ವಿಮ್ಸ್ ನಲ್ಲಿ ಮೂವರ ಸಾವಿನ ಹಿನ್ನೆಲೆ-ನಾರಾ ಭರತ್ ರೆಡ್ಡಿ ಖಂಡನೆ

0
621

 

ಬಳ್ಳಾರಿ,ಸೆ.15-ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿನ್ನೆ ವಿದ್ಯುತ್ ಕೈಕೊಟ್ಟು, ಜನರೇಟರ್ ಕೆಲಸ ಮಾಡದೆ ಇರುವ ಪರಿಣಾಮ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ ಮೂವರು ಮೃತಪಟ್ಟಿದ್ದು ಜಿಪಂ ಮಾಜಿ ಸದಸ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಟಚ್ ಫಾರ್ ಲೈಫ್ ಫೌಂಡೇಶನ್ ಸಂಸ್ಥಾಪಕ ನಾರಾ ಭರತ್ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುವ ಒಂದು ಜಿಲ್ಲಾಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಮತ್ತು ಅದಕ್ಕೆ ಪರ್ಯಾಯವಾಗಿರುವ ಜನರೇಟರ್ ಕೆಲಸ ಮಾಡಿಲ್ಲ ಅಂದರೆ ಇದು ಆರೋಗ್ಯ ಇಲಾಖೆಗೆ ನಾಚಿಕೆಗೇಡಿನ ಸಂಗತಿ. ಇದರಿಂದ ನಿಗಾ ಘಟಕದಲ್ಲಿದ್ದ ಮೂವರು ಜನ ಮೃತರಾದರು. ಈ ಸಂಬಂಧ ವಿಮ್ಸ್ ಅಧಿಕಾರಿಗಳು ಸಹ ಯಾವುದೇ ಜವಾಬು ನಿಡುತ್ತಿಲ್ಲ. ಅಂದರೆ ಇಲ್ಲಿರುವ ಅಧಿಕಾರಿಗಳ ಕಾರ್ಯವೈಖರಿ ಮತ್ತು ಇವರನ್ನು ಗಮನಿಸಬೇಕಾದ ಆರೋಗ್ಯ ಇಲಾಖೆ ಮಂತ್ರಿಗಳು ಸೇರಿ ಜನಸಾಮಾನ್ಯರ ಪ್ರಾಣದ ಜೋತೆ ಚೆಲ್ಲಾಟ ಆಡುತ್ತಿದ್ದಾರೆ ಎಂಬುವುದು ಕಾಣುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸದ್ದಾರೆ.


ಸರ್ಕಾರದಿಂದ ಕೋಟಿ ಗಟ್ಟಲೆ ಹಣವನ್ನು ಮಂಜೂರು ಮಾಡಿಸಿ ತಂದು, ಐಸಿಯುನಲ್ಲಿದ ಜನರೇಟರ್ ಅನ್ನು ಸಹ ವ್ಯವಾಸ್ತಿತವಾಗಿ ನಿಭಾಯಿಸುತ್ತಿಲ್ಲ, ಅಂದರೆ ಇಲ್ಲಿಯೂ 40% ಸರ್ಕಾರ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.
ಈ ಘಟನೆ ಸಂಬಂಧ ಯಾರು ತಪ್ಪಿತಸ್ಥರೋ ಅವರನ್ನು ಕೂಡಲೇ ಅಮಾನತು ಮಾಡಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಹಾಗೂ ಮೃತರಾದವಾರಿಗೆ ಪರಿಹಾರ ನೀಡಬೇಕು ಮತ್ತು ಇಂತಹಾ ಘಟನೆಗಳು ಮರುಕಳಿಸದಂತೆ ನೊಡಿಕೋಳ್ಳಬೇಕು ಎಂದೂ ಆವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
——

 

LEAVE A REPLY

Please enter your comment!
Please enter your name here