ಮೋಹನ್ ಕುಮಾರ್ ಗೆ ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ರಿಂದ ಸನ್ಮಾನ
BP News ನವದೆಹಲಿ: ಸೆ:21-ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಕಾರಣಗಳಿಗಾಗಿ ವಿನೂತನ ಮ್ಯಾರಥಾನ್ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪ ನವರ ಸಾಮಾಜಿಕ ಕಾಳಜಿ ಮತ್ತು ಕ್ರೀಡಾ ಉತ್ಸಾಹವನ್ನ ಪರಿಗಣಿಸಿ ಸುಪ್ರೀಂ ಕೋರ್ಟ್ ನ ಭಾರತ ಸರ್ಕಾರದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾರವರಾದ ಕೆ.ಎಂ.ನಟರಾಜ್ ರವರು ಸನ್ಮಾನಿಸಿದರು.
——-
ಹೆಚ್ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 75ನೇ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮ
BP News ಬಳ್ಳಾರಿ,ಸೆ.21-ಸÀರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಚ್ ಹೊಸಹಳ್ಳಿ ಶಾಲೆಯಲ್ಲಿ 75ನೇ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಚರಿಸಲಾಯಿತು.
ಗ್ರಾಮ ಪಂಚಾಯತಿಯ ಸದಸ್ಯರಾದ ಮರಿಸ್ವಾಮಿಯವರು ಮಾತನಾಡಿ, ಇತ್ತೀಚಿಗೆ ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಶಾಲಾ ಸ್ವಚ್ಛತೆ ಹಾಗೂ ಬಿಸಿ ಊಟದ ಬಗ್ಗೆ ಸುಳ್ಳು ವರದಿ ಪ್ರಕಟ ಮಾಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ ಆಗಿದೆ. ಈ ಅಪಪ್ರಚಾರದ ಸುದ್ದಿಯಿಂದ ಯಾವುದೇ ಪೆÇೀಷಕರು ಆತಂಕಗೊಳ್ಳದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ತಿಳಿ ಹೇಳಿದರು.
—–
ಎಸ್‍ಜಿಟಿ ಕಾಲೇಜಿನಲ್ಲಿ ಮೋದಿ ಅವರ ಜೀವನ ಚಿತ್ರ ಬಿಂಬಿಸುವ ವಿಡಿಯೋ ಪ್ರದರ್ಶನ
BP News ಬಳ್ಳಾರಿ,ಸೆ.21-ಇಡೀ ಜಗತ್ತಿನಾದ್ಯಂತ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇನಿಯಾ ಹೇಗೆ ಸೃಷ್ಟಿಯಾಗಿದೆ ಎನ್ನುವುದರ ಕುರಿತು ಇಂದು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶ್ರೀಗುರು ತಿಪ್ಪೇರುದ್ರ ಸ್ವಾಮಿ ಕಾಲೇಜಿನಲ್ಲಿ ವಿಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯುದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾ ಉಪಾಧ್ಯಕ್ಷರಾದ ವೀರಶೇಖರರೆಡ್ಡಿ, ನಗರ ಘಟಕದ ಅಧ್ಯಕ್ಷರಾದ ಕೆ.ವೆಂಕಟೇಶ್ವರ, ಮಹಾನಗರ ಪಾಲಿಕೆ ಸದಸ್ಯರಾದ ಡಾ.ಕೆಎಸ್ ಅಶೋಕ್, ಹನುಮಂತಪ್ಪ ಕೆ., ಇಬ್ರಾಹಿಂ ಬಾಬು, ಪದಾಧಿಕಾರಿಗಳಾದ ಜ್ಯೋತಿ ಪ್ರಕಾಶ್, ರಾಮಾಂಜಿನಿ ಕೆ., ಸುಮಾರೆಡ್ಡಿ, ಸುನಿಲ್, ಓಂಕಾರ್ ಇನ್ನಿತರರು ಇದ್ದರು.
——
ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಗೆ ಆಗ್ರಹಿಸಿ ಎಸ್‍ಸಿ, ಎಸ್‍ಟಿ ಸಮುದಾಯದಿಂದ ಪ್ರತಿಭಟನಾ ಧರಣಿ
BP News ಬಳ್ಳಾರಿ,ಸೆ.21-ಎಸ್.ಸಿ., ಎಸ್.ಟಿ., ಸಮುದಾಯದ ಪುರೋಭಿವೃದ್ಧಿಗಾಗಿ ಮೀಸಲಾತಿ ಹೆಚ್ಚಿಸಲು ರಾಜ್ಯ ಉಚ್ಛ ನ್ಯಾಯಾಲಯ 2017ರಲ್ಲಿಯೇ ನಿರ್ದೇಶನ ನೀಡಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿರುವುದು ವಿಷಾದದ ಸಂಗತಿ ಎಂದು ಆಕ್ರೋಶಗೊಂಡಿರುವ ಎಸ್‍ಸಿ, ಎಸ್‍ಟಿ ಸಮುದಾಯದ ಮುಖಂಡರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ದಲಿತ ನಾಯಕರಾದ ಎ.ಮಾನಯ್ಯ, ಎನ್.ಮಲ್ಲಯ್ಯ, ಜಿ.ರುದ್ರಪ್ಪ, ಎನ್.ಸತ್ಯನಾರಾಯಣ ಸೇರಿದಂತೆ ಹಲವು ಮುಖಂಡರು ಇದ್ದು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
——
ವಿಧಾನಸೌಧ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಸ್ಥಾಪಿಸಲು ಮನವಿ
BP News ಬಳ್ಳಾರಿ,ಸೆ.21-ಕರ್ನಾಟಕದ ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ವಿಶ್ವಗುರು, ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಅಂಗಾಯತ ಮಹಾಜನ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪಾಟೀಲ್ ಮತ್ತು ಉಪಾಧ್ಯಕ್ಷ ದೊಡ್ಡ ಬಸವನಗೌಡ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರನ್ನು ಭೇಟಿಯಾಗಿ, ಪ್ರತಿಮೆ ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಮನವರಿಕೆ ಮಾಡಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ವಿಶ್ವ ಲಿಂಗಾಯತ್ ಮಹಾಜನ ಪರಿಷತ್ ನ ಪದಾಧಿಕಾರಿಗಳು ಇದ್ದರು.
——–
ಭಾರತ್ ಜೋಡೋ ಪೂರ್ವಭಾವಿ ಸಭೆ
BP News ಬಳ್ಳಾರಿ,ಸೆ.21-ಭಾರತ್ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ, ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ ಎಸ್ ಮಹಮ್ಮದ್ ರಫೀಕ್ ಪೂರ್ವಭಾವಿ ಸಭೆ ನಡೆಸಿದರು.
ಈ ಸಭೆಯಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವ ಸಿದ್ಧತೆಗಳ ಬಗ್ಗೆ, ಸೂಕ್ತ ವ್ಯವಸ್ಥೆಗಳ ಬಗ್ಗೆ, ಉಸ್ತುವಾರಿ ಸಮಿತಿಗಳನ್ನು ರಚಿಸುವ ಬಗ್ಗೆ, ಕೂಲಂಕುಶವಾಗಿ ಚರ್ಚಿಸಲಾಯಿತು.
——-
ಹೊಸ ತಂತ್ರಜ್ಞಾನ ನೀತಿಯಿಂದ ಕೂಲಿ ಕಾರ್ಮಿಕರಿಗೆ ಆತಂಕ-ಪ್ರತಿಭಟನೆ
BP News ಬಳ್ಳಾರಿ,ಸೆ.21- ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ ಸ್ವಾಭಿಮಾನ ಹಾಗೂ ಘನತೆಯಿಂದ ಬದುಕುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸರಕಾರದ ಹೊಸ ತಂತ್ರಜ್ಞಾನ ಹಾಗೂ ನೀತಿಗಳಿಂದ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಅನ್ನಪೂರ್ಣ, ಎನ್.ಗಂಗಮ್ಮ, ಒಂಕಾರಮ್ಮ, ರೇಖಾ, ಲಕ್ಷ್ಮಿ ಇನ್ನಿತರರ ನೇತೃತ್ವದ ಪದಾಧಿಕಾರಿಗಳು ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರವೊಂದನ್ನು ಡಿಸಿ ಮೂಲಕ ಸಲ್ಲಿಸಿದರು.
—–