BP NEWS: ಬಳ್ಳಾರಿ: ಸಪ್ಟೆಂಬರ್.21: ಇಂದು ಕರ್ನಾಟಕ ಪಬ್ಲಿಕ್ ಶಾಲೆ, ಮೋಕದಲ್ಲಿ ಹಿಂದಿ ದಿವಸ್ ಅನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಚಾರ್ಯರಾದ ಭಾರತಿ ಜೆ ಅವರು ವಹಿಸಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ರೋಸ್ಲಿನ್ ಮೇರಿ ಅವರು ಹಾಗೂ ಬಳ್ಳಾರಿಯ ಕಪ್ಗಲ್ ರೋಡ್ ಶಾಲೆಯ ಹಿಂದಿ ಶಿಕ್ಷಕಿ ಹಾಗೆ ತಾಲೂಕಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಉಷಾರಾಣಿ ಅವರು ಆಗಮಿಸಿ ಶೋಭೆ ತಂದರು.
ಅತಿಥಿಗಳು ಕಾರ್ಯಕ್ರಮವನ್ನು ಸಸಿಗೆ ನೀರರೆಯುವುದರ ಮೂಲಕ ಉದ್ಘಾಟಿಸಿದರು. ಶಾಲೆಯ ವಿದ್ಯಾರ್ಥಿನಿಯರಾದ ಅಪೂರ್ವ, ನಯನ ಅವರ ಪ್ರಾರ್ಥನಾ ನೃತ್ಯದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಗಾಯತ್ರಿ ಮತ್ತು ತಂಡದವರು ಹಿಂದಿ ಗೀತೆ ಪ್ರಸ್ತುತ ಪಡಿಸಿದರು.
ಶಾಲೆಯ ವಿದ್ಯಾರ್ಥಿನಿಯರಾದ ಮುಮ್ತಾಜ್ ಮತ್ತು ತಂಡದವರು ಡೊಳ್ಳು ಕುಣಿತ ನಡೆಸಿಕೊಟ್ಟದ್ದು ವಿಶೇಷ. ಇಂದಿನ ಈ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಒಂದು ವಾರದಿಂದ ನಡೆಸಿಕೊಂಡು ಬಂದಿದ್ದ ವಿವಿಧ ರೀತಿಯ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
2021-22ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಶ್ರಾವಣಿ, ತರುಣ್, ರಾಘವೇಂದ್ರ ಹಾಗೂ ಶಹನಾಜ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶಾಲೆಯ ಹಿಂದಿ ಶಿಕ್ಷಕಿಯರಾದ ಶೇಖ್ ನಫೀಸಾ ಬಾನು ಹಾಗೂ ವಾಹಿದಾ ಬೇಗಂ ಅವರು ವಹಿಸಿಕೊಂಡು, ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಷಾರಾಣಿ ಅವರು ಹಿಂದಿ ಭಾಷೆ ಮತ್ತು ಹಿಂದಿ ದಿವಸ್ ಬಗ್ಗೆ ಮಕ್ಕಳಿಗೆ ವಿವರವಾಗಿ ತಿಳಿಸಿದರು.
ಮಕ್ಕಳೆ ನಡೆಸಿಕೊಟ್ಟ ನಿರೂಪಣೆ(ಹರ್ಷದ್), ಸ್ವಾಗತ (ಮನೋಜ್), ವಂದನಾರ್ಪಣೆ(ಶಶಿಕಲಾ), ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟಿತು.
ಕರ್ನಾಟಕ ಪಬ್ಲಿಕ್ ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದು ಕೊಟ್ಟದ್ದು ಇನ್ನೂ ವಿಶೇಷ.
ಪ್ರತಿ ವರ್ಷ ನಾವು ಇದೇ ರೀತಿಯಾಗಿ ನಮ್ಮ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ ಮಾಡಿ, ಮಕ್ಕಳಿಗೆ ಸನ್ಮಾನಿಸಿ ಅವರಿಗೆ ಪ್ರೋತ್ಸಾಹಿಸುವುದು ಶಿಕ್ಷಕರಾದ ನಮ್ಮ ಆದ್ಯ ಕರ್ತವ್ಯ ಎಂದು ಶೇಖ್ ನಫೀಸಾ ಬಾನು ಅವರು ಬಿಪಿ ನ್ಯೂಸ್ ಗೆ ತಿಳಿಸಿದರು.