BP NEWS: ಬಳ್ಳಾರಿ: ಸಪ್ಟೆಂಬರ್.19: 18/9/2022 ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ “ಭೂಮಿ ಉಳಿಸಿ, ಜೀವ ಸಂಕುಲ ಹಾಗೂ ಪರಿಸರ ಉಳಿಸಿ” ಕಾರ್ಯಕ್ರಮ ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಅಭೂತಪೂರ್ವವಾಗಿ ನೆರವೇರಿತು. ಗದಗಿನ ವಾಸನ ಗ್ರಾಮನಿಸರ್ಗ ಚಿಕಿತ್ಸಕರು ಹಾಗೂ ಪಾರಂಪರಿಕ ವೈದ್ಯರು ಡಾ.ಹನುಮಂತ ಮಳಲಿಯವರು ಗೋವಿನ ಬಗ್ಗೆ ಮತ್ತು ಸಾವಯವ ಕೃಷಿಯ ಬಗ್ಗೆ ಅತ್ಯುತ್ತಮ ಮಾಹಿತಿ ಕೊಟ್ಟರು. ಭೂಮಾತೆಯ ಶ್ರೇಷ್ಠತೆಯ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ನಿಷ್ಠಿ ರುದ್ರಪ್ಪನವರು ಮನೆಯಲ್ಲೇ ಸಿಗುವ ಅರಿಷಿಣ, ಮೆಣಸು ಮುಂತಾದ ಪದಾರ್ಥಗಳಲ್ಲಿರುವ ಔಷಧಿಯ ಗುಣಗಳ ಬಗ್ಗೆ ಮಾಹಿತಿ ಕೊಟ್ಟು ಮನೆವೈದ್ಯರಾಗುವಂತೆ ಕರೆ ಕೊಟ್ಟರು. ಶ್ರೀ ಕೊಟ್ಟೂರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಕಾತ್ಯಾಯಿನಿ ಮರಿದೇವಯ್ಯರವರು ಕಸದ ವಿಲೇವಾರಿ ಹಾಗೂ ಪ್ಲಾಸ್ಟಿಕ್‌ನಿಂದಾಗುವ ಹಾನಿ ಕುರಿತು ಸವಿವರವಾಗಿ ತಿಳಿಸಿ ಸ್ವಚ್ಛತೆಗಾಗಿ ಕರೆ ನೀಡಿದರು.
ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ ಟ್ರಸ್ಟ್ ನ ಅಧ್ಯಕ್ಷರಾದ ಎಸ್.ಎ. ನಿಖಿತಾರವರು ಮನೆಯ ಹತ್ತಿರ ಬಂದ ಜಾನುವಾರುಗಳಿಗೆ ಎಂತಹ ಆಹಾರ ಕೊಡಬೇಕು, ಯಾವ ಪ್ರಾಣಿಗಳೇ ಇರಲಿ ಅವಕ್ಕೇನಾದರೂ ಆರೋಗ್ಯ ಸಮಸ್ಯೆ ಅಥವಾ ಅಪಘಾತಗಳಾದಲ್ಲಿ ನೆರವಿಗಾಗಿ ತಮ್ಮ ಸಂಸ್ಥೆಗಳು ಸದಾ ಸಿದ್ಧರೆಂದು ಹೇಳಿದರು. ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಗೋವಿನ ಹಾಡು ಅದ್ಭುತ ನೃತ್ಯ ಪ್ರದರ್ಶನ ನೀಡಿದರು. ಶ್ರೀನಿಧಿ ಲಲಿತ ಕಲಾ ಸಂಸ್ಥೆಯ ಡಾ. ಚಾರುಲತಾ ಮತ್ತು ಅವರ ವಿದ್ಯಾರ್ಥಿಗಳು “ಗೋಮಾತಾ ಪ್ಲಾಸ್ಟಿಕ್ ಭೂತ” ಎನ್ನುವ ನೃತ್ಯ ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮದ ಉದ್ದೇಶ ಪ್ಲಾಸ್ಟಿಕ್ ನಿರ್ಮೂಲನೆ, ಕಸದ ಸರಿಯಾದ ವಿಲೇವಾರಿ, ಪ್ಲಾಸ್ಟಿಕ್ ಮತ್ತು ಕಸದಿಂದ ಮೋರಿಗಳು ಕಟ್ಟಿ ಕುಡಿಯುವ ನೀರಲ್ಲಿ ಮೋರಿ ನೀರು ಮಿಶ್ರವಾಗುವ ಬಗ್ಗೆ ಆತಂಕ, ಹಾಗೂ ಸಾರ್ವಜನಿಕರು ಸ್ವಚ್ಛತೆಗಾಗಿ ಕೈ ಜೋಡಿಸುವ ಕುರಿತು ಕರೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ರಾಮಕೃಷ್ಣ ಆಶ್ರಮದ ಬ್ರಹ್ಮಚಾರಿ ಗುರುಗಳಾದ ಶ್ರೀಯುತ ಕಿರಣ್‌ರವರು ಇಂತಹ ಕಾರ್ಯಕ್ರಮಗಳು ಇನ್ನಷ್ಟು ಸಾಗಲೆಂದು ಆಶೀರ್ವದಿಸಿ, ತಮ್ಮ ನೆರವು ಸದಾ ಇರುವುದೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಅತ್ಯುತ್ತಮ ಮುಖ್ಯ ಶಿಕ್ಷಕಿ ಹಾಗೂ ಅತ್ಯುತ್ತಮ ಶಾಲೆ ಎಂದು ರಾಜ್ಯ ಪ್ರಶಸ್ತಿ ಪಡೆದ ಮುರಾರ್ಜಿ ವಸತಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಸೂಯ ಹಾಗೂ ಸ್ಮಿಯಾಕ್ ಟ್ರಸ್ಟ್ ನ ಸಹ ಕಾರ್ಯದರ್ಶಿ ಸುಧೀಂದ್ರ ನಾಡಿಗೇರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೊತೆಗೆ ನಮ್ಮ ಇಂತಹ ಸಮಾಜಕ್ಕೆ ಒಳಿತು ಉಂಟುಮಾಡುವ ಸೇವಾ ಕಾರ್ಯಕ್ರಮಗಳಿಗೆ ತಮ್ಮ ನೆರವು ಸದಾ ಇರುವುದೆಂದು ಹೇಳಿದರು. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಸೋದರ ಶ್ರೀಯುತ ಬಸವರಾಜ ಬಿಸಿಲಳ್ಳಿಯವರಿಗೆ ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋದರಿ ನಿವೇದಿತಾ ಪ್ರತಿಷ್ಠಾನದ ಚಂದ್ರಿಕ ಚಂದ್ರಕಾಂತ್ ವಹಿಸಿದ್ದರು. ಸೋದರಿ ಕವಿತಾ ಸಂಡೂರು ಕಾರ್ಯಕ್ರಮ ನಿರ್ವಹಿಸಿದರು.
ಶ್ರೀಮತಿ ಮುಕ್ತಾ ದೀಕ್ಷಿತ್ ಸ್ವಾಗತಿಸಿದರು. ಪ್ರತಿಷ್ಠಾನದ ಸಂಚಾಲಕರು ಸುನೀತಾ ವೆಂಕಟೇಶ್ ಹಾಗೂ ಸೋದರಿಯರಾದ ಕವಿತಾ ವಾದಿರಾಜ್, ಪಾರ್ವತಿ ಬಾವಿಕಟ್ಟಿ, ಶ್ರೀದೇವಿ, ಪುಷ್ಪಲತಾ ಚಂದ್ರಶೇಖರ್, ಜಯಶ್ರೀ, ವಸಂತಾ, ಸುಗುಣ, ಸುಮಾ, ಚೇತನಾ ಕಾರ್ಯಕ್ರಮದ ಭಾಗವಹಿಸಿದ್ದರು. ಶಿಶು ಸಾಹಿತಿ ಸರೋಜಾ ಬ್ಯಾತನಾಳ್ ವಂದನಾರ್ಪಣೆ ಮಾಡಿದರು.