ಶೃಂಗೇರಿ ಶಂಕರಮಠದಲ್ಲಿ ಸೆ.25 ರಿಂದ ಶ್ರೀ ಶಾರದಾ ಶರನ್ನವರಾತ್ರಿ ಉತ್ಸವ
BP News ಬಳ್ಳಾರಿ,ಸೆ.19-ವಿದ್ಯೆ, ಬುದ್ಧಿ, ಸಂಗೀತ, ಸಾಹಿತ್ಯ ಸೇರಿದಂತೆ ಸಾವಿರ ಕಲೆಗಳ ಆಗರವಾಗಿರುವ ಇಲ್ಲಿನ ಸಂಗನಕಲ್ಲು ರಸ್ತೆಯ ಶೃಂಗೇರಿ ಶಂಕರಮಠದಲ್ಲಿ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 5ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಉತ್ಸವಗಳು ಜರುಗಲಿವೆ.
ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಸಂಯುಕ್ತಾಶ್ರಯದಲ್ಲಿ ಶ್ರೀ ಶಾರದಾ ಶರನ್ನವರಾತ್ರಿ ಉತ್ಸವದ ನಿಮಿತ್ತ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.
—–
ದೇವರ ಸನ್ನಿಧಾನ ಪಾವಿತ್ರ್ಯಗೊಳಿಸುತ್ತಿರುವ ಆಂಧ್ರಪ್ರದೇಶದ ಜನರು
BP News ಕರ್ನೂಲು,ಸೆ.19-ದೈವೀಕ ವಿಷಯದಲ್ಲಿ ಕರ್ನಾಟಕದ ಜನರು ಕೊಂಚ ನಾಸ್ತಿಕ ಭಾವದವರು ಎನ್ನುವುದಕ್ಕೆ ಅನೇಕ ಜ್ವಲಂತ ಉದಾಹರಣೆಗಳು ನಮಗೆ ಸಿಗುತ್ತವೆ. ಪುರಾಣಪ್ರಸಿದ್ಧ ಹಾಗೂ ಐತಿಹಾಸಿಕ ದೇಗುಲಗಳ ಬಳಿಯೇ ಗಣಿಗಾರಿಕೆ, ಕಲ್ಲುಕ್ವಾರಿ ನಡೆಸಿ ವಿಕೃತಿ ಮೆರೆಯುವುದರಲ್ಲಿ ಕನ್ನಡಿಗರು ನಿಸ್ಸೀಮರು. ಆದರೆ ದೈವ ಭಕ್ತಿ, ಪಾವಿತ್ರ್ಯತೆ ಮತ್ತು ಪರಿಸರ ಕಾಪಾಡುವಲ್ಲಿ ಆಂಧ್ರಪ್ರದೇಶದ ಜನರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದೇವರ ಸನ್ನಿಧಾನವಿದ್ದಲ್ಲಿ ಎಂದಿಗೂ ಅವರು ಗಣಿಗಾರಿಕೆ, ಕಲ್ಲು ಕ್ವಾರಿ ನಡೆಸುವ ಮೂಲಕ ವಿಕ್ಷಿಪ್ತ ಮನೋಭಾವನೆ ತೋರುವುದಿಲ್ಲ. ಪ್ರಾಕೃತಿಕ ಪರಿಸರದಲ್ಲಿರುವ ದೇವರ ಸನ್ನಿಧಾನಗಳನ್ನು ಪಾವಿತ್ರ್ಯಗೊಳಿಸುವ ಅವರ ಭಕ್ತಿ ಪರಂಪರೆ ನಿಜಕ್ಕೂ ಇತರರಿಗೆ ಮಾದರಿಯಾಗಿದೆ.
—–
ಹಾವು ಕಚ್ಚಿ ಶಂಕರಬಂಡೆ ಕಟ್ಟೆಬಸಪ್ಪ ಸಾವು
BP News ಬಳ್ಳಾರಿ,ಸೆ.19-ತಾಲೂಕಿನ ಶಂಕರಬಂಡೆ ಗ್ರಾಮದ ಯುವಕ ಕಟ್ಟೆ ಬಸಪ್ಪ(26) ಹಾವು ಕಡಿತದಿಂದ ಮೃತಪಟ್ಟ ಘಟನೆ ನಡೆದಿದೆ.
ರಮೇಶ್ ಬಾರಿಕೇರ ಅವರ ಪುತ್ರನಾಗಿರುವ ಕಟ್ಟೆಬಸಪ್ಪ ಗದ್ದೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ತೆರಳಿದ್ದ ವೇಳೆ ಕೊಂಡ ಪಂಜಿರಿ ಎಂಬ ವಿಷಭರಿತ ಹಾವು ಕಚ್ಚಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ವಿಷವೇರಿ ಕಟ್ಟೆ ಬಸಪ್ಪ ರಾತ್ರಿ ಮೃತಪಟ್ಟಿದ್ದಾನೆ. ಇದರಿಂದ ಮೃತ ಕಟ್ಟೆಬಸಪ್ಪನ ಪೋಷಕರು, ಸಹೋದರರು ಮತ್ತು ಕುಟುಂಬ ವರ್ಗ ದುಃಖದ ಮಡುವಿನಲ್ಲಿ ಮುಳುಗಿದೆ.
—–
ಸಚಿವ ಬಿ.ಶ್ರೀರಾಮುಲು ಅವರಿಂದ ಶಿಕ್ಷಕಿಯರಿಗೆ ಸೀರೆಗಳ ವಿತರಣೆ
BP News ಬಳ್ಳಾರಿ,ಸೆ.19-ಇತ್ತೀಚೆಗೆ(ಸೆ.5) ಗುರುಭವನದಲ್ಲಿ ನಡೆದ ಶಿಕ್ಷಕದ ದಿನಾಚರಣೆ ವೇಳೆ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಶ್ರೀರಾಮುಲು ಅವರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕಿಯರಿಗೆ ಸೀರೆಗಳನ್ನು ವಿತರಿಸುವುದಾಗಿ ಹೇಳಿದ್ದರ ಹಿನ್ನೆಲೆಯಲ್ಲಿ ಸಚಿವರ ಆಪ್ತರೊಂದಿಗೆ ಮಾಜಿ ಸಂಸದೆ ಜೆ.ಶಾಂತಾ ಅವರು ಸೀರೆಗಳನ್ನು ವಿತರಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ಓಬಳೇಶ್, ಶ್ರೀರಾಮುಲು ಸಚಿವರ ಆಪ್ತರಾದ ರಾಮು ಸೇರಿದಂತೆ ಹಲವಾರು ಧುರೀಣರು ಇದ್ದರು.
——
ಸಿದ್ಧಾಪುರ ಬಳಿ ನೈಸರ್ಗಿಕ ವಾಟರ್ ಫಾಲ್ಸ್
BP News ಬಳ್ಳಾರಿ,ಸೆ.19-ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಡಿ.ಹಿರೇಹಾಳ ಮಂಡಲಂನ ವ್ಯಾಪ್ತಿಗೊಳಪಡುವ ಗವಿಸಿದ್ದೇಶ್ವರ ದೇವಸ್ಥಾನ ವ್ಯಾಪ್ತಿಯಲ್ಲಿ ವಾಟರ್ ಫಾಲ್ಸ್ ಇದ್ದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಫಾಲ್ಸ್‍ನಲ್ಲಿ ಮಿಂದೇಳುತ್ತಿದ್ಧಾರೆ.
ಬಸವಾಪುರ, ಬಸವಾಪುರ ತಾಂಡಾ, ಸಿದ್ಧಾಪುರ, ಸಿದ್ಧಾಪುರ ತಾಂಡಾ, ಮಲಪನಗುಡಿ ಹಳ್ಳಿಗರ ಜನರು ಈ ಸ್ಥಳವನ್ನು ಕನ್ನೇರಮ್ಮ ಎಂದು ಕರೆಯುತ್ತಾರೆ. ಇಲ್ಲಿ ಪುಟ್ಟದಾದ ಕನ್ನೇರಮ್ಮನ ದೇವಸ್ಥಾನ ಇದೆ. ಮಳೆ ಬಾರದೇ ಹೋದರೆ ಈ ಭಾಗದ ಜನರು ಗವಿಸಿದ್ಧೇಶ್ವರ ಸ್ವಾಮಿ ರ್ದಶನ ಪಡೆದು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಇಲ್ಲಿ ಮಳೆ ಕಾಲ ಕಾಲಕ್ಕೆ ಬರುತ್ತದೆ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ಸ್ಥಳೀಯರು.
——
ಎಂಎಸ್ ಪೈಪ್‍ಲೈನ್ ಕಾಮಗಾರಿ ವೀಕ್ಷಿಸಿದ ಶಾಸಕರು
BP News ಬಳ್ಳಾರಿ,ಸೆ.19-ಮಹಾನಗರ ಪಾಲಿಕೆಯ 21ನೇ ವಾರ್ಡ್ ವ್ಯಾಪ್ತಿಯಲ್ಲಿ ಎಂಎಸ್ ಪೈಪ್‍ಲೈನ್ ಕಾಮಗಾರಿ ಭರದಿಂದ ಸಾಗಿದ್ದು ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಪರಿಶೀಲನೆ ನಡೆಸಿದರು.
ಮಾಜಿ ಸಂಸದ ಎನ್ ವೈ ಹನುಮಂತಪ್ಪ ಅವರ ನಿವಾಸದಿಂದ ದುರುಗಮ್ಮ ಗುಡಿಯವರೆಗೆ ಈ ಕಾಮಗಾರಿಯನ್ನು ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ, ಮಹಾನಗರ ಪಾಲಿಕೆ ಅಯುಕ್ತರಾದ ರುದ್ರೇಶ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಭಾರತೈ ಜನತಾ ಪಾರ್ಟಿಯ ಮುಖಂಡರಾದ ಎಸ್.ಮಲ್ಲನಗೌಡ, ಪಾಲಿಕೆಯ ಅಭಿಯಂತರರಾದ ಖಾಸಾ ಹುಸೇನ್ ಇನ್ನಿತರರು ಇದ್ದರು.
—–