವುದರಿಂದ ಸಂಸ್ಥೆಯನ್ನು ಜೆಜೆ ಆಕ್ಟ್ ಕಾಯ್ದೆಯಿಂದ ರದ್ದುಗೊಳಿಸಲಾಗಿದೆ.
ಸಾರ್ವಜನಿಕರು ಸದರಿ ಸಂಸ್ಥೆಗಳಿಗೆ ಪಾಲನೆ ಮತ್ತು ರಕ್ಷಣೆಗೆ ಒಳಪಡುವ ಮಕ್ಕಳನ್ನು ಸೇರಿಸಬಾರದು ಎಂದು ಅವರು ತಿಳಿಸಿದ್ದಾರೆ.