BP News Karnataka Super Fast 16-09-2022

0
150

ವಿಮ್ಸ್‍ನಲ್ಲಿ ರೋಗಿಗಳ ಸಾವಿನ ಹಿನ್ನೆಲೆ-ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್


BP News ಬಳ್ಳಾರಿ,ಸೆ.16-ವಿಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಲಭಿಸದೇ, ವೆಂಟಿಲೇಟರ್‍ನಲ್ಲಿದ್ದ ಮೂವರು ರೋಗಿಗಳು ಮೃತ ಪಟ್ಟ ಹಿನ್ನೆಲೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ದಂಗಾದರು.
ವೆಂಟಿಲೇಟರ್ ಇರುವ ಕೊಠಡಿಗಳಲ್ಲಿ ಯಾವುದೇ ಸ್ವಚ್ಛತೆ ಇಲ್ಲ. ಬೆಡ್‍ಷೀಟ್‍ಗಳು ಗಬ್ಬೆದ್ದು ನಾರುತ್ತಿವೆ. ವಾರ್ಡುಗಳಲ್ಲಿ ದುರ್ವಾಸನೆ ತುಂಬಿಕೊಂಡಿದೆ. ವಿವಿಧ ರೋಗಗಳ ಶಮನಕ್ಕಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಪಶುಗಳೋಪಾದಿಯಲ್ಲಿ ಕಾಣುವ ವೈದ್ಯರು ಮತ್ತು ಸಿಬ್ಬಂದಿಗಳ ಹುಚ್ಚಾಟಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್ ಅವರು ಅವ್ಯವಸ್ಥೆಯ ಆಗರವಾಗಿರುವ ವಿಮ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
——-
ಬಿ.ನಾಗೇಂದ್ರ ಜನ್ಮದಿನಾಚರಣೆ ಆಚರಿಸಿದ ಅಭಿಮಾನಿ


BP News ಬಳ್ಳಾರಿ,ಸೆ.16-ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರಿಗೆ ಅಭಿಮಾನಿಗಳ ಸಂಖ್ಯೆ ಕೊರತೆ ಇಲ್ಲ. ಒಂದೊಮ್ಮೆ ಮುಂಗಾರು ಮಳೆ ಗಣೇಶ್ ಎಂದೇ ಖ್ಯಾತರಾಗಿದ್ದ ಬಿ.ನಾಗೇಂದ್ರ ತಮ್ಮ ಹುಟ್ಟುಹಬ್ಬ ಆಚರಣೆಗೆ ತಿರುಪತಿಗೆ ತೆರಳಿದ್ದರೆ, ಇತ್ತ ಅವರ ಅಭಿಮಾನಿಯೊಬ್ಬ ನಗರದೆಲ್ಲೆಡೆ ಬ್ಯಾನರ್ ಹಾಕುವ ಮೂಲಕ ಅಭಿಮಾನ ಮೆರೆದಿದ್ದಾನೆ.
ಆನಂದ್ ಎನ್ನುವ ಅಭಿಮಾನಿ ತನ್ನ ನೆಚ್ಚಿನ ಜನನಾಯಕ ಬಿ.ನಾಗೇಂದ್ರ ಅವರ ಬ್ಯಾನರ್‍ಗಳನ್ನು ನಗರದ ಪ್ರಮುಖ ವೃತ್ತಗಳಾದ ಹೆಚ್ ಆರ್ ಗವಿಯಪ್ಪ ಸರ್ಕಲ್, ಗಾಮಧಿನಗರ, ಅಲ್ಲಿಪುರ, ಸುಧಾ ಕ್ರಾಸ್ ಮತ್ತಿತರೆಡೆಗೆ ಭರ್ಜರಿಯಾಗಿಯೇ ಅಳವಡಿಸಿ ಆರಾಧಿಸುತ್ತಿದ್ದಾನೆ.
——
ವಿದ್ಯಾರ್ಥಿಗಳ ನಿಧಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಸರ್ಕಾರ-ಎಐಡಿಎಸ್‍ಓ ಕಿಡಿ


BP News ಬಳ್ಳಾರಿ,ಸೆ.16-ವಿದ್ಯಾರ್ಥಿಗಳ ಅಭಿವೃದ್ಧಿಗೆ ಮೀಸಲಿಟ್ಟ ನಿಧಿಯನ್ನು ಸರ್ಕಾರವು ತನ್ನ ರಾಜಕೀಯ ಉದ್ದೇಶಕ್ಕಾಗಿ ಬಳಸಬಾರದು. ವಿಜ್ಞಾನ, ವೈಜ್ಞಾನಿಕ ಗಣಿತಶಾಸ್ತ್ರ ವಿದ್ಯಾರ್ಥಿಗಳಿಗೆ ಬೇಕು ಎಂದು ಎಐಡಿಎಸ್‍ಓ ಕಿಡಿ ಕಾರಿದೆ.
ಎಐಡಿಎಸ್‍ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮೀಸಲಾಗಿಟ್ಟಿದ್ದ ಗ್ರಾಮ ಪಂಚಾಯತ್ ನಿಧಿಯನ್ನು, ಸರ್ಕಾರವು ‘ ವೇದಗಣಿತ ‘ ಹೇಳಿಕೊಡಲು ಬಳಕೆ ಮಾಡುವ ನಿರ್ಧಾರ ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
——
ಇಂದಿನ ಇಂಜಿನಿಯರುಗಳಿಗೆ ವಿಶ್ವೇಶ್ವರಯ್ಯ ಆದರ್ಶಪ್ರಾಯರು-ಸಂಜೀವ್ ಪ್ರಸಾದ್


BP News ಬಳ್ಳಾರಿ,ಸೆ.16-ವಿಶ್ವೇಶ್ವರಯ್ಯನವರ ದೂರದರ್ಶಿತ್ವ ಇಂದಿನ ಇಂಜಿನಿಯರ್‍ಗಳಿಗೆ ಆದರ್ಶವಾಗಿದೆ ಎಂದು ಕೆ.ಬಿ ಸಂಜೀವ್ ಪ್ರಸಾದ್ ಹೇಳಿದರು.
ಕ.ಸಾ.ಪ.ಜಿಲ್ಲಾ ಘಟಕದಿಂದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹೊಸ ಆವಿμÁ್ಕರಗಳೊಂದಿಗೆ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇಂಜಿನಿಯರಿಂಗ್ ಕ್ಷೇತ್ರ ವಿಸೃತವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.
—–
ವಿಮ್ಸ್ ಸಾವು ತನಿಖೆಗೆ ಒಳಪಡಿಸಿ-ಸರ್ಕಾರಕ್ಕೆ ಡಿವೈಎಫ್‍ಐ ಆಗ್ರಹ


BP News ಬಳ್ಳಾರಿ,ಸೆ.16-ಬಳ್ಳಾರಿ ಜಿಲ್ಲಾ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ ತುರ್ತು ವಿಭಾಗದಲ್ಲಿನ ರೋಗಿಗಳು ಸಾವುನಪ್ಪಿರುವ ಘಟನೆಯನ್ನು ತನಿಖೆಗೆ ಒಳಪಡಿಸಿ ಹೊಸ ಜನರೇಟರುಗಳನ್ನು ಖರೀದಿಸಿ ವಿದ್ಯುತ್ ಸಮರ್ಪಕವಾಗಿ ಪೂರೈಸುವಂತೆ ಡಿವೈಎಫ್‍ಐ ಸರ್ಕಾರವನ್ನು ಆಗ್ರಹಿಸಿದೆ.
ಹೊಸ ಜನರೇಟರುಗಳನ್ನು ಖರೀದಿ ಮಾಡಿ ಇದಕ್ಕೆ ಸಮರ್ಪಕವಾಗಿ ವಿದ್ಯುತ್ ನ್ನು ಪೂರೈಸಬೇಕಲ್ಲದೆ, ಕಟ್ಟಡವನ್ನು ದುರಸ್ಥಿ ಮಾಡಲು ಈ ಕೂಡಲೇ ಕ್ರಮವಹಿಸಿ ಹೊರ ಹಾಗೂ ಒಳ ರೋಗಿಗಳಿಗೆ ಸುರಕ್ಷತೆ ನೀಡಬೇಕೆಂದು ಡಿವೈಎಫ್‍ಐನ ಯು ಎರ್ರಿಸ್ವಾಮಿ, ಶಂಕರ್ ಗೌಡ, ವೆಂಕಟೇಶ್, ಬೈಲಾ ಹನುಮಂತ, ಬಿ ಪಿ ನವೀನ್ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳ ಮೂಲಕ ಒತ್ತಾಯಿಸಿದರು.
——

ಮಂಡ್ಯದಲ್ಲಿ ಸೆ.19ರಂದು ರೈತರ ಬೃಹತ್ ಸಮಾವೇಶ-ಚಾಮರಸ ಮಾಲಿಪಾಟೀಲ್


BP News ಬಳ್ಳಾರಿ,ಸೆ.16-ರೈತರ ವಿರುದ್ಧದ ಧೋರಣೆಗಳನ್ನು ತಾಳಿರುವ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇದೇ ಸೆ.19 ರಂದು ಮಂಡ್ಯದಲ್ಲಿ ರಾಜ್ಯಮಟ್ಟದ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚಾಮರಸ ಮಾಲಿಪಾಟೀಲ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಉಚಿತ ವಿದ್ಯುತ್ ಪೂರೈಕೆ ಇದ್ದರೂ ರೈತರು ಬೆಳೆ ಬೆಳೆದು ಅಪಾರ ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಬೊಮ್ಮಾಯಿ ಸರ್ಕಾರ ರೈತರ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಹೊರಟಿರುವುದು ನಾಚಿಕೆಗೇಡಿನ ವಿಷಯ. ಒಂದುವೇಳೆ ಸ್ಮಾರ್ಟ್ ಮೀಟರ್ ಅಳವಡಿಸಲು ಹೊರಟರೆ ರಾಜ್ಯದ 45 ಲಕ್ಷ ಪಂಪ್‍ಸೆಟ್ ಹೊಂದಿರುವ ರೈತರೊಂದಿಗೆ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
——
ವಿಮ್ಸ್ ಸರಣಿ ಸಾವು-ಸಚಿವರು ಶಾಸಕರು ರಾಜೀನಾಮೆಗೆ ಆಮ್ ಆದ್ಮಿ ಪಾರ್ಟಿ ಒತ್ತಾಯ


BP News ಬಳ್ಳಾರಿ,ಸೆ.16-ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊರರೋಗಿಗಳ ಆಸ್ಪತ್ರೆಯಲ್ಲಿ ರೋಗಿಗಳ ಸರಣಿ ಸಾವುಗಳಿಗೆ ಕಾರಣರಾಗಿರುವ ಸಚಿವರು, ಶಾಸಕರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಷ್ಟೆಲ್ಲ ಹಗರಣಗಳು, ಪ್ರಕರಣಗಳು ನಡೆಯುತ್ತಿದ್ದರೂ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷ ಕಣ್ಣಿದ್ದರೂ ಕುರುಡಾಗಿದೆ. ಯಾವುದೇ ಹೋರಾಟ, ಪ್ರತಿಭಟನೆ ನಡೆಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಧುರೀಣರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಅನಿಲ್ ಲಾಡ್ ಇವರೆಲ್ಲ ಏನು ಮಾಡುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.
——

 

LEAVE A REPLY

Please enter your comment!
Please enter your name here