ಪೌಷ್ಟಿಕ ಆಹಾರ ಮಾಸಾಚರಣೆ

0
236

BP NEWS: ಬಳ್ಳಾರಿ: ಸಪ್ಟೆಂಬರ್.17:  ಗ್ರಾಮೀಣ ತಾಯಂದಿರಿಗೆ ಆರೋಗ್ಯ ಕುರಿತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಮ್ಮಾರೆಡ್ಡಿಪುರ
ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ರಾಮಪಂಚಾಯತಿ ಅಧ್ಯಕ್ಷೆ ಸರಸ್ವತಮ್ಮ ರವರು ಕಾರ್ಯಕ್ರಮ ಉದ್ಘಾಟಿಸಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಉಪನ್ಯಾಸಕರಾದ ಡಾ. ಮಂಜುನಾಥ ಟಿ ಎ ರವರು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ” ನಮ್ಮ ಹಳ್ಳಿ ನಮ್ಮ ಜವಾಬ್ದಾರಿ, ಗ್ರಾಮದ ಪ್ರತಿಯೊಬ್ಬ ಸದಸ್ಯರೂ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಆಗಲೇ ಹಳ್ಳಿಯ ಆರೋಗ್ಯ ಹಾಗೂ ಅಭಿವೃದ್ಧಿ ಸಾಧ್ಯ ಎಂದು ನೆರೆದಿದ್ದ ತಾಯಂದಿರು ಮತ್ತು ಹಿರಿಯರನ್ನು ಕುರಿತು ಹೇಳಿದರು.

ರಾಜ್ಯ ಆರೋಗ್ಯ ಸಂಸ್ಥೆಯ ಡಿಪ್ಲೋಮ ಕೋರ್ಸ್ ನ ಉಪನ್ಯಾಸಕ ತನ್ವಿರ್ ಅಹಮದ್ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳಾಡಿದರು.

ತಾಯಂದಿರಿಗೆ ಪೌಷ್ಟಿಕ ಆಹಾರದ ಮಹತ್ವ, ಗರ್ಭಿಣಿ, ಬಾಣಂತಿ ಅವಧಿಯಲ್ಲಿ, ವಿಶೇಷವಾಗಿ ಮೊಲೆ ಹಾಲಿನ ಪ್ರಾಮುಖ್ಯತೆ ಹಾಗು ಆರು ತಿಂಗಳ ನಂತರ ಪೂರಕ ಆಹಾರದ ಬಗ್ಗೆ ಪಿ ಜಿ ಡಿ ಹೆಚ್ ಪಿ ಇ ಪ್ರಶಿಕ್ಷಣಾರ್ಥಿ ಹಾಗೂ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳಾದ ಖುರ್ಶಿದ್ ಬೇಗಮ್
ವಿವರವಾಗಿ ತಿಳಿಸಿದರು.

ಮಗು ಹುಟ್ಟಿನಿಂದ ಪ್ರೌಢವ್ಯಸ್ತೆಗೆ ಬರುವತನಕ ಯಾವ ಯಾವ ವಯಸ್ಸಿನಲ್ಲಿ ವಿವಿಧ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಮತ್ತು ಕುಟುಂಬ ಕಲ್ಯಾಣದಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ವಿಧಾನಗಳ ಕುರಿತು ಪಿ ಜಿ ಡಿ ಹೆಚ್ ಪಿ ಇ ಪ್ರಶಿಕ್ಷಣಾರ್ಥಿ ಹಾಗೂ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳಾದ ಟಿ ಕೆ ಮಂಜುಳಾ ವಿವರಿಸಿದರು.

ಗ್ರಾಮೀಣ ಜೀವನದ ಹತ್ತು ಹಲವು ಆರೋಗ್ಯವಾಹಿ ಗಿಡಗಳ ಉಪಯೋಗ ಹಾಗೂ ಹಿತ್ತಲಲ್ಲಿ ಈ ರೀತಿಯ ಗಿಡಗಳನ್ನು ಬೆಳೆಸಿ ಎಂದು ಸಪ್ಪು, ಹಣ್ಣು, ತರಕಾರಿಗಳ ಪ್ರಾಮುಖ್ಯತೆ ಕುರಿತು ಸ್ವಾಗತ ಹಾಗೂ ನಿರೂಪಣೆಯ ಜವಾಬ್ದಾರಿ ಹೊತ್ತ ಪಿ ಜಿ ಡಿ ಹೆಚ್ ಪಿ ಇ ಪ್ರಶಿಕ್ಷಣಾರ್ಥಿ ಹಾಗೂ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳಾದ
ರಮೇಶ್ ಕೆ ಎನ್ ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ವೆಂಕಟರಮಣ ರೆಡ್ಡಿ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ವೆಂಕಟೇಶ್ ಹಾಗು ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಪದ್ಮ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶೋಭಾ, ಸಮುದಾಯ ಆರೋಗ್ಯಧಿಕಾರಿ ಶ್ರೀನಿವಾಸ, ಆಶಾ ಕಾರ್ಯಕರ್ತೆ ಭಾರತಿ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಸೇರಿದಂತೆ ಗ್ರಾಮದ ತಾಯಂದಿರು, ಹಿರಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here